ETV Bharat / state

ರಾಹುಲ್ ಪ್ಯಾಂಟ್, ಚಡ್ಡಿ ಬಗ್ಗೆಯೂ ಮಾತನಾಡಲಿ.. ನಡಿಗೆ ಬಗ್ಗೆನೂ ಚರ್ಚಿಸಲಿ: ಬಿಜೆಪಿಗೆ ಡಿಕೆಶಿ ತಿರುಗೇಟು

author img

By

Published : Sep 10, 2022, 3:36 PM IST

ಬಿಜೆಪಿಯವರು ದೇಶವನ್ನು ತುಂಡು ಮಾಡುತ್ತಿದ್ಧಾರೆ. ರಾಹುಲ್ ಗಾಂಧಿಯವರು ದೇಶ ಒಂದು ಮಾಡುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಕಬ್ಬಿಣದ ಕತ್ತರಿಯಿಂದ ಭಾರತ ತುಂಡರಿಸುತ್ತಿದ್ದಾರೆ, ನಾವು ಕಬ್ಬಿಣದಿಂದ ಮಾಡಿದ ಸೂಜಿಯಿಂದ ಭಾರತವನ್ನು ಜೋಡಿಸುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.

let-bjp-talk-about-rahul-gandhis-pant-and-chaddi-too-dk-shivakumar
ರಾಹುಲ್ ಗಾಂಧಿಯ ಪ್ಯಾಂಟ್, ಚಡ್ಡಿ ಬಗ್ಗೆಯಾದರೂ ಮಾತನಾಡಲಿ: ಬಿಜೆಪಿಗೆ ಡಿಕೆಶಿ ತಿರುಗೇಟು

ಬೆಂಗಳೂರು: ಬಿಜೆಪಿಯವರು ರಾಹುಲ್ ಗಾಂಧಿ ಅವರ ಟೀ ಶರ್ಟ್ ಬಗ್ಗೆಯಾದರೂ ಚರ್ಚೆ ಮಾಡಲಿ, ಚಡ್ಡಿ ಬಗ್ಗೆಯಾದರೂ ಚರ್ಚೆ ಮಾಡಲಿ. ಅವರು ಹಾಕುವ ಪ್ಯಾಂಟ್ ಬಗ್ಗೆನೂ ಚರ್ಚೆ ಆಗಲಿ. ನಡಿಗೆ ಬಗ್ಗೆನೂ ಚರ್ಚೆ ಆಗಲಿ. ಅವರು ಮಲಗುವ ಕೋಣೆ ಬಗ್ಗೆಯಾದರೂ ಮಾತನಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಿಜೆಪಿಗೆ ತಿರುಗೇಟು‌ ನೀಡಿದರು.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಹುಲ್​ ಗಾಂಧಿ 10 ಲಕ್ಷ ರೂ. ಸೂಟ್ ಹಾಕಿಲ್ಲ. ನಾನು ರೋಲೆಕ್ಸ್ ವಾಚ್ ಹಾಕಿದ್ದೇನೆ. ನಾನು ಹಾಕಬಾರದಾ?. ನನ್ನ ಹಣದಲ್ಲಿ ಖರೀದಿ ಮಾಡಿದ್ದೇನೆ. ನಾನು ಈಗ ಹಾಕಿರುವ ಶೂ ಬೆಲೆ 900 ರೂ. ಅಷ್ಟೇ. ಹಣ್ಣು ಕೆಂಪು ಇದ್ದಾಗ ಮಾತ್ರ ಕಲ್ಲು ಹೊಡೆಯುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ರಾಹುಲ್ ಗಾಂಧಿಯ ಪ್ಯಾಂಟ್, ಚಡ್ಡಿ ಬಗ್ಗೆಯಾದರೂ ಮಾತನಾಡಲಿ: ಬಿಜೆಪಿಗೆ ಡಿಕೆಶಿ ತಿರುಗೇಟು

ಇದನ್ನೂ ಓದಿ: ಭಾರತ ಜೋಡೋ ಯಾತ್ರೆ.. ಚರ್ಚೆಗೀಡಾದ ರಾಹುಲ್​​​​​ ಟೀ ಶರ್ಟ್​ ಬೆಲೆ: ಬಿಜೆಪಿ ಟ್ವೀಟ್​ ವ್ಯಂಗ್ಯ.. ಕಾಂಗ್ರೆಸ್​ ತಿರುಗೇಟು

ರಾಹುಲ್ ಗಾಂಧಿ ಐರನ್ ಲೆಗ್ ಎಂಬ ಬಿಜೆಪಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಬಿಜೆಪಿಯವರು ಏನು ಬೇಕಿದರೂ ಹೇಳಲಿ. ಕತ್ತರಿ ಎರಡು ರೀತಿ ಉಪಯೋಗಕ್ಕೆ ಬರುತ್ತದೆ. ಬಟ್ಟೆ ಕತ್ತರಿ ಮಾಡುವುದಕ್ಕೂ ಉಪಯೋಗಕ್ಕೆ ಬರುತ್ತೆ. ಸೂಜಿಯನ್ನು ಹೊಲಿಯುವುದಕ್ಕೂ ಉಪಯೋಗಿಸುತ್ತಾರೆ. ಬಿಜೆಪಿಯವರು ದೇಶವನ್ನು ತುಂಡು ಮಾಡುತ್ತಿದ್ಧಾರೆ. ರಾಹುಲ್ ಗಾಂಧಿಯವರು ದೇಶ ಒಂದು ಮಾಡುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಕಬ್ಬಿಣದ ಕತ್ತರಿಯಿಂದ ಭಾರತ ತುಂಡರಿಸುತ್ತಿದ್ದಾರೆ, ನಾವು ಕಬ್ಬಿಣದಿಂದ ಮಾಡಿದ ಸೂಜಿಯಿಂದ ಭಾರತವನ್ನು ಜೋಡಿಸುತ್ತಿದ್ದೇವೆ ಎಂದರು.

ಇದನ್ನೂ ಓದಿ: ಬಿಜೆಪಿ ನಾಯಕನ ಭೇಟಿ ಮಾಡಿದ ಡಿಕೆ ಬ್ರದರ್ಸ್​; ಬೆಂಗಳೂರು ಮಳೆ ಹಾನಿ ಬಗ್ಗೆ ಗಡ್ಕರಿ ಜೊತೆ ಚರ್ಚೆ

ಬೆಂಗಳೂರು ಅನಾಹುತಕ್ಕೆ ಶಾಸಕರು ರಿಯಲ್ ಎಸ್ಟೇಟ್ ನಡೆಸುತ್ತಿರುವುದು ಕಾರಣ ಎಂಬ ಟ್ವೀಟ್​ ಮಾಡಿರುವ ನಟಿ ರಮ್ಯಾ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅವರು ನಮ್ಮ ನಾಯಕಿ, ಸಂಸದರಾಗಿದ್ದರು. ಈ ಬಗ್ಗೆ ಅವರ ಬಳಿಯೇ ಪ್ರತಿಕ್ರಿಯೆ ಕೇಳಿದರು. ಇದೇ ವೇಳೆ ಬಿಜೆಪಿ ಜನಸ್ಪಂದನಾ ಸಮಾವೇಶದ ಬಗ್ಗೆ ಪ್ರತಿಕ್ರಿಯಿಸಿ, ಮೂರು ವರ್ಷದ ಆಡಳಿತಾವಧಿಯಲ್ಲಿ ನಾವು ಜನರ ಜೊತೆ ಸ್ಪಂದಿಸಿಲ್ಲ. ಈಗ ಸ್ಪಂದಿಸುತ್ತೇವೆ ಎಂದು ಸಮಾವೇಶ ಮಾಡುತ್ತಿದ್ದಾರೆ ಎಂದು ಟಾಂಗ್ ‌ನೀಡಿದರು.

ಉದ್ಯೋಗ ಸೃಷ್ಟಿ ವೆಬ್​ಸೈಟ್​ಗೆ ಚಾಲನೆ: ಕೆಪಿಸಿಸಿ ಕಚೇರಿಯಲ್ಲಿ ಯುವ ಕಾಂಗ್ರೆಸ್​ನ ಉದ್ಯೋಗ ಸೃಷ್ಟಿ ವೆಬ್​ಸೈಟ್ (www.udyogasrishti.in)ಗೆ ಡಿಕೆ ಶಿವಕುಮಾರ್ ಚಾಲನೆ ನೀಡಿದರು. ರಾಹುಲ್‌ ಗಾಂಧಿ ನಾಯಕತ್ವದಲ್ಲಿ ದೇಶ ಒಗ್ಗೂಡಿಸಲು ಭಾರತ್ ಜೋಡೋ ಕಾರ್ಯಕ್ರಮ ನಡೆಯುತ್ತಿದೆ. ಉದ್ಯೋಗ ಸೃಷ್ಟಿ ಸಂಬಂಧ ಯುವಕರಿಂದ ಅಭಿಪ್ರಾಯ ಸಂಗ್ರಹಿಸುವ ಉದ್ದೇಶದಿಂದ ವೆಚ್​ಸೈಟ್​ಗೆ ಚಾಲನೆ ನೀಡಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: 4ನೇ ದಿನಕ್ಕೆ ಕಾಲಿಟ್ಟ 'ಭಾರತ್ ಜೋಡೋ ಯಾತ್ರೆ'.. ಇಂದು ಕೇರಳಕ್ಕೆ ಪ್ರವೇಶ

ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂಬ ಭರವಸೆ ಈಡೇರಿಸಲು ಪ್ರಧಾನಿಗೆ ಸಾಧ್ಯವಾಗಿಲ್ಲ. ನಾವು ಯುವಕರಿಗೆ ಭರವಸೆ ಕೊಡಲು ನಿಂತಿದ್ದೇನೆ. ಯುವಕರ ಬದುಕಲ್ಲಿ ಆಶಾವಾದ ಸೃಷ್ಟಿಸಬೇಕು. ಖಾಸಗಿ, ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ಅವಕಾಶ ನೀಡುವ ಉದ್ದೇಶ ನಮ್ಮದು. ಯುವಕರ ದನಿ ನಮ್ಮ ದನಿಯಾಗಿದೆ. ರಾಹುಲ್ ಗಾಂಧಿ ಭೇಟಿಯಾಗುವವರು ಕೂಡ ಈ ವೆಬ್​​ಸೈಟ್​ನಲ್ಲಿ ನೋಂದಣಿ ಮಾಡಲಿ. ಉದ್ಯೋಗ ಸೃಷ್ಟಿ ಮಾಡಲು, ನಿರುದ್ಯೋಗ ಸಮಸ್ಯೆ ನಿವಾರಿಸಲು ಈ ವೆಬ್​​ಸೈಟ್ಲ್ಲಿ​ನ ನೋಂದಣಿ ಮಾಡಲಿ ಎಂದು ಕರೆ ನೀಡಿದರು.

ಇದನ್ನೂ ಓದಿ: ಜನಸ್ಪಂದನ ಕಾರ್ಯಕ್ರಮದಲ್ಲಿ ಸಖತ್ ಸ್ಟೆಪ್ ಹಾಕಿದ ಎಂಟಿಬಿ, ವಿಶ್ವನಾಥ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.