ETV Bharat / state

ಹೊರಟ್ಟಿ ಎಂಬ ಶಬರಿ ಶಾಪ, ಬಿಜೆಪಿ ಎಂಬ ರಾಮಚಂದ್ರನಿಂದ ವಿಮೋಚನೆ- ಹೆಚ್‌ ವಿಶ್ವನಾಥ್

author img

By

Published : Feb 9, 2021, 5:44 PM IST

Updated : Feb 9, 2021, 7:56 PM IST

7 ಬಾರಿ ಶಿಕ್ಷಕರ‌ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಶಿಕ್ಷಕರನ್ನು ಸಮಾಧಾನ ಮಾಡಿಕೊಂಡು ಅವರ ಮನಸ್ಸನ್ನು ಗೆದ್ದು ಆಯ್ಕೆಯಾಗಿರುವುದು ದೊಡ್ಡ ಸಾಧನೆ. ಶಿಕ್ಷಣ ಸಚಿವರಾಗಿದ್ದಾಗ ಉತ್ತಮ ಕೆಲಸ ಮಾಡಿದರು, ಸರ್ಕಾರ ಯಾವುದೇ ಇರಲಿ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಕೆಲಸದಲ್ಲಿ ಎಂದೂ ಹಿಂದುಳಿಯಲಿಲ್ಲ..

minister-jagadish-shetter-talk
ಸಚಿವ ಶೆಟ್ಟರ್

ಬೆಂಗಳೂರು : ದೇಶದಲ್ಲಿ ಜನತಾ ಪರಿವಾರದ ವಿಭಜನೆಯಿಂದ ಬಿಜೆಪಿಗೆ ಲಾಭವಾಯಿತು. ರಾಜ್ಯದಲ್ಲಿಯೂ ನಮಗೆ ರಾಜಕೀಯವಾಗಿ ಬೆಳೆಯಲು ಸಹಕಾರಿಯಾಯಿತು ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಓದಿ: ಸಿಐಎಯ ಕಳೆದುಹೋದ ಅಣು ಸಾಧನ ಚಮೋಲಿ ದುರಂತಕ್ಕೆ ಕಾರಣವಾಯಿತೇ?

ವಿಧಾನ ಪರಿಷತ್‌ನಲ್ಲಿ ನೂತನ ಸಭಾಪತಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ಹೊರಟ್ಟಿ ಅವರ ಜನಪ್ರಿಯತೆ ಹೇಗಿದೆ ಎಂದರೆ ನಮಗೆ ಅಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. ಅಷ್ಟು ಕಾರ್ಯಕ್ಷಮತೆ ಅವರಲ್ಲಿ ಇದೆ.

ಆ ಕ್ಷೇತ್ರಗಳಲ್ಲಿ ವಿಧಾನಸಭೆ ಚುನಾವಣೆಯಲ್ಲಿ ನಮಗೆ ಮತ ನೀಡುವ ಜನ ಪರಿಷತ್‌ನಲ್ಲಿ ಹೊರಟ್ಟಿಗೆ ಬೆಂಬಲ ನೀಡುತ್ತಾರೆ. ಇದನ್ನು ಮತದಾರರು ನೇರವಾಗಿಯೇ ಹೇಳಿದ್ದಾರೆ. ಇದು ಹೊರಟ್ಟಿ ಅವರ ಜನಮನ್ನಣೆ, ಕ್ರಿಯಾಶೀಲತೆಗೆ ಹಿಡಿದ ಕೈಗನ್ನಡಿಯಾಗಿದೆ.

7 ಬಾರಿ ಶಿಕ್ಷಕರ‌ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಶಿಕ್ಷಕರನ್ನು ಸಮಾಧಾನ ಮಾಡಿಕೊಂಡು ಅವರ ಮನಸ್ಸನ್ನು ಗೆದ್ದು ಆಯ್ಕೆಯಾಗಿರುವುದು ದೊಡ್ಡ ಸಾಧನೆ. ಶಿಕ್ಷಣ ಸಚಿವರಾಗಿದ್ದಾಗ ಉತ್ತಮ ಕೆಲಸ ಮಾಡಿದರು, ಸರ್ಕಾರ ಯಾವುದೇ ಇರಲಿ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಕೆಲಸದಲ್ಲಿ ಎಂದೂ ಹಿಂದುಳಿಯಲಿಲ್ಲ.

ರಾಜಕಾರಣಿಗಳು ಟ್ರಸ್ಟ್ ಮಾಡಿಕೊಂಡು ಅವರ ಶಾಲೆ ಅಭಿವೃದ್ಧಿ ಮಾಡುತ್ತಾರೆ. ಆದರೆ, ಹೊರಟ್ಟಿ ಸರ್ಕಾರಿ ಶಾಲೆ ಅಭಿವೃದ್ಧಿ ಮಾಡಿದರು ಎಂದು ಗುಣಗಾನ ಮಾಡಿದರು. ಅವ್ವ ಎನ್ನುವ ಟ್ರಸ್ಟ್ ಮೂಲಕ ಸಾಧಕರಿಗೆ ಸನ್ಮಾನ ಮಾಡುತ್ತಿದ್ದಾರೆ. ಇದು ಮಾದರಿಯಾಗಿದೆ. ಜೆಡಿಎಸ್‌ನಲ್ಲಿ ಇದ್ದರೂ ಅವರು ಪಕ್ಷಾತೀತವಾಗಿ ನಡೆದುಕೊಳ್ಳುತ್ತಿದ್ದಾರೆ, ಯಾರೊಂದಿಗೂ ವೈಷಮ್ಯದಿಂದ ಇಲ್ಲ ಎಂದರು.

ಇಡೀ ದೇಶದಲ್ಲಿ ಜನತಾ ಪರಿವಾರ ಒಂದಾಗಿದ್ದರೆ ಬಿಜೆಪಿಗೆ ಸ್ಕೋಪ್ ಸಿಗುತ್ತಿರಲಿಲ್ಲ. ರಾಜ್ಯದಲ್ಲಿಯೂ ಹೆಗಡೆ, ಬೊಮ್ಮಾಯಿ, ದೇವೇಗೌಡ ಒಂದಾಗಿದ್ದರೆ ನಮಗೆ ಸ್ಕೋಪ್ ಸಿಗುತ್ತಿರಲಿಲ್ಲ. ಜನತಾ ಪರಿವಾರದ ವಿಭಜನೆಯಿಂದಾಗಿ ಅಲ್ಲಿನ ನಾಯಕರು ನಮ್ಮ ಪಕ್ಷದ ಕಡೆ ಬಂದರು. ಅಂದು ಕೂಡ ಪಕ್ಷ ವಿಭಜನೆ ವೇಳೆ ಎಲ್ಲರನ್ನೂ ಕೂಡಿಸಿ ಮಾತುಕತೆ ಮಾಡಿದರು. ಆದರೆ, ಅದು ಸಫಲವಾಗಲಿಲ್ಲ. ಇದರಿಂದ ನಾವು ಬೆಳೆಯಲು ಅನುಕೂಲವಾಯಿತು ಎಂದರು.

ನೂತನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರ ಕುರಿತು ಸಚಿವ ಶೆಟ್ಟರ್ ಮಾತು..

ನಮ್ಮ ಪಕ್ಷಕ್ಕೆ ಬರುವಂತೆ ಹೊರಟ್ಟಿಯವರಿಗೆ ನಾವು ಆಹ್ವಾನ ಕೊಟ್ಟೆವು. ಆದರೆ, ಅವರು ಪಕ್ಷನಿಷ್ಠೆ ಬಿಡಲ್ಲ ಎಂದರು. ಕಡೆಗೂ ಅವರು ಬರಲಿಲ್ಲ. ಅವರ ಬದ್ಧತೆಗೆ ಇದು ನಿದರ್ಶನ ಎಂದರು. ಸಭಾಪತಿ, ಉಪ ಸಭಾಪತಿ ಚುನಾವಣೆ ಮತ ವಿಭಜನೆ ಆಗಬಾರದು. ಆದರೆ, ಉಪ ಸಭಾಪತಿ ವಿಚಾರದಲ್ಲಿ ಅದು ಆಗಿತ್ತು. ಆದರೆ, ಸಭಾಪತಿ ಚುನಾವಣೆಯಲ್ಲಿ ಅದು ಆಗಲಿಲ್ಲ, ಧರಣಿ ಕೈಬಿಟ್ಟು ಬನ್ನಿ, ಸದನದಲ್ಲಿ ಭಾಗಿಯಾಗಿ ಮಾತನಾಡಿ ಎಂದು ಕಾಂಗ್ರೆಸ್‌ ಸದಸ್ಯರಿಗೆ ಮನವಿ ಮಾಡಿದರು.

ಶಬರಿ ಶಾಪ ಬಿಡುಗಡೆಯಂತೆ ಹೊರಟ್ಟಿ ಶಾಪ ವಿಮೋಚನೆ : ಹೊರಟ್ಟಿ ಎಂಬ ಶಬರಿಯ ಶಾಪವನ್ನು ಬಿಜೆಪಿ ಎಂಬ ರಾಮಚಂದ್ರ ಬಂದು ಬಿಡುಗಡೆ ಮಾಡಿದನು ಎಂದು ವಿಧಾನ ಪರಿಷತ್‌ನಲ್ಲಿ ನೂತನ ಜೆಡಿಎಸ್- ಬಿಜೆಪಿ ಮೈತ್ರಿಯನ್ನು ಆಶು ಕವಿತೆ ವಾಚಿಸಿ ಹೆಚ್‌ ವಿಶ್ವನಾಥ್ ಗಮನ ಸೆಳೆದರು.

ವಿಧಾನ ಪರಿಷತ್‌ನಲ್ಲಿ ನೂತನ ಸಭಾಪತಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ಕಳೆದ ಕಾಂಗ್ರೆಸ್- ಜೆಡಿಎಸ್ ಸರ್ಕಾರದಲ್ಲಿ ನಾನೂ ಮತ್ತು ಹೊರಟ್ಟಿ ಮಂತ್ರಿ ಆಗಿದ್ದರೆ, ಸಮ್ಮಿಶ್ರ ಸರ್ಕಾರ ಪತನವಾಗ್ತಿರಲಿಲ್ಲ ಎಂದು ತಮ್ಮನ್ನು ಮಂತ್ರಿ ಮಾಡದ ಮೈತ್ರಿ ಸರ್ಕಾರದ ಮುಖಂಡರನ್ನು ಪರೋಕ್ಷವಾಗಿ ಕುಟುಕಿದರು.

ಕಾಂಗ್ರೆಸ್ ಪಕ್ಷಕ್ಕೂ ಬಿಸಿ ಮುಟ್ಟಿಸಿದ ಹೆಚ್‌ ವಿಶ್ವನಾಥ್ : ನನಗೆ ಪೂರ್ವಾಶ್ರಮ ಕಾಂಗ್ರೆಸ್, ಎಸ್.ಎಂ.ಕೃಷ್ಟ ಸಿಎಂ ಆಗಿದ್ದಾಗ ಪಕ್ಷ, ಆಡಳಿತ ಉತ್ತುಂಗದಲ್ಲಿತ್ತು. ಆದರೆ, ಇವತ್ತು ಈ ಪಕ್ಷದಲ್ಲಿ ಮುಸ್ಲಿಮರಿಗೆ ಸೋಲು ಎಂಬ ಭಾವ ಬರುತ್ತಿದೆ. ಯೂಥ್ ಕಾಂಗ್ರೆಸ್‌ ಚುನಾವಣೆಯಲ್ಲಿ ಗೆದ್ದರೂ ಮುಸ್ಲಿಂ ಅಭ್ಯರ್ಥಿ ಸೋತರು, ಕಾಂಗ್ರೆಸ್‌ನ ಸೆಕ್ಯೂಲರ್ ಐಡಿಯಾಸ್‌ ಎಲ್ಲಿ ಹೋದವು ಎಂದು ವಿಶ್ವನಾಥ್ ಪ್ರಶ್ನಿಸಿದರು.

Last Updated : Feb 9, 2021, 7:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.