ETV Bharat / state

ವಿಧಾನಸಭೆಯ ಪೂರ್ಣಾವಧಿ ಕಾರ್ಯದರ್ಶಿಯಾಗಿ ಮುಂಬಡ್ತಿ ಪಡೆದ ಎಂ.ಕೆ.ವಿಶಾಲಾಕ್ಷಿ

author img

By

Published : Jul 8, 2022, 11:35 AM IST

ವಿಧಾನಸಭೆಯ ಕಾರ್ಯದರ್ಶಿ ಹುದ್ದೆಯಲ್ಲಿ 2019ರಿಂದ ಈ ವರೆಗೆ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಂ.ಕೆ.ವಿಶಾಲಾಕ್ಷಿ ಅವರಿಗೆ ಪೂರ್ಣಾವಧಿ ಕಾರ್ಯದರ್ಶಿಯಾಗಿ ಮುಂಬಡ್ತಿ ನೀಡಲಾಗಿದೆ.

m.k.vishalakshi promoted as a full time assembly secretary
ವಿಧಾನಸಭೆಯ ಪೂರ್ಣಾವಧಿ ಕಾರ್ಯದರ್ಶಿಯಾಗಿ ಎಂ.ಕೆ.ವಿಶಾಲಾಕ್ಷಿ ಮುಂಬಡ್ತಿ

ಬೆಂಗಳೂರು: ಕರ್ನಾಟಕ ವಿಧಾನಸಭೆಯ ಪೂರ್ಣಾವಧಿ ಕಾರ್ಯದರ್ಶಿಯಾಗಿ ಎಂ.ಕೆ.ವಿಶಾಲಾಕ್ಷಿ ಅವರಿಗೆ ಮುಂಬಡ್ತಿ ನೀಡಿ ಅಧಿಸೂಚನೆ ಹೊರಡಿಸಲಾಗಿದೆ. ಕರ್ನಾಟಕ ವಿಧಾನಸಭೆ ಕಾರ್ಯದರ್ಶಿ ಹುದ್ದೆಯಲ್ಲಿ 2019ರಿಂದ ಈವರೆಗೆ ಪ್ರಭಾರಿಯಾಗಿ ಇವರು ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಮುಂಚೆ ಕಾರ್ಯದರ್ಶಿಯಾಗಿದ್ದ 2016 ಮತ್ತು 2017ರ ಅವಧಿಯಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ವಿಧಾನಮಂಡಲ ಅಧಿವೇಶನ ಸಮಯದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಆರೋಪ ಕೇಳಿ ಬಂದಿತ್ತು. ಪ್ರಕರಣದಲ್ಲಿ ಎಸ್.ಮೂರ್ತಿಯವರನ್ನು 2018ರಲ್ಲಿ ಸೇವೆಯಿಂದ ಅಮಾನತು ಮಾಡಿ, ಎಂ.ಕೆ.ವಿಶಾಲಾಕ್ಷಿಯನ್ನು ಪ್ರಭಾರಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು.

ಇದನ್ನೂ ಓದಿ: ರಾಜ್ಯಸಭೆಗೆ ನಾಮನಿರ್ದೇಶನ ಮಿಷನ್ ದಕ್ಷಿಣದ ಭಾಗವಲ್ಲ, ಗುಣಾತ್ಮಕ ಬದಲಾವಣೆಯ ಕಲ್ಪನೆ: ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.