ETV Bharat / state

ಡಿಸೆಂಬರ್‌ 1ರಿಂದ ಶಬರಿಮಲೆಗೆ KSRTC ವೋಲ್ವೊ ಬಸ್‌ ಸೇವೆ ಆರಂಭ

author img

By ETV Bharat Karnataka Team

Published : Nov 27, 2023, 10:58 PM IST

KSRTC Volvo bus to Sabarimala: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬೆಂಗಳೂರಿನಿಂದ ಶಬರಿಮಲೆಗೆ ವೋಲ್ವೊ ಬಸ್‌ ಸೇವೆ ಆರಂಭಿಸಲಿದೆ.

ksrtc-volvo-bus-service-to-sabarimala-from-december-one
ಡಿಸೆಂಬರ್‌ 1ರಿಂದ ಶಬರಿಮಲೆಗೆ KSRTC ವೋಲ್ವೊ ಬಸ್‌ ಸೇವೆ ಆರಂಭ

ಬೆಂಗಳೂರು: ರಾಜ್ಯದಿಂದ ಶಬರಿಮಲೆಗೆ ತೆರಳಲು ಪ್ರಯಾಣಿಕರ ಅನುಕೂಲತೆಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬೆಂಗಳೂರಿನಿಂದ ನೇರ ಶಬರಿಮಲೆಗೆ ವೋಲ್ವೊ ಬಸ್‌ ಸೇವೆ ಆರಂಭ ಮಾಡಲಿದೆ.

ಡಿಸೆಂಬರ್‌ 1 ರಿಂದ ಕೆಎಸ್‌ಆರ್‌ಟಿಸಿ ವೋಲ್ವೊ ಬಸ್‌ ಸಂಚಾರ ಪ್ರಾರಂಭವಾಗಲಿದೆ. ಪ್ರತಿ ನಿತ್ಯ ಬೆಂಗಳೂರು - ನೀಲಕ್ಕಲ್ (ಪಂಪಾ- ಶಬರಿಮಲೈ) ನಡುವೆ ಬಸ್​​ ಸಂಚಾರ ಇರಲಿದೆ. ವೋಲ್ವೊ ಬಸ್‌ ಬೆಂಗಳೂರಿನ ಶಾಂತಿನಗರ ಬಸ್‌ ನಿಲ್ದಾಣದಿಂದ ಹೊರಡಲಿದೆ. ಪ್ರತಿದಿನ ಮಧ್ಯಾಹ್ನ 1.50 ಗಂಟೆಗೆ ಹೊರಡಲಿರುವ ಬಸ್ ಮರುದಿನ ಬೆಳಗ್ಗೆ 6.45 ಕ್ಕೆ ಪಂಪಾ ತಲುಪಲಿದೆ. ಮತ್ತೊಂದು ಬಸ್‌ ದಿನಾಲೂ ಸಂಜೆ ಪಂಪಾದಿಂದ 6 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 10 ಗಂಟೆ ವೇಳೆಗೆ ಬೆಂಗಳೂರು ತಲುಪಲಿದೆ.

ಟಿಕೆಟ್‌ ದರ ಹೀಗಿದೆ: ಶಬರಿಮಲೆಗೆ ಈ ವೋಲ್ವೊ ಬಸ್​ನಲ್ಲಿ ಪ್ರಯಾಣಿಸಲು ವಯಸ್ಕರಿಗೆ ಬೆಂಗಳೂರಿಂದ 1,600 ರೂಪಾಯಿ ದರ ನಿಗದಿ ಮಾಡಲಾಗಿದೆ. ಈಗಾಗಲೇ ಟಿಕೆಟ್‌ ಬುಕ್ಕಿಂಗ್‌ ಆರಂಭವಾಗಿದೆ. ಶಬರಿಮಲೆಗೆ ಪ್ರಯಾಣ ಬಯಸುವವರು ಕೆಎಸ್ಆರ್​ಟಿಸಿ ಅಧಿಕೃತ ವೆಬ್​ಸೈಟ್ ಮೂಲಕ ಅಥವಾ ರಾಜ್ಯದ ಪ್ರಮುಖ ಬಸ್ ಡಿಪೋಗಳಲ್ಲಿ ಕಾರ್ಯನಿರ್ವಹಿಸುವ ಕೆಎಸ್‌ಆರ್‌ಟಿಸಿ ಟಿಕೆಟ್ ಕೌಂಟರ್‌ಗಳಲ್ಲಿ ಟಿಕೆಟ್ ಬುಕ್ಕಿಂಗ್‌​ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ: ಕೆಕೆಆರ್​ಟಿಸಿಯಿಂದ 'ಕಲ್ಯಾಣ ರಥ' ಹೈಟೆಕ್ ಸ್ಲೀಪರ್ ಬಸ್ ಸೇವೆ: ಆಗಸ್ಟ್ 28ರಂದು ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.