ETV Bharat / state

ಅಣುಬಾಂಬ್​ನ ರಾಸಾಯನಿಕ ಬೂದಿಗಿಂತಲೂ 'ಮನುಸಂಸ್ಕೃತಿ' ಕೆಟ್ಟದ್ದು: ಕೆ.ಆರ್‌.ರಮೇಶ್ ಕುಮಾರ್

author img

By

Published : Mar 18, 2021, 9:05 PM IST

ಇಸ್ಲಾಮಿಕ್ ಜಗತ್ತಿನಲ್ಲಿ ಹಂದಿ ತಿನ್ನಲ್ಲ. ಕ್ರಿಶ್ಚಿಯನ್ ಜಗತ್ತಿನಲ್ಲಿ ಹಂದಿನೂ ತಿಂತಾರೆ, ಬೀಫೂ ತಿಂತಾರೆ. ನಾವು ಬೀಫ್ ರಪ್ತು ಮಾಡಿದ್ರೆ ಲಾಭ ಆಗುತ್ತಲ್ವಾ? ಎಂದು ಶಾಸಕ ರಮೇಶ್ ಕುಮಾರ್​ ಪ್ರಶ್ನಿಸಿದ್ದಾರೆ.

mla-ramesh-kumar-talks-about-budget-in-asssembly
ರಮೇಶ್ ಕುಮಾರ್

ಬೆಂಗಳೂರು: ಮನುಸಂಸ್ಕೃತಿ ಅಣುಬಾಂಬ್​ನ ರಾಸಾಯನಿಕ ಬೂದಿಗಿಂತಲೂ ಕೆಟ್ಟದ್ದು ಎಂದು ಶಾಸಕ ರಮೇಶ್ ಕುಮಾರ್ ಕಿಡಿ ಕಾರಿದರು.

ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡುತ್ತಾ, ಕೆಮಿಕಲ್ ಬಾಂಬ್​ನ ಅಣು ವಿಕಿರಣ 25 ಸಾವಿರ ವರ್ಷದವರೆಗೆ ಇರುತ್ತದೆ. ಹಿರೋಷಿಮಾ, ನಾಗಸಾಕಿಯಲ್ಲಿ ಅಣು ವಿಕಿರಣ ಹೇಗೆ ಆಗಿದೆಯೋ, ಅದೇ ರೀತಿ ಮನುಸಂಸ್ಕೃತಿಯ ಪರಿಣಾಮವೂ ಕೂಡಾ ಎಂದ ಅವರು, ಜನರಿಗೆ ಅನುಕೂಲವಾಗುವಂತೆ ಮಾಡೋದು ಜನಸಂಸ್ಕೃತಿ. ಆದ್ರೆ ಮನು ಸಂಸ್ಕೃತಿ ಅಣುಬಾಂಬಿನ ರಾಸಾಯನಿಕ ಪರಿಣಾಮ‌ ಇದ್ದಂತೆ ಎಂದು ಟೀಕಿಸಿದರು.

ಇದೇ ವೇಳೆ ಗೋಹತ್ಯೆ ತಡೆ ಕಾಯ್ದೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಹಸು ಹೆಣ್ಣು ಕರು ಹಾಕಿದ್ರೆ, ಒಂದೂವರೆ ವರ್ಷದಲ್ಲಿ‌ ಆ ಹೆಣ್ಣು ಕರು ಲಾಭ ತರುತ್ತದೆ. ಆದರೆ ಹೋರಿ ಹುಟ್ಟಿದ್ರೆ ಖರ್ಚು ಯಾರು ಕೊಡ್ತಾರೆ‌ ನನಗೆ?. ನೀವು ಪೂಜೆ ಮಾಡ್ಕೊಳ್ಳಿ, ನನ್ನ ಆಕ್ಷೇಪ ಇಲ್ಲ. ಆದ್ರೆ ಇದು ಹಸುವಿನ‌ ರಾಜಕಾರಣ ಅಷ್ಟೇ. ಆಹಾರ ಪದ್ಧತಿ ಬೇರೆ ಬೇರೆ ಇರುತ್ತದೆ. ಊರುಗಳಲ್ಲಿ ದನ ಸತ್ತೋದ್ರೆ ಎತ್ತೋಕೆ ಯಾರು ಬರ್ತಾರೆ?. ಊರಿಂದ ಹೊರಗೆ ಯಾರನ್ನಿಟ್ಟಿದ್ದಿರಿ ಅವರೇ ಬರಬೇಕು ಎಂದು ತಿಳಿಸಿದರು.

ಶಾಸಕ ರಮೇಶ್ ಕುಮಾರ್​

ಇದನ್ನೂ ಓದಿ: ಸರ್ಕಾರಿ ಶಾಲೆಗಳಲ್ಲಿ ಖಾಲಿಯಿರುವ 3,590 ಶಿಕ್ಷಕ ಹುದ್ದೆಗಳ ಭರ್ತಿಗೆ ನಿರ್ಧಾರ: ಸಚಿವ ಸುರೇಶ್ ಕುಮಾರ್

ಪೂಜೆ ಮಾಡಲು ನೀವು, ಸತ್ತ ದನ ಎತ್ತಲು ಅವ್ರಾ?. ಇದ್ಯಾವ ನ್ಯಾಯ, ಯೋಚನೆ ಮಾಡಿ. ಯಾವುದಾದ್ರೂ ಊರಲ್ಲಿ ಮಲ ಹೊರೋದಕ್ಕೆ ದಲಿತರು ಬಿಟ್ಟು ಬೇರೆಯವರು ಬರ್ತಾರಾ?. ಅನುಪಯುಕ್ತ ಗಂಡು ಕರುಗಳ ಬಗ್ಗೆ ನಿಮಗೆ ಸ್ಪಷ್ಟತೆ ಇರಬೇಕು. ಇಸ್ಲಾಮಿಕ್ ಜಗತ್ತಿನಲ್ಲಿ ಹಂದಿ ತಿನ್ನಲ್ಲ. ಕ್ರಿಶ್ಚಿಯನ್ ಜಗತ್ತಿನಲ್ಲಿ ಹಂದಿನೂ ತಿಂತಾರೆ, ಬೀಫೂ ತಿಂತಾರೆ. ನಾವು ಬೀಫ್ ರಪ್ತು ಮಾಡಿದ್ರೆ ಲಾಭ ಆಗುತ್ತಲ್ವಾ ಎಂದು ಪ್ರಶ್ನಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.