ಎಸಿಬಿ ಕೇಸ್​ಗಳು ಲೋಕಾಯುಕ್ತಕ್ಕೆ.. ಮಹತ್ವದ ಸಭೆ ಕರೆದ ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್

author img

By

Published : Sep 11, 2022, 7:43 PM IST

lokayukta

ಎಸಿಬಿ ಕೇಸ್​ಗಳು ಲೋಕಾಯುಕ್ತಕ್ಕೆ ಹಸ್ತಾಂತರ. ಈ ಬಗ್ಗೆ ಚರ್ಚಿಸಲು ಪೊಲೀಸರು ಹಾಗೂ ಅಧಿಕಾರಿಗಳ ಜೊತೆ ಲೋಕಾಯುಕ್ತರಿಂದ ಸಭೆ.

ಬೆಂಗಳೂರು:‌ ರಾಜ್ಯ ಸರ್ಕಾರ ಆದೇಶದ ಹಿನ್ನೆಲೆ ಎಸಿಬಿಯಲ್ಲಿ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಸಂಬಂಧ ಅಧಿಕಾರಿ ವರ್ಗ ಹಾಗೂ ಪೊಲೀಸರ ಜೊತೆ ಲೋಕಾಯುಕ್ತ ನ್ಯಾ. ಬಿ.ಎಸ್.ಪಾಟೀಲ್ ಅವರು ಸೋಮವಾರ ಸಭೆ ನಡೆಸಲಿದ್ದಾರೆ‌.

ಪಾರದರ್ಶಕ ಸದೃಢ ಸಂಸ್ಥೆಯ ನಿರ್ಮಾಣಕ್ಕೆ ಮುಂದಾಗಿರುವ ಲೋಕಾಯುಕ್ತರು, ಭ್ರಷ್ಟಾಚಾರ ರಹಿತ ಕಾರ್ಯನಿರ್ವಹಣೆಗಾಗಿ ಸೋಮವಾರ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಈಗಾಗಲೇ ಎಸಿಬಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿರುವ ಲೋಕಾಯುಕ್ತ ಕಾರ್ಯದರ್ಶಿ, ಸದ್ಯ ಕೇಸ್ ಫೈಲ್​​ಗಳಷ್ಟೇ ವರ್ಗಾವಣೆ ಮಾಡಿಕೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ. ಎಸಿಬಿ ಮುಖ್ಯಸ್ಥ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಎಲ್ಲಾ ಎಸಿಬಿ ಎಸ್ಪಿಗಳಿಗೆ ಪತ್ರ ಬರೆದಿದ್ದು‌, ಸರ್ಕಾರದ ಆದೇಶದ ಬೆನ್ನಲ್ಲೇ ಎಲ್ಲಾ ಪ್ರಕರಣಗಳನ್ನು ವರ್ಗಾವಣೆ ಮಾಡಲು ಸೂಚಿಸಿದ್ದಾರೆ.

ಎಸಿಬಿ ಕೇಸ್​ಗಳು ಲೋಕಾಯುಕ್ತಕ್ಕೆ ಹಸ್ತಾಂತರ: ಬೆಂಗಳೂರು ನಗರ ಲೋಕಾಯುಕ್ತ ಮುಖ್ಯ ಕಚೇರಿಗೆ ಹಾಗೂ ಉಳಿದ ಜಿಲ್ಲೆಗಳಲ್ಲಿ ಆಯಾ ಎಸಿಬಿ ಕಚೇರಿಯಿಂದ ಲೋಕಾಯುಕ್ತ ಸಂಸ್ಥೆಗೆ ಕೇಸ್​ಗಳು ವರ್ಗಾವಣೆಯಾಗಲಿವೆ. ನಾಳಿನ ಸಭೆ ಬಳಿಕ ಸಿಬ್ಬಂದಿ ವರ್ಗ ನಿಯೋಜನೆ ಬಗ್ಗೆ ಸರ್ಕಾರದ ಜೊತೆ ಲೋಕಾಯುಕ್ತರು ಮಾತುಕತೆ ನಡೆಸಲಿದ್ದಾರೆ. ಗಂಭೀರ ಪ್ರಕರಣಗಳು ಮಾತ್ರ ಲೋಕಾಯುಕ್ತಕ್ಕೆ ಬಂದಿದ್ದು, ಆ ಪ್ರಕರಣಗಳ ತನಿಖೆ ಯಾವ್ಯಾಯ ತಂಡಗಳಿಗೆ ನೀಡಬೇಕು ಎಂಬುದು ಸಹ ಸಭೆಯಲ್ಲಿ ಚರ್ಚೆಯಾಗಲಿದೆ. ಮೊದಲು ಎಸಿಬಿ ಪ್ರಕರಣಗಳನ್ನೇ ಕೈಗೆತ್ತಿಕೊಂಡು ತನಿಖೆ ಮಾಡಲು ಲೋಕಾಯುಕ್ತ ಸಿದ್ಧತೆ ನಡೆಸುತ್ತಿದೆ. ತನಿಖೆ ಮುಗಿಯುವ ಹಂತಕ್ಕೆ ಬಂದಿರುವ ಹಾಗೂ ಬಾಕಿಯಿರುವ ಕೇಸ್​ಗಳು ಮೊದಲು ತನಿಖೆ ಪೂರ್ಣಗೊಳಿಸುವ ಬಗ್ಗೆಯೂ ಚರ್ಚೆಯಾಗಲಿದೆ ಎನ್ನಲಾಗ್ತಿದೆ.

ಹೈಕೋರ್ಟ್ ತೀರ್ಪಿನನ್ವಯ ರಾಜ್ಯ ಸರ್ಕಾರ ಇತ್ತೀಚೆಗೆ ಎಸಿಬಿ ರದ್ದುಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ. ಆಗಸ್ಟ್ 11ರಂದು ಎಸಿಬಿ ರದ್ದುಗೊಳಿಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಇದರ ಅನ್ವಯ ರಾಜ್ಯ ಸರ್ಕಾರ ಕೂಡ ಭ್ರಷ್ಟಾಚಾರ ನಿಗ್ರಹ ದಳ ರದ್ದು ಮಾಡಿದೆ.

(ಇದನ್ನೂ ಓದಿ: ಹೈಕೋರ್ಟ್ ಆದೇಶದನ್ವಯ ಎಸಿಬಿ ರದ್ದು ಮಾಡಿ ಸರ್ಕಾರ ಅಧಿಕೃತ ಆದೇಶ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.