ETV Bharat / state

'ಒಪ್ಪಂದದ ಮೇರೆಗೆ..' ಕೆಎಸ್ಆರ್​ಟಿಸಿ ಬಸ್​ಗಳ ದರ ಹೆಚ್ಚಳ: ಇಂದಿನಿಂದಲೇ ಜಾರಿ

author img

By

Published : Dec 2, 2022, 7:04 AM IST

ಪರಿಷ್ಕೃತ ದರ ಇಂದಿನಿಂದ ಜಾರಿ. ಈಗಾಗಲೇ ಬುಕಿಂಗ್ ಮಾಡಿಕೊಂಡಿರುವ ವಾಹನಗಳಿಗೆ ಹಳೆಯ ದರ ವಿಧಿಸಲಾಗುವುದು ಎಂದು ಕೆಎಸ್ಆರ್​ಟಿಸಿ ತಿಳಿಸಿದೆ.

ksrtc-contract-carriage-raterevised
ಒಪ್ಪಂದದ ಮೇಲೆ ಒದಗಿಸುವ ಕೆಎಸ್ಆರ್​ಟಿಸಿ ಬಸ್​ಗಳ ದರ ಹೆಚ್ಚಳ

ಬೆಂಗಳೂರು: ಸಾಂದರ್ಭಿಕ ಒಪ್ಪಂದದ ಮೇಲೆ ಒದಗಿಸುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ(ಕೆಎಸ್‌ಆರ್‌ಟಿಸಿ) ಬಸ್ಸುಗಳ ದರವನ್ನು ಪರಿಷ್ಕರಿಸಲಾಗಿದೆ. ಇಂಧನ ದರ ಹಾಗೂ ಇತರೆ ವೆಚ್ಚಗಳ ಹೆಚ್ಚಳ ಹೊರೆ ಪರಿಗಣಿಸಿ ದರ ಪರಿಷ್ಕರಿಸಲಾಗಿದೆ ಎಂದು ಕೆಎಸ್​ಆರ್​ಟಿಸಿ ಹೇಳಿದೆ. ಪರಿಷ್ಕೃತ ದರದಂತೆ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್​ಗಳಿಗೆ ಕನಿಷ್ಠ 300 ಕಿಲೋಮೀಟರ್ ದಿನಕ್ಕೆ ನಿಗದಿಯಂತೆ ರಾಜ್ಯದೊಳಗೆ ಪ್ರತಿ ಕಿ.ಮೀ. ಗೆ 44 ರೂ, ಅಂತಾರಾಜ್ಯ ಸೇವೆ ಒದಗಿಸುವ ಬಸ್​ಗಳಿಗೆ ಪ್ರತಿ ಕಿ.ಮೀ. ಗೆ ರೂ.47 ನಿಗದಿಪಡಿಸಲಾಗಿದೆ.

ರಾಜಹಂಸ ಎಕ್ಸಿಕ್ಯೂಟಿವ್ 36 ಆಸನಗಳ ಬಸ್ ದರವನ್ನು ರಾಜ್ಯದೊಳಗೆ 46 ರೂ, ಅಂತಾರಾಜ್ಯಕ್ಕೆ 51 ರೂ, ರಾಜಹಂಸ 39 ಆಸನಗಳ ಬಸ್ ದರವನ್ನು 300 ಕಿಲೋಮೀಟರ್ ದಿನಕ್ಕೆ ಕನಿಷ್ಠ ನಿಗದಿಪಡಿಸಿದ್ದು ರಾಜ್ಯದೊಳಗೆ 49 ರೂ., ಹೊರರಾಜ್ಯಕ್ಕೆ 53 ರೂ. ನಿಗದಿ ಪಡಿಸಲಾಗಿದೆ. ರಾಜಹಂಸ 12 ಮೀಟರ್ ಚಾಸಿಸ್​ನ 44 ಆಸನಗಳ ಬಸ್ ದರವನ್ನು 300 ಕಿಲೋಮೀಟರ್ ಕನಿಷ್ಠ ದಿನಕ್ಕೆ ಪರಿಷ್ಕರಿಸಿದ್ದು ರಾಜ್ಯದೊಳಗೆ 51 ರೂ ಪ್ರತಿ ಕಿ.ಮೀ. ಗೆ ಹಾಗೂ ಹೊರ ರಾಜ್ಯಗಳಿಗೆ ಪ್ರತಿ ಕಿ.ಮೀ ಗೆ ರೂ.55 ಹೆಚ್ಚಿಸಲಾಗಿದೆ.

ಪರಿಷ್ಕೃತ ದರ ಇಂದಿನಿಂದ ಜಾರಿಗೆ ಬರಲಿವೆ. ಈ ಆದೇಶ ಹೊರಡಿಸುವ ಮೊದಲು ಬುಕಿಂಗ್ ಮಾಡಿಕೊಂಡಿರುವ ಒಪ್ಪಂದದ ವಾಹನಗಳಿಗೆ ಹಳೆಯ ದರಗಳನ್ನೇ ವಿಧಿಸಲಾಗುವುದು ಎಂದು ಕೆಎಸ್ಆರ್​ಟಿಸಿ ತಿಳಿಸಿದೆ.

ಇದನ್ನೂ ಓದಿ: ಸಿಬ್ಬಂದಿಗೆ 1 ಕೋಟಿ ರೂ ಮೊತ್ತದ ಅಪಘಾತ ವಿಮಾ ಸೌಲಭ್ಯ ಜಾರಿಗೊಳಿಸಿದ ಕೆಎಸ್​ಆರ್​ಟಿಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.