ETV Bharat / state

ಬೆಂಗಳೂರು: ಹೆಂಡತಿ ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.. ಹೆಂಡತಿ, ಇಬ್ಬರು ಮಕ್ಕಳ ಸಾವು

author img

By

Published : Mar 2, 2023, 3:21 PM IST

Updated : Mar 2, 2023, 4:22 PM IST

ಬೆಂಗಳೂರಿನ ಕೋಣನಕುಂಟೆಯಲ್ಲಿ ಹೆಂಡತಿ ಹಾಗೂ ಇಬ್ಬರು ಮಕ್ಕಳಿಗೆ ವ್ಯಕ್ತಿಯೊಬ್ಬ ವಿಷವುಣಿಸಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಬೆಂಗಳೂರು
ಬೆಂಗಳೂರು

ಬೆಂಗಳೂರು: ಹೆಂಡತಿ ಮಕ್ಕಳಿಗೆ ವಿಷ ಉಣಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ನಿನ್ನೆ ರಾತ್ರಿ ಸಂಭವಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕೋಣನಕುಂಟೆಯಲ್ಲಿ ವಾಸವಾಗಿದ್ದ ನಾಗೇಂದ್ರ ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಂಡ್ತಿ ವಿಜಯಲಕ್ಷ್ಮಿ (28) ಮಕ್ಕಳಾದ ನಿಷಾ (7) ಹಾಗೂ ದೀಕ್ಷಾ (5) ಸಾವನ್ನಪ್ಪಿದ ದುದೈರ್ವಿಗಳು. ಊಟದಲ್ಲಿ ವಿಷ ಹಾಕಿ ಬಳಿಕ ತಾನೂ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ.‌ ಅಷ್ಟೊತ್ತಿಗಾಗಲೇ ಹೆಂಡ್ತಿ ಸಹೋದರ ಬಂದು ಅವರನ್ನು ರಕ್ಷಣೆ ಮಾಡಿದ್ದಾರೆ.

ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಗೇಂದ್ರ ಕ್ಯಾನ್ಸರ್​ನಿಂದ ಬಳಲುತ್ತಿದ್ದ. ಮಾನಸಿಕ‌ ಖಿನ್ನತೆಗೆ ಒಳಗಾಗಿದ್ದ‌. ಹೀಗಾಗಿ ಸಂಸಾರದ ನೌಕೆ ಮುನ್ನೆಡಸಲು ಕಷ್ಟವಾಗಿತ್ತು‌. ಹೆಂಡ್ತಿ ಕೆಲಸಕ್ಕೆ ಹೋಗಿ ಕುಟುಂಬದ ನಿರ್ವಹಣೆ ನಡೆಸುತ್ತಿದ್ದರು. ಈ ಮಧ್ಯೆ ಇಬ್ಬರ ನಡುವೆ ಕೌಟುಂಬಿಕ ಕಲಹ ಏರ್ಪಟ್ಟಿದೆ. ಇದರಿಂದ ಮನನೊಂದಿದ್ದ ನಾಗೇಂದ್ರ, ಹೆಂಡ್ತಿ ಮಕ್ಕಳಿಗೆ ಊಟದಲ್ಲಿ ವಿಷ ಬೆರೆಸಿ ತಿನ್ನಿಸಿ ಸಾವಿಗೆ ಕಾರಣನಾಗಿದ್ದಾನೆ. ಕೃತ್ಯವೆಸಗಿದ ಬಳಿಕ ಡೋರ್ ಲಾಕ್ ಮಾಡಿಕೊಂಡು ಚಾಕುವಿನಿಂದ ಕೈ‌ಕುಯ್ದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದ. ಅಷ್ಟೊತ್ತಿಗಾಗಲೇ ಹೆಂಡತಿ ಸಹೋದರ ಬಂದು ರಕ್ಷಣೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಡ್ಡರಪಾಳ್ಯದಲ್ಲಿ ನಿವಾಸಿಯಾಗಿದ್ದ ನಾಗೇಂದ್ರ - ವಿಜಯಾ ದಂಪತಿಗೆ 2014 ರಲ್ಲಿ ಮದುವೆಯಾಗಿತ್ತು. ಇಬ್ಬರಿಗೆ ಮುದ್ದಾದ ಇಬ್ಬರು ಹೆಣ್ಣು ಮಕ್ಕಳು ಜನಿಸಿದ್ದರು. ನಂತರ ಅವರನ್ನು ಸರ್ಕಾರಿ ಶಾಲೆಗೆ ಸೇರಿಸಲಾಗಿತ್ತು‌‌‌. ಹಲವು ವರ್ಷಗಳ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ನಾಗೇಂದ್ರ ಕುಡಿತದ ದಾಸನಾಗಿದ್ದ. ‌

ಕುಟುಂಬದವರನ್ನು ಸಾಕುತ್ತಿದ್ದ ವಿಜಯಲಕ್ಷ್ಮೀ: ಕುಟುಂಬದ ಹೊಣೆಯನ್ನು ಹೊತ್ತುಕೊಂಡಿದ್ದ ವಿಜಯಲಕ್ಷ್ಮೀ ಕೆಲಸಕ್ಕೆ ಹೋಗಿ ಗಂಡ ಹಾಗೂ ಮಕ್ಕಳನ್ನ ಸಾಕುತ್ತಿದ್ದರು. ಆದರೆ, ಆತ ನಿತ್ಯ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ನಿನ್ನೆ ಸಹ ದಂಪತಿ ಜಗಳವಾಡಿಕೊಂಡಿದ್ದರು.‌ ಈ ಮಧ್ಯೆ ಊಟದಲ್ಲಿ ಹೆಂಡ್ತಿ‌ ಮಕ್ಕಳಿಗೆ ವಿಷ ಬೆರಸಿ ಸೇವಿಸುವಂತೆ ಮಾಡಿದ್ದಾನೆ.‌ ಊಟದ ನಂತರ ತೀವ್ರ ಅಸ್ವಸ್ಥರಾಗಿ ಬಳಲಿ‌ ಮೂವರು ಸಾವನ್ನಪ್ಪಿದ್ದಾರೆ‌‌‌. ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಬ್ಬರು ಮಕ್ಕಳನ್ನು ಸಾಯಿಸಲು ಯತ್ನ, ತಾಯಿಯೂ ಆತ್ಮಹತ್ಯೆ; ಒಬ್ಬ ಮಗಳು ಪ್ರಾಣಾಪಾಯದಿಂದ ಪಾರು: ಇನ್ನೊಂದೆಡೆ ನಿನ್ನೆ (ಬುಧವಾರ) ಮಂಗಳೂರು ನಗರದ ಕೊಡಿಯಾಲ್ ಗುತ್ತುವಿನಲ್ಲಿ ಇಬ್ಬರು ಮಕ್ಕಳನ್ನು ಸಾಯಿಸಲು ಯತ್ನಿಸಿ ಕೊನೆಗೆ ತಾಯಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ಘಟನೆಯಲ್ಲಿ ಇಬ್ಬರು ಸಾವಿಗೀಡಾಗಿದ್ದು, ಒಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದರು. ಕೊಡಿಯಾಲ್ ಗುತ್ತಿನ ವಿಜಯ (33), ಸುಮುಖ(4) ಸಾವನ್ನಪ್ಪಿದವರು. ಯಜ್ನ ಎಂಬ 12 ವರ್ಷದ ಬಾಲಕಿ ಸಾವಿನಿಂದ ಪಾರಾಗಿ, ವಿಷಯ ಮುಟ್ಟಿಸಿದ್ದಳು.

ಇದನ್ನೂ ಓದಿ : ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ಅಪರಾಧಿಗೆ ಮೂರು ವರ್ಷ ಜೈಲು ಶಿಕ್ಷೆ

Last Updated : Mar 2, 2023, 4:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.