ನಾನು ಅಧ್ಯಕ್ಷರನ್ನು ಅವಹೇಳನ ಮಾಡಿಲ್ಲ, ಮುಜುಗರ ಉಂಟಾಗಿದ್ದರೆ ಕ್ಷಮೆ ಯಾಚಿಸುತ್ತೇನೆ : ಸಲೀಂ

author img

By

Published : Oct 13, 2021, 7:15 PM IST

apologize by Salim

ಯಡಿಯೂರಪ್ಪನವರ ಆಪ್ತ ವಲಯದಲ್ಲಿರುವ ವ್ಯಕ್ತಿಗಳು 700 ಕೋಟಿ ರೂಪಾಯಿಗೂ ಹೆಚ್ಚು ಹಗರಣ ಮಾಡಿದ್ದಾರೆ ಎಂದು ಚರ್ಚೆ ಮಾಡುತ್ತಿದ್ದೆವು. ಆದರೆ, ಅದನ್ನು ಮರೆಮಾಚಿದ್ದಾರೆ. ಡಿ ಕೆ ಶಿವಕುಮಾರ್​​ ಅವರು ನಮ್ಮಂತಹ ಅನೇಕ ಪಕ್ಷದ ಕಾರ್ಯಕರ್ತರಿಗೆ ರಾಜಕೀಯವಾಗಿ ಅವಕಾಶಗಳನ್ನು ನೀಡಿದ್ದಾರೆ. ಪಕ್ಷವನ್ನು ತಾಯಿಯಂತೆ ಕಾಣುವ ನಾನು, ಕಾಂಗ್ರೆಸ್ ಪಕ್ಷ ಕೈಗೊಳ್ಳುವ ಯಾವುದೇ ತೀರ್ಮಾನಕ್ಕೂ ಬದ್ಧನಾಗಿರುತ್ತೇನೆ. ನನ್ನ ಪ್ರಾಣ ಇರುವವರೆಗೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುತ್ತೇನೆ ಎಂದಿದ್ದಾರೆ..

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರಿಗೆ ಅವಹೇಳನಕಾರಿಯಾಗಿ ನಾನು ಮಾತನಾಡಿಲ್ಲ. ಆದಾಗ್ಯೂ, ಪಕ್ಷಕ್ಕೆ ಮತ್ತು ಕಾರ್ಯಕರ್ತರಿಗೆ ಮುಜುಗರ ಉಂಟಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಕೆಪಿಸಿಸಿ ಮಾಧ್ಯಮ ಸಂಯೋಜಕ ಎಂ ಎಸ್ ಸಲೀಂ ತಿಳಿಸಿದ್ದಾರೆ.

ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಅ.12ರಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ಸಂದರ್ಭದಲ್ಲಿ ಮಾಜಿ ಸಂಸರಾದ ಉಗ್ರಪ್ಪರೊಂದಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಮೂಲೆಗುಂಪು ಮಾಡಲು ಇವರ ಆಪ್ತರ ಮೇಲೆ ಇಡಿ ಹಾಗೂ ಐಟಿ ದಾಳಿ ಮುಖಾಂತರ ಗೂಬೆ ಕೂರಿಸುವ ಪ್ರಯತ್ನದ ಬಗ್ಗೆ ಚರ್ಚೆ ನಡೆಸುತ್ತಿದ್ದೆವು.

ಈ ವಿಷಯವನ್ನು ಮುಂದುವರೆಸಿ ಸುದ್ದಿಗೋಷ್ಠಿಯ ವೇಳೆ ನೀರಾವರಿ ಹಗರಣದ ಬಗ್ಗೆ ಯಡಿಯೂರಪ್ಪರವರ ಪುತ್ರ ವಿಜಯೇಂದ್ರರ ಆಪ್ತನಾಗಿದ್ದ ಉಮೇಶ್​ರವರ ಮೇಲೆ ನೇರ ಆರೋಪ ಕೇಳಿ ಬರುತ್ತಿದೆ. ಈ ವಿಷಯವನ್ನು ರಾಜಕೀಯವಾಗಿ ದುರ್ಬಬಳಕೆ ಮಾಡಿಕೊಳ್ಳಲು ಕುಮಾರಸ್ವಾಮಿರವರು ಹಾಗೂ ಇತರೆ ನಾಯಕರು ಕಾಂಗ್ರೆಸ್‌ ನಾಯಕರ ಮೇಲೆ ಆರೋಪ ಹೊರೆಸಿತ್ತಿರುವ ವಿಚಾರವನ್ನು ಶಿವಮೊಗ್ಗದಲ್ಲಿಯೂ ಕೂಡ ಚರ್ಚೆ ನಡೆಸುತ್ತಿದ್ದರು.

ಈ ವಿಷಯ ನಮ್ಮ ಗಮನಕ್ಕೂ ಬಂದಿತ್ತು. ನಾನೂ ಮೂಲತಃ ಶಿವಮೊಗ್ಗ ಮೂಲದವನಾಗಿದ್ದರಿಂದ ನನ್ನ ಬಿಜೆಪಿಯ ಕೆಲ ಸ್ನೇಹಿತರು ಈ ಬಗ್ಗೆ ತಿಳಿಸಿದ್ದರು. ಈ ವಿಷಯವನ್ನು ಉಗ್ರಪ್ಪರ ಬಳಿ ಚರ್ಚೆ ನಡೆಸುತ್ತಿದ್ದೆ ಎಂದು ವಿವರಿಸಿದ್ದಾರೆ.

ಯಡಿಯೂರಪ್ಪನವರ ಆಪ್ತ ವಲಯದಲ್ಲಿರುವ ವ್ಯಕ್ತಿಗಳು 700 ಕೋಟಿ ರೂಪಾಯಿಗೂ ಹೆಚ್ಚು ಹಗರಣ ಮಾಡಿದ್ದಾರೆ ಎಂದು ಚರ್ಚೆ ಮಾಡುತ್ತಿದ್ದೆವು. ಆದರೆ, ಅದನ್ನು ಮರೆಮಾಚಿದ್ದಾರೆ. ಡಿ ಕೆ ಶಿವಕುಮಾರ್​​ ಅವರು ನಮ್ಮಂತಹ ಅನೇಕ ಪಕ್ಷದ ಕಾರ್ಯಕರ್ತರಿಗೆ ರಾಜಕೀಯವಾಗಿ ಅವಕಾಶಗಳನ್ನು ನೀಡಿದ್ದಾರೆ. ಪಕ್ಷವನ್ನು ತಾಯಿಯಂತೆ ಕಾಣುವ ನಾನು, ಕಾಂಗ್ರೆಸ್ ಪಕ್ಷ ಕೈಗೊಳ್ಳುವ ಯಾವುದೇ ತೀರ್ಮಾನಕ್ಕೂ ಬದ್ಧನಾಗಿರುತ್ತೇನೆ. ನನ್ನ ಪ್ರಾಣ ಇರುವವರೆಗೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುತ್ತೇನೆ ಎಂದಿದ್ದಾರೆ.

ಈ ವಿಷಯವನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಂಡು ಹೇಸಿಗೆ ರಾಜಕಾರಣ ಮಾಡುತ್ತಿರುವ ಬಿಜೆಪಿಯವರು ಕುಡಿತದ ಮತ್ತಿನಲ್ಲಿ ಏನೇನೋ ಪ್ರಸ್ತಾಪಿಸುತ್ತಿದ್ದಾರೆ. ಬಿಜೆಪಿಯ ಹಲವು ನಾಯಕರ ವರ್ತನೆಯನ್ನು ಖಂಡಿಸುತ್ತೇನೆ. ಗೃಹ ಸಚಿವರು ಹೇಳಿರುವ ಹೇಳಿಕೆ ಹಾಸ್ಯಾಸ್ಪದ. ಮೊದಲು ಬಿಜೆಪಿ ನಾಯಕರ ಮೇಲಿರುವ ದೂರಿನ ಬಗ್ಗೆ ತನಿಖೆ ನಡೆಸಿದರೆ ಎಷ್ಟು ಜನ ಜೈಲು ಪಾಲಾಗುತ್ತಾರೆ.

ಮೊದಲು ಅವರನ್ನು ನೋಡಿಕೊಳ್ಳಲಿ, ಸಿಟಿ ರವಿಯೊಬ್ಬ ನಿರುದ್ಯೋಗಿ ಹಾಗೂ ಕೊತ್ವಾಲನ ರಕ್ತ ಸಂಬಂಧಿ ಎಂಬಂತೆ ಕಾಣುತ್ತಿದೆ. ಮೊದಲು ಇದನ್ನು ಪರೀಕ್ಷಿಸಿಕೊಳ್ಳಲಿ. ಡಿಕೆ ಶಿವಕುಮಾರ್​ ಅವರು ನಮ್ಮಂತಹ ಎಷ್ಟೋ ಕಾರ್ಯಕರ್ತರಿಗೆ ರಾಜಕೀಯ ಅಧಿಕಾರ ನೀಡಿದ್ದಾರೆ. ಇವರ ಬಗ್ಗೆ ಯಾವುದೇ ತರಹ ಕೆಟ್ಟ ಹೇಳಿಕೆಗಳನ್ನು ನೀಡಿಲ್ಲ.

ಆದಾಗ್ಯೂ, ಮಾಧ್ಯಮಗಳಲ್ಲಿ ಬಿತ್ತರವಾಗಿರುವ ಮಾಹಿತಿಯಿಂದ ಪಕ್ಷಕ್ಕೆ ಹಾಗೂ ಕಾರ್ಯಕರ್ತರಿಗೆ ಮುಜುಗರ ಅಥವಾ ಮನಸ್ಸಿಗೆ ನೋವುಂಟ ಮಾಡಿದ್ದರೆ ನಾನೂ ಅತ್ಯಂತ ವಿನಯದಿಂದ ಕ್ಷಮೆಯಾಚಿಸುತ್ತೇನೆ. ನನ್ನ ಜೀವನದ ಕೊನೆಯ ಕ್ಷಣದವರೆಗೂ ಕಾಂಗ್ರೆಸ್​ನ ಪ್ರಾಮಾಣಿಕ ಕಾರ್ಯಕರ್ತನಾಗಿರುತ್ತೇನೆ. ಈ ಮೂಲಕ ಕಾಂಗ್ರೆಸ್ ಪಕ್ಷ ಹಾಗೂ ಅಧ್ಯಕ್ಷರಿಗೆ ಕೃತಜ್ಞನಾಗಿರುತ್ತೇನೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ ಡಿಕೆಶಿ ಕುರಿತ ಉಗ್ರಪ್ಪ-ಸಲೀಂ ಸಂಭಾಷಣೆಯ ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.