ETV Bharat / state

ಸೋತವರ ಬದಲು ಗೆದ್ದವರಿಗೆ ಸಚಿವ ಸ್ಥಾನ ಕೊಟ್ಟರೆ ಉತ್ತಮ : ಶಾಸಕ ರಾಜು ಗೌಡ

author img

By

Published : Nov 28, 2020, 5:11 PM IST

ಯೋಗೇಶ್ವರ್ ಆಸ್ತಿ ನಾವು ತಗೊಂಡಿಲ್ಲ. ನಮ್ಮ ಆಸ್ತಿ ಯೋಗೇಶ್ವರ್ ತಗೊಂಡಿಲ್ಲ. ಯೋಗೇಶ್ವರ್ ಮೇಲೆ ನಮಗೆ ದ್ವೇಷ ಇಲ್ಲ. ಆದರೆ, ಸೋತವರಿಗೆ ಸಚಿವ ಸ್ಥಾನ ಕೊಡೋದು ಬೇಡ. ಯೋಗೇಶ್ವರ್ ಮೇಲೆ ರಮೇಶ್ ಜಾರಕಿಹೊಳಿ ಪ್ರೀತಿ ಇದೆ ಅಂತಾ ಗೊತ್ತಿಲ್ಲ. ಹೆಚ್. ವಿಶ್ವನಾಥ್, ಎಂಟಿಬಿ, ಆರ್‌ ಶಂಕರ್ ಅವರಿಗೆ ಕೊಟ್ಟರೇ ಏನೂ ಬೇಸರ ಇಲ್ಲ..

MLA Raju gowda
ಶಾಸಕ ರಾಜು ಗೌಡ

ಬೆಂಗಳೂರು : ಸೋತವರಿಗೆ ಸಚಿವ ಸ್ಥಾನ ಕೊಡುವುದು ಬೇಡ ಅಂತಾ ಸಿಎಂಗೆ ಮನವಿ ಮಾಡಿದ್ದೇವೆ. ಸೋತವರ ಬದಲು ಶಾಸಕರಿಗೆ ಸಚಿವ ಸ್ಥಾನ ಕೊಡಿ ಎಂದಿದ್ದೇವೆ ಎಂದು ಶಾಸಕ ರಾಜು ಗೌಡ ತಿಳಿಸಿದರು.

ಶಾಸಕ ರಾಜು ಗೌಡ

ಸಚಿವ ರಮೇಶ್ ಜಾರಕಿಹೊಳಿಯನ್ನು ಭೇಟಿ ಮಾಡಿ ಬಳಿಕ ಮಾತನಾಡಿದ ಅವರು, ಎಂಟಿಬಿ, ವಿಶ್ವನಾಥ್, ಶಂಕರ್ ಪಕ್ಷಕ್ಕೆ ತ್ಯಾಗ ಮಾಡಿ ಬಂದವರು. ಈ ಮೂವರಿಗೂ ಸಚಿವ ಸ್ಥಾನ ಕೊಡಲಿ, ನಮ್ಮ ಆಕ್ಷೇಪ ಇಲ್ಲ. ಆದರೆ, ಯೋಗೇಶ್ವರ್ ವಿಚಾರದಲ್ಲಿ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ.

ಯೋಗೇಶ್ವರ್​ಗೆ ಮಂತ್ರಿ ಮಾಡೆ ಮಾಡ್ತೀವಿ ಅಂದರೆ ಮಾಡಲಿ. ಆದರೆ, ಹೈಕಮಾಂಡ್, ಸಿಎಂ ನಿರ್ಧಾರಕ್ಕೆ ಬದ್ಧ. ಆದರೆ, ಸೋತವರ ಬದಲು ಗೆದ್ದವರಿಗೆ ಕೊಟ್ಟರೆ ಉತ್ತಮ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ಯೋಗೇಶ್ವರ್ ಆಸ್ತಿ ನಾವು ತಗೊಂಡಿಲ್ಲ. ನಮ್ಮ ಆಸ್ತಿ ಯೋಗೇಶ್ವರ್ ತಗೊಂಡಿಲ್ಲ. ಯೋಗೇಶ್ವರ್ ಮೇಲೆ ನಮಗೆ ದ್ವೇಷ ಇಲ್ಲ. ಆದರೆ, ಸೋತವರಿಗೆ ಸಚಿವ ಸ್ಥಾನ ಕೊಡೋದು ಬೇಡ. ಯೋಗೇಶ್ವರ್ ಮೇಲೆ ರಮೇಶ್ ಜಾರಕಿಹೊಳಿ ಪ್ರೀತಿ ಇದೆ ಅಂತಾ ಗೊತ್ತಿಲ್ಲ. ಹೆಚ್. ವಿಶ್ವನಾಥ್, ಎಂಟಿಬಿ, ಆರ್‌ ಶಂಕರ್ ಅವರಿಗೆ ಕೊಟ್ಟರೇ ಏನೂ ಬೇಸರ ಇಲ್ಲ.

ನಾವು ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದೇವೆ. ಯೋಗೇಶ್ವರ್ ಅವರಿಗೆ ಕೊಟ್ಟರೆ, ಬಾಬುರಾವ್ ಚಿಂಚನಸೂರ್, ಮಾಲೀಕಯ್ಯ ಗುತ್ತೆದಾರ್ ಅವರಿಗೂ ಸಚಿವ ಸ್ಥಾನ ಕೊಡಲಿ. ಅವರು ಕೂಡ ಕಷ್ಟ ಪಟ್ಟಿದ್ದಾರೆ. ಆದರೂ ಸೋತರು ಎಂದು ತಿಳಿಸಿದರು.

ಬಿಜೆಪಿಗೆ ಒಂದೇ ಪವರ್ ಸೆಂಟರ್ : ರಮೇಶ್ ಜಾರಕಿಹೊಳಿ ಪರ್ಯಾಯ ಪವರ್ ಸೆಂಟರ್ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಲ್ಲಿ ಪವರ್ ಸೆಂಟರ್ ಅನ್ನೋ ಪ್ರಶ್ನೆ ಇಲ್ಲ. ಬಿಜೆಪಿಯಲ್ಲಿ ಒಂದೇ ಪವರ್ ಸೆಂಟರ್ ಇರೋದು. ಅದು ಯಡಿಯೂರಪ್ಪ, ರಾಜ್ಯಾಧ್ಯಕ್ಷರು ಇವರಿಬ್ಬರು ಬಿಟ್ಟರೆ ನಮ್ಮಲ್ಲಿ ಬೇರೆ ಪವರ್ ಸೆಂಟರ್ ಇಲ್ಲ ಎಂದು ಸ್ಪಷ್ಟಪಡಿಸಿದರು.

ಪಕ್ಷದಲ್ಲಿ ನಾವೆಲ್ಲ ಒಂದೇ : ಪಕ್ಷದಲ್ಲಿ ನಾವೆಲ್ಲ ಒಂದೇ.. ಹೊಸಬರು, ಹಳಬರು ಬೇಧ ಇಲ್ಲ. ನಮ್ಮಲ್ಲಿ ಗುಂಪುಗಾರಿಕೆ ಇಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ರಮೇಶ್ ಜಾರಕಿಹೊಳಿ ವಿರುದ್ಧ ಪ್ರತ್ಯೇಕ ಸಭೆ ಸಂಬಂಧ ಪ್ರತಿಕ್ರಿಯಿಸುತ್ತ, ನಿನ್ನೆ ಅವರೆಲ್ಲ ಔತಣಕೂಟಕ್ಕೆ ಸೇರಿದ್ದಿರಬಹುದು. ಆದರೆ, ಪಕ್ಷಕ್ಕೆ ಬಂದವರಿಗೆ ಸಿಎಂ ಕೊಟ್ಟ ಮಾತು ಈಡೇರಿಸುತ್ತಿದ್ದಾರೆ. ಯಾರಿಗೂ ಅಸಮಾಧಾನ ಅನ್ನೋದು ಇಲ್ಲ.

ಏನೇ ಇದ್ದರೂ ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ನಡೆಯುತ್ತದೆ. ರಮೇಶ್ ಜಾರಕಿಹೊಳಿ ನೇರ ಮಾತನಾಡುತ್ತಾರೆ. ದೆಹಲಿಯಲ್ಲಿ ಏನ್ ಮಾತನಾಡುತ್ತಾರೋ, ಇಲ್ಲೂ ಅದೇ ಮಾತಾಡ್ತಾರೆ. ಅವರವರ ಮಧ್ಯೆ ಏನಿದೆಯೋ ಗೊತ್ತಿಲ್ಲ ಎಂದು ತಿಳಿಸಿದರು. ಡಿಕೆಶಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಡಿಕೆಶಿಯವರು ಯಾರ ಹೆಸರು ಹೇಳಿದ್ದಾರೋ ಬಹಿರಂಗ ಪಡಿಸಲಿ. ಯಾರ ಹೆಸರು ಅಂತಾ ಡಿಕೆಶಿಯವರು ಸ್ಪಷ್ಟವಾಗಿ ಹೇಳಲಿ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.