ETV Bharat / state

ಏರ್​ಪೋರ್ಟ್​​ ಕೆಲಸಕ್ಕಾಗಿ ಅಲೆಯುತ್ತಿದ್ದ ಆದಿತ್ಯರಾವ್, ಉದ್ಯೋಗವಿಲ್ಲದೆ ಕುಗ್ಗಿಹೋಗಿದ್ದ!

author img

By

Published : Jan 22, 2020, 12:53 PM IST

Updated : Jan 22, 2020, 12:59 PM IST

ಉಡುಪಿ ಜಿಲ್ಲೆಯ ಮಣಿಪಾಲ ನಿವಾಸಿಯಾಗಿರುವ ಆದಿತ್ಯ ರಾವ್. ಎಂಜಿನಿಯರಿಂಗ್ ಪದವಿ ಪಡೆದು ‌ಏರ್ ಪೋರ್ಟ್​ನಲ್ಲಿ ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದ. ಕೆಲಸ ಸಿಗದೆ ಕುಗ್ಗಿ ಹೋಗಿದ್ದ. ಆದಿತ್ಯ ತಂದೆ ನಿವೃತ್ತ ಬ್ಯಾಂಕ್ ಮಾನೇಜರ್​ ಆಗಿದ್ದು, ಆತನ ತಾಯಿ ಕೆಲ ದಿನಗಳ ಹಿಂದೆಯಷ್ಟೇ ಕ್ಯಾನ್ಸರ್ ನಿಂದ ಮೃತಪಟ್ಟಿದ್ದರು.

mangalore bomb case accused surrender in bangalore
ಆರೋಪಿ ಆದಿತ್ಯ ರಾವ್

ಬೆಂಗಳೂರು: ಉಡುಪಿ ಜಿಲ್ಲೆಯ ಮಣಿಪಾಲ ನಿವಾಸಿಯಾಗಿರುವ ಆದಿತ್ಯ ರಾವ್. ಎಂಜಿನಿಯರಿಂಗ್ ಪದವಿ ಪಡೆದು ‌ಏರ್ ಪೋರ್ಟ್​ನಲ್ಲಿ ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದ. ಕೆಲಸ ಸಿಗದೆ ಕುಗ್ಗಿ ಹೋಗಿದ್ದ. ಆದಿತ್ಯ ತಂದೆ ನಿವೃತ್ತ ಬ್ಯಾಂಕ್ ಮಾನೇಜರ್​ ಆಗಿದ್ದು, ಆತನ ತಾಯಿ ಕೆಲ ದಿನಗಳ ಹಿಂದೆಯಷ್ಟೇ ಕ್ಯಾನ್ಸರ್ ನಿಂದ ಮೃತಪಟ್ಟಿದ್ದರು.

ಆರೋಪಿ ಆದಿತ್ಯ ರಾವ್ ಶರಣು

ಅಂದರ್​ ಆಗಿದ್ದ:
ಕೆಲ ವರ್ಷಗಳಿಂದ ಉಡುಪಿಯಿಂದ ಬೆಂಗಳೂರಿಗೆ ಶಿಫ್ಟ್ ಆಗಿದ್ದ ಆರೋಪಿ, ವಿಧಾನ ಸೌಧ ಸುತ್ತ ‌ಮುತ್ತ ಬಾಂಬ್ ಇಡುವುದಾಗಿ ಬೆದರಿಸಿ, ನಂತರ ಅಂದರ್ ಆಗಿದ್ದ. ಬೆಂಗಳೂರು ಏರ್​ಪೋರ್ಟ್​​ಗೆ ಬಾಂಬ್​ ಇಡಲೂ ಯತ್ನಿಸಿದ್ದ ಎನ್ನಲಾಗಿದೆ.

ಬಿಳಿ ಬಣ್ಣದ ಪೌಡರ್​ ಖರೀದಿಸಿದ್ದ:
ಆನ್ ಲೈನ್ ನಲ್ಲಿ ಬಿಳಿ ಬಣ್ಣದ ಪೌಡರ್​ ಖರೀದಿ ಮಾಡಿ, 10 ದಿನಗಳ ಹಿಂದೆ ಮಂಗಳೂರಿನ ಕುಡ್ಲ ರೆಸ್ಟೋರೆಂಟ್​​ನಲ್ಲಿ ಕೆಲಸಕ್ಕೆ ಸೇರಿದ್ದನು. ಅಲ್ಲಿ ಬಿಲ್ಲಿಂಗ್ ಕಾರ್ಯದ ತರಬೇತಿ ಪಡೆಯುತ್ತಿದ್ದ. ಚಿಲಿಂಬಿಯ ಕೆನರಾ ಬ್ಯಾಂಕ್​ನ ಹಿಲ್​​ಸೈಡ್ ಅಪಾರ್ಟ್​​ಮೆಂರ್ಟ್​ನಲ್ಲಿ ತಂಗಿದ್ದ. ತಿಂಗಳ ಸಂಬಳ ಪಡೆದ ಬಳಿಕ ಆತ ಕೆಲಸಕ್ಕೆ ಹೋಗಿರಲಿಲ್ಲ. ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆತನ ವರ್ತನೆ ಸಹಜವಾಗಿರಲಿಲ್ಲ ಎಂದು ತಿಳಿದು ಬಂದಿದೆ. ಮಂಗಳೂರು ಪೊಲೀಸರು ಹೋಟೆಲ್ ಮಾಲೀಕ ಹಾಗೂ ಸಿಬ್ಬಂದಿಯ ವಿಚಾರಣೆ ನಡೆಸುತ್ತಿದ್ದಾರೆ.

ಮಂಗಳೂರು ಬಜ್ಪೆ ವಿಮಾನದ ಬಳಿ ಬಾಂಬ್ ಪತ್ತೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಸದ್ಯ ಡಿಜಿ ನೀಲಮಣಿ ರಾಜು ಸೂಚನೆಯಂತೆ ಸಿಸಿಬಿ ಹಾಗೂ ನಗರದ ಹಿರಿಯ ಪೊಲೀಸ್ ಅಧಿಕಾರಿಗಳು ಆರೋಪಿ ತಪ್ಪೊಪ್ಪಿಕೊಂಡ ಹಿನ್ನೆಲೆ ಅಜ್ಞಾತ ಸ್ಥಳದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ ಎನ್ನಲಾಗಿದೆ.

ಅಜ್ಞಾತ ಸ್ಥಳಕ್ಕೆ ಶಿಫ್ಟ್​:

ಆರೋಪಿ ಆದಿತ್ಯ ರಾವ್ ವೈದ್ಯಕೀಯ ತಪಾಸಣೆಯನ್ನು ಬೆಂಗಳೂರಿನ ಸೇಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ನಡೆಸಲಾಗಿದೆ. ಆರೋಪಿಯ ಆರೋಗ್ಯ ತಪಾಸಣೆ ಮುಕ್ತಾಯವಾದ ಕಾರಣ, ಮತ್ತಷ್ಟು ವಿಚಾರಣೆಗೆ ಒಳಪಡಿಸಲು ಆರೋಪಿಯನ್ನ ಪೊಲೀಸರು ಅಜ್ಞಾತ ಸ್ಥಳಕ್ಕೆ ಶಿಫ್ಟ್ ಮಾಡಲಿದ್ದಾರೆ.

ಇಂದು ನ್ಯಾಯಾಲಯಕ್ಕೆ ಆರೋಪಿ ಹಾಜರು:

ಪೊಲೀಸ್​ ವಿಚಾರಣೆ ಮುಗಿದ ಬಳಿಕ ಇಂದು ಸಂಜೆ ಆರೋಪಿ ಆದಿತ್ಯ ರಾವ್​ನನ್ನು ನ್ಯಾಯಲಯಕ್ಕೆ ಹಾಜರುಪಡಿಸಲಾಗುತ್ತದೆ. ನಂತರ ಆರೋಪಿಯನ್ನು ಮತ್ತೆ ವಶಕ್ಕೆ ಪಡೆಯಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Intro:ಬಾಂಬ್ ಪತ್ತೆ ಆರೋಪಿ ವೈದ್ಯಕೀಯ ಪರೀಕ್ಷೆ ಮುಕ್ತಾಯ
ಅಜ್ನಾತ ಸ್ಥಳಕ್ಕೆ ಆರೋಪಿ ಶಿಫ್ಟ್ ಆರೋಪಿ ಹಿನ್ನೆಲೆ ಏನು ಗೊತ್ತಾ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ
ಸಂಬಂಧಿಸಿದಂತೆ ಶರಣಾದ ಆರೋಪಿ ಆದಿತ್ಯ ರಾವ್ ವೈದ್ಯಕೀಯ ತಪಾಸಣೆಯನ್ನ ಬೆಂಗಳೂರಿನ ಸೇಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಯ್ತು. ಇನ್ನೂ ಆರೋಪಿಯ
ಆರೋಗ್ಯ ತಪಾಸಣೆ ಮುಕ್ತಾಯವಾದ ಕಾರಣ ಆರೋಪಿಯನ್ನ ಮತ್ತಷ್ಟು ವಿಚಾರಣೆಗೆ ಒಳಪಡಿಸಲಿರುವ ಕಾರಣ ಆರೋಪಿಯನ್ನ ಪೊಲಿಸರು ಅಜ್ಞಾತ ಸ್ಥಳಕ್ಕೆ ಶಿಫ್ಟ್ ಮಾಡಿ ವಿಚಾರಣೆ ನಡೆಸಲಿದ್ದಾರೆ. ವಿಚಾರಣೆ ಮುಗಿದ ಬಳಿಕ ಇಂದು ಆರೋಪಿಯನ್ನ ಸಂಜೆಯ ಒಳಗೆ ನ್ಯಾಯಲಯದ ಎದುರು ಹಾಜರು ಪಡಿಸಿ ಮತ್ತೆ ವಶಕ್ಕೆ ಪಡೆಯಲಿದ್ದಾರೆ.

ಯಾರು ಈ ಆದಿತ್ಯರಾವ್

ಉಡುಪಿ ಜಿಲ್ಲೆಯ ಮಣಿಪಾಲ ನಿವಾಸಿಯಾಗಿರುವ ಆದಿತ್ಯ ರಾವ್...
ಇಂಜಿನಿಯರಿಂಗ್ ಪದವಿ ಪಡೆದು‌ಏರ್ ಪೋರ್ಟ್ ನಲ್ಲಿ ಉದ್ಯೋಗ ಪಡೆಯಲು ಆರೋಪಿ ಅಲೆದಾಡುತ್ತಿದ್ದ.ಕೆಲಸ ಸಿಗದೆ ಕುಗ್ಗಿ ಹೋಗಿದ್ದ. ಇನ್ನೂ ಆದಿತ್ಯ ತಂದೆ ನಿವೃತ್ತ ಬ್ಯಾಂಕ್ ಮಾನೇಜ್ ಆಗಿದ್ದು ,ಆದಿತ್ಯನ ತಾಯಿ ಕೆಲ ದಿನಗಳ ಹಿಂದೆಯಷ್ಟೇ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ರು.

ಇನ್ನು ಕೆಲ ವರ್ಷಗಳಿಂದ ಉಡುಪಿಯಿಂದ ಬೆಂಗಳೂರಿಗೆ ಶಿಫ್ಟ್ ಆಗಿದ್ದ ಆರೋಪಿ ವಿಧಾನ ಸೌಧ ಸುತ್ತಾ ‌ಮುತ್ತಾ ಬಾಂಬ್ ಇಡುವುದಾಗಿ ಬೆದರಿಸಿ ನಂತ್ರ ಅಂದರ್ ಆಗಿ ಜೈಲುಪಾಲಾಗಿದ್ದ. ಸದ್ಯ ಈತ ಆನ್ ಲೈನ್ ನಲ್ಲಿ ಬಿಳಿ ಬಣ್ಣದ ಪೌಡರ್ ನ್ನ ಪರ್ಚೇಸ್ ಮಾಡಿ 10 ದಿನಗಳ ಹಿಂದೆ ಮಂಗಳೂರಿನ ಹೋಟೇಲ್ ವೊಂದಕ್ಕೆ ಕೆಲಸಕ್ಕೆ ಸೇರಿ ಮಂಗಳೂರು ಹೋಟೇಲ್ ವೊಂದರಲ್ಲಿ ಬಾಂಬ್ ತಯಾರಿಸಿದ್ದ ಆರೋಪಿ .ಹಿಗಾಗಿ ಮಂಗಳೂರು ಪೊಲೀಸರು ಹೋಟೇಲ್ ಮಾಲೀಕ ಹಾಗೂ ಸಿಬ್ಬಂದಿಯ ವಿಚಾರಣೆ ನಡೆಸುತ್ತಿದ್ದಾರೆ.

ಇನ್ನು ಮಂಗಳೂರು ಬಜ್ಪೆ ವಿಮಾನದ ಬಳಿ ಬಾಂಬ್ ಪತ್ತೆ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡು ಸದ್ಯ ಡಿಜಿ ನೀಲಮಣಿ ರಾಜ್ ಸೂಚನೆಯಂತೆ ಸಿಸಿಬಿ ಹಾಗೂ ನಗರದ ಹಿರಿಯ ಪೊಲೀಸ್ ಅಧಿಕಾರಿಗಳು ಆರೋಪಿ ತಪ್ಪೊಪ್ಪಿಕೊಂಡ ಹಿನ್ನೆಲೆ ತೀವ್ರ ವಿಚಾರಣೆಗೆ ಅಜ್ನಾತ ಸ್ಥಳದಲ್ಕಿ ಗುರಿಪಡಿಸಿದ್ದಾರೆ


Body: KN_BNG_02_BOMB_ACUSED_7204498Conclusion:KN_BNG_02_BOMB_ACUSED_7204498
Last Updated : Jan 22, 2020, 12:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.