ETV Bharat / state

ಬಿಬಿಎಂಪಿಯ ಸೆಸ್ ಪ್ರಸ್ತಾವನೆ ಮುಂದೂಡಿ: ರಾಜ್ಯ ಸರ್ಕಾರಕ್ಕೆ ಕಾಸಿಯಾ ಒತ್ತಾಯ

author img

By

Published : Feb 5, 2022, 11:12 AM IST

ಸೆಸ್ ಸಂಗ್ರಹಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇದರಿಂದ ಸೂಕ್ಷ್ಮ ಮತ್ತು ಸಣ್ಣ ಪ್ರಮಾಣದ ಉದ್ಯಮಿಗಳಿಗೆ ಆಘಾತ ಉಂಟಾಗಲಿದೆ. ಹಾಗಾಗಿ, ಸರ್ಕಾರ ಪ್ರಸ್ತಾವನೆಯನ್ನು ಪರಿಗಣಿಸಬಾರದು ಎಂದು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಪ್ರಕಟಣೆಯಲ್ಲಿ ತಿಳಿಸಿದೆ.

ಕಾಸಿಯಾ
ಕಾಸಿಯಾ

ಬೆಂಗಳೂರು: ವಿದ್ಯುತ್ ಬಿಲ್ ಮೂಲಕ ಕಸ ನಿರ್ವಹಣೆ ಸೆಸ್ ಸಂಗ್ರಹಕ್ಕೆ ಬಿಬಿಎಂಪಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇದು ಸೂಕ್ಷ್ಮ ಮತ್ತು ಸಣ್ಣ ಪ್ರಮಾಣದ ಉದ್ಯಮಿಗಳಿಗೆ ಮತ್ತೊಂದು ಅನಗತ್ಯ ಆಘಾತವನ್ನುಂಟು ಮಾಡಿದೆ ಎಂದು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಪ್ರಕಟಣೆಯಲ್ಲಿ ತಿಳಿಸಿದೆ.

1001 - 2,000 ರೂ. ವಿದ್ಯುತ್ ಬಿಲ್‌ನಲ್ಲಿ 200 ರೂ. ಹಾಗೂ 2001 ರಿಂದ 3000 ರೂ. ಬಿಲ್‌ಗಳಲ್ಲಿ 350 ರೂ. ಮತ್ತು 3,000 ಕ್ಕಿಂತ ಹೆಚ್ಚಿನ ಬಿಲ್‌ಗಳಲ್ಲಿ 500 ರೂ. ಕಸ ನಿರ್ವಹಣಾ ಸೆಸ್ ಸೇರಿಸಿ ವಸೂಲು ಮಾಡಲು ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಮೇಲ್ಮುಖ ಸುಂಕ ಪರಿಷ್ಕರಣೆ ಕುರಿತಾದ ಯಾವುದೇ ಪ್ರಸ್ತಾವನೆಗಳನ್ನು ಕನಿಷ್ಠ ಒಂದು ವರ್ಷಕ್ಕೆ ಮುಂದೂಡಲು ಕಾಸಿಯಾ ಸರ್ಕಾರಕ್ಕೆ ಒತ್ತಾಯಿಸಿದೆ.

ಕಾಸಿಯಾ
ಕಾಸಿಯಾ

ಓದಿ: ಜಮ್ಮು- ಕಾಶ್ಮೀರ, ನೋಯ್ಡಾದಲ್ಲಿ ಭೂಕಂಪನ.. ಮನೆಗಳಿಂದ ಹೊರ ಬಂದ ಜನ

ಬಿಬಿಎಂಪಿಯು ತನ್ನ ನಷ್ಟಗಳನ್ನು ಸರಿದೂಗಿಸಿಕೊಳ್ಳಲು ಹಾಗೂ ತನ್ನ ಅಸಮರ್ಥ ಕಾರ್ಯಾಚರಣೆ ರಕ್ಷಿಸಿಕೊಳ್ಳಲು ಇಂತಹ ಹೆಚ್ಚುವರಿ ಸೆಸ್ ವಿಧಿಸುತ್ತಿದೆ. ಇದರಿಂದ ಸಾಮಾನ್ಯ ನಾಗರಿಕರು ಸಂಕಷ್ಟ ಎದುರಿಸಬೇಕಾಗುತ್ತದೆ. ಸರ್ಕಾರ ಪ್ರಸ್ತಾವನೆಯನ್ನು ಪರಿಗಣಿಸಬಾರದು ಎಂದು ಕಾಸಿಯಾ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.