ETV Bharat / state

7 ವರ್ಷದ ಪ್ರೀತಿಗೆ ಎಳ್ಳುನೀರು ಬಿಟ್ಟ ಯುವತಿ.. ಮನನೊಂದು ಯುವಕ ಮಾಡಿದ್ದೇನು?

author img

By

Published : Sep 9, 2019, 3:00 PM IST

ಪ್ರೀತಿಸಿದ ಹುಡುಗಿಗೋಸ್ಕರ ಮನೋಜ್ ಎಂಬ ಯುವಕ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಯುವಕ

ಬೆಂಗಳೂರು : ಪ್ರೀತಿಸಿದ ಹುಡುಗಿಗೋಸ್ಕರ ಪ್ರಾಣ ಬಿಡಲು ಪ್ರೇಮಿಯೊಬ್ಬ ಮುಂದಾಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಮನೋಜ್ ಎಂಬ ಯುವಕ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದನು.

ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಯುವಕ

ಕೆಪಿ ಅಗ್ರಹಾರದ ನಿವಾಸಿಯಾದ ಮನೋಜ್, ಯುವತಿಯೋರ್ವಳನ್ನ 7 ವರ್ಷದಿಂದ ಪ್ರೀತಿಸುತ್ತಿದ್ದ. ಆದರೆ, ಇಬ್ಬರ ಮಧ್ಯೆ ಮನಸ್ತಾಪದಿಂದಾಗಿ ಯುವತಿ 7 ವರ್ಷದ ಪ್ರೀತಿಯನ್ನ ತ್ಯಜಿಸಿ ಹೋಗಿದ್ದಳು. ಇದರಿಂದ ಮನನೊಂದ ಮನೋಜ್​, ಯುವತಿಯ ಮನೆ ಎದುರು ತನ್ನ ಗಾಡಿಯಲ್ಲಿದ್ದ 5 ಲೀಟರ್ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಇದನ್ನು ಕಂಡ ಸ್ಥಳೀಯರು ಕೂಡಲೇ ಮನೋಜ್​ನನ್ನು ರಕ್ಷಣೆ ಮಾಡಿದ್ದಾರೆ. ಈ ಕುರಿತು ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಪ್ರೀತಿಸಿದ ಹುಡುಗಿಗೋಸ್ಕರ ಪ್ರಾಣ ಬಿಡಲು ಮುಂದಾದ ಪಾಗಲ್ ಪ್ರೇಮಿ.

ಪ್ರೀತಿಸಿದ ಹುಡುಗಿಗೋಸ್ಕರ ಪ್ರಾಣ ಬಿಡಲು ಪಾಗಲ್ ಪ್ರೇಮಿ.
ಮುಂದಾಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಮನೋಜ್ ಎಂಬಾತನೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿ..

ಕೆ.ಪಿ ಅಗ್ರಹಾರದ ನಿವಾಸಿಯಾದ ಮನೋಜ್ ಅದೇ ವ್ಯಾಪ್ತಿಯ ಯುವತಿಯೋರ್ವಳನ್ನ ಏಳು ವರ್ಷದಿಂದ ಪ್ರೀತಿಸುತಿದ್ದ. ಆದ್ರೆ ಆಕೆ ಜಗಳವಾಡಿ ಏಳು ವರ್ಷದ ಪ್ರೀತಿಯನ್ನ ತ್ಯಜಿಸಿ ಹೋಗಿದ್ದಳು. ಹಿಗಾಗಿ ಆಕೆಯ ಜೊತೆ ಎಷ್ಟೇ ಮಾತುಕತೆ ನಡೆಸಿದರು ಆಕೆ ಡೋಂಟ್ ಕೇರ್ ಅಂದ ಕಾರಣ ಆಕೆಯ ಮನೆಯ ಎದುರು ತನ್ನ ಗಾಡಿಯ
ಐದು ಲೀಟರ್ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಪೆಟ್ರೋಲ್ ಸುರಿದುಕೊಳ್ಳುತ್ತಿರುವುದನ್ನ ನೋಡಿದ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಸದ್ಯ ಕೆ ಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದ್ದು ತನೀಕೆ ಮುಂದುವರೆದಿದೆ.Body:KN_BNG_07_SUSIDE_7204498Conclusion:KN_BNG_07_SUSIDE_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.