ETV Bharat / state

ಇಂದು-ನಾಳೆ ರಾಜ್ಯದಾದ್ಯಂತ ವ್ಯಾಪಕ ಮಳೆ, ಕ್ರಮೇಣ ಇಳಿಕೆ : ಹವಾಮಾನ ಇಲಾಖೆ

author img

By

Published : Nov 21, 2021, 3:05 PM IST

Updated : Nov 21, 2021, 3:37 PM IST

ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯ ಮುನ್ಸೂಚನೆ ಇರುವುದರಿಂದ ಯೆಲ್ಲೋ ಅಲರ್ಟ್(Yellow alert declared in Coastal area) ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆಯ ತಜ್ಞ ಸದಾನಂದ ಅಡಿಗ (Sadananda Adiga) ತಿಳಿಸಿದ್ದಾರೆ..

rain
ಮಳೆ

ಬೆಂಗಳೂರು : ಇಂದು ಮತ್ತು ನಾಳೆ ರಾಜ್ಯಾದ್ಯಂತ ವ್ಯಾಪಕ ಮಳೆ(Heavy Rain in state) ಯಾಗಲಿದೆ. ನಂತರ ಮಳೆಯ ಪ್ರಮಾಣ ಕಡಿಮೆಯಾಗಲಿದೆ. ನವೆಂಬರ್ 25ರ ನಂತರ ಒಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ (Meteorological department) ಮುನ್ಸೂಚನೆ ನೀಡಿದೆ.

ಹವಾಮಾನ ಇಲಾಖೆಯ ತಜ್ಞ ಸದಾನಂದ ಅಡಿಗ ಮಳೆ ಕುರಿತಂತೆ ಮಾಹಿತಿ ನೀಡಿರುವುದು..

ಈ ಬಗ್ಗೆ ಹವಾಮಾನ ಇಲಾಖೆಯ ತಜ್ಞ ಸದಾನಂದ ಅಡಿಗ ಅವರು ಮಾತನಾಡಿ, ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯ ಮುನ್ಸೂಚನೆ ಇರುವುದರಿಂದ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.

ನಾಳೆ ಕೂಡ ವ್ಯಾಪಕವಾಗಿ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಮಳೆಯಾಗಲಿದೆ. ನಂತರದ ದಿನಗಳಲ್ಲಿ ಮಳೆ ಇಳಿಕೆ ಕಂಡು ಬರಲಿದೆ ಎಂದರು. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಇವತ್ತು ಹಲವು ಕಡೆ ಮಳೆಯಾಗುವ ಸಾಧ್ಯತೆ ಇದೆ. ನಾಳೆಯಿಂದ ಮೂರು ದಿನ ಕೆಲವು ಕಡೆ ಮಾತ್ರ ಮಳೆಯಾಗಲಿದೆ. ನ.25ರಂದು ಒಣಹವೆ ಇರಲಿದೆ ಎಂದು ತಿಳಿಸಿದರು.

ದಕ್ಷಿಣ ಒಳನಾಡಿನಲ್ಲಿ ಇಂದು ಮತ್ತು ನಾಳೆ ವ್ಯಾಪಕವಾಗಿ ಮಳೆಯಾಗಲಿದೆ. ನಂತರ ಎರಡು ದಿನ ಹಲವು ಕಡೆ ಮಳೆಯಾಗಲಿದೆ. 25ರಂದು ಮಳೆ ಪ್ರಮಾಣ ಕಡಿಮೆ ಆಗಲಿದೆ ಎಂದು ಹೇಳಿದರು.

ಇಂದು ಬೆಂಗಳೂರಿನಲ್ಲಿ 23.4 ಗರಿಷ್ಟ ಉಷ್ಣಾಂಶ ಹಾಗೂ 19.3 ಡಿಗ್ರಿ ಸೆಲ್ಸಿಯಸ್ ಕನಿಷ್ಟ ಉಷ್ಣಾಂಶ ದಾಖಲಾಗಿದೆ. 2.4 ಮಿ.ಮೀ ಮಳೆಯಾಗಿದೆ. ಬೆಂಗಳೂರು ನಗರದ ಸುತ್ತಮುತ್ತ ಮಳೆ ಪ್ರಮಾಣದಲ್ಲಿ ಇಳಿಕೆ ಕಾಣಲಿದೆ. ಹಾಗೆಯೇ, ಮೋಡ ಕವಿದ ವಾತಾವರಣ ಇರಲಿದೆ ಎಂದರು‌.

ಕಳೆದ 24 ಗಂಟೆಗಳಲ್ಲಿ ಕರ್ನಾಟಕದ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ವ್ಯಾಪಕವಾಗಿ ಹಾಗೂ ದಕ್ಷಿಣ ಒಳನಾಡಿನ ಹಲವು ಕಡೆ ಮಳೆಯಾಗಿದೆ. ಬಳ್ಳಾರಿ, ದ.ಕನ್ನಡದ ಕೆಲವೆಡೆ ತಲಾ 9 ಸೆಂ.ಮೀ ಮಳೆಯಾಗಿದೆ. ರಾಯಚೂರಿನ ಸಿಂಧನೂರಿನಲ್ಲಿ 8 ಸೆಂ.ಮೀ ಹಾಗೂ ಮಸ್ಕಿ ಹಾಗೂ ಮುಧೋಳ್‌ದಲ್ಲಿ ತಲಾ 8 ಸೆಂ. ಮೀ ಮಳೆಯಾಗಿದೆ.

ಓದಿ: BJPಯದು 'ಜನ ಬರ್ಬಾದ್ ಯಾತ್ರೆ'... ರಾಜ್ಯದ ಜನ ಸಂಕಷ್ಟದಲ್ಲಿರುವಾಗ ಇದೆಲ್ಲ ಬೇಕಿತ್ತಾ? : ಸಿದ್ದರಾಮಯ್ಯ ಪ್ರಶ್ನೆ

Last Updated :Nov 21, 2021, 3:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.