ETV Bharat / state

ಒಳಮೀಸಲಾತಿ: ಕಾಂಗ್ರೆಸ್‌ನಿಂದ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ- ಸಚಿವ​ ಅಶೋಕ್​

author img

By

Published : Dec 14, 2022, 6:02 PM IST

ಒಳಮೀಸಲಾತಿಗೆ ಉಪಸಮಿತಿ ರಚನೆ ವಿಚಾರವಾಗಿ ಸಚಿವ ಆರ್​ ಅಶೋಕ್​ ಮಾತನಾಡಿದರು.

Minister R Ashok speak about the reservation
ಕಂದಾಯ ಸಚಿವ ಆರ್ ಅಶೋಕ್ ತಿರುಗೇಟು

ಕಾಂಗ್ರೆಸ್‌ಗೆ ಕಂದಾಯ ಸಚಿವ ಆರ್ ಅಶೋಕ್ ತಿರುಗೇಟು

ಬೆಂಗಳೂರು: ಒಳಮೀಸಲಾತಿ ವಿಚಾರವಾಗಿ ಉಪಸಮಿತಿ ರಚನೆ ಮಾಡಲಾಗಿದೆ. ಆದರೆ, ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಕಾಂಗ್ರೆಸ್​ನವರು ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿರುಗೇಟು ನೀಡಿದರು.

ವಿಧಾನಸೌಧದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಪ್ರಾಮಾಣಿಕತೆ ಇಲ್ಲ. ಇಷ್ಟು ದಿನ ವರದಿಯನ್ನು ಕಾಂಗ್ರೆಸ್​ನವರು ಮೂಲೆಗುಂಪು ಮಾಡಿದ್ದರು. ದಲಿತರ ಬಗ್ಗೆ ಈಗ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಸರ್ಕಾರ ಎಲ್ಲ ಸಮುದಾಯದವರನ್ನು ಒಂದೇ ರೀತಿ ನೋಡಬೇಕು: ಷಡಕ್ಷರಿ ಮುನಿ‌ಶ್ರೀ

ಒಳಮೀಸಲಾತಿಗೆ ಸಮಿತಿ ಮಾಡಿ ಆ ಜನಾಂಗಕ್ಕೆ ನ್ಯಾಯ ಕೊಡುವ ತೀರ್ಮಾನ ಸಿಎಂ ಬಸವರಾಜ ಬೊಮ್ಮಾಯಿ ಮಾಡಿದ್ದಾರೆ. ಅದಕ್ಕೆ ಅವರನ್ನು ಅಭಿನಂದಿಸುತ್ತೇನೆ. ಬಿಜೆಪಿ ಬಗ್ಗೆ ದಲಿತರಿಗೆ ನಂಬಿಕೆಯಿದೆ. ಸಂಪುಟ ಉಪಸಮಿತಿ ಆದ ಮೇಲೆ ಸದನಕ್ಕೆ ಬರಬೇಕು. ಅದು ಪ್ರೊಸೀಜರ್. ಕಾನೂನು ಬಗ್ಗೆ ಅಷ್ಟೂ ತಿಳುವಳಿಕೆ ಇಲ್ವಾ?, ಈಗಾಗಲೇ ಜನರಿಗೆ ಅರ್ಥವಾಗಿದೆ. ದಲಿತರಿಗೆ ಮೀಸಲಾತಿ ಯಾಕೆ ಕೊಟ್ಟಿಲ್ಲ?. ಕಾಂಗ್ರೆಸ್‌ನವರಿಗೆ ಹೊಟ್ಟೆಯಲ್ಲಿ ಹಸಿಮೆಣಸಿನಕಾಯಿ ಇಟ್ಟುಕೊಂಡಂತಾಗಿದೆ ಎಂದು ಟಾಂಗ್ ಕೊಟ್ಟರು.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಕಚೇರಿಗಳನ್ನು ಮಾಡಬೇಕು. ಅದರಲ್ಲಿ ವಾಚನಾಲಯ, ಲೈಬ್ರರಿ, ವಿಶ್ರಾಂತಿ ಕೊಠಡಿ ಮತ್ತಿತರ ಸೌಲಭ್ಯ ಕಲ್ಪಿಸುವ ಉದ್ದೇಶವಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಜಿಲ್ಲಾ ಕಚೇರಿ ಉದ್ಘಾಟನೆಗೆ ಬರಲಿದ್ದಾರೆ. ನಂತರ ಎಲ್ಲಾ ಸಚಿವರು ಜಿಲ್ಲೆಗಳಿಗೆ ತೆರಳಿ ಕಚೇರಿಗಳ ಉದ್ಘಾಟನೆ ಮಾಡಲಿದ್ದಾರೆ ಎಂದು ಸಚಿವರು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.