ETV Bharat / state

'141 ಸಂಸದರ ಅಮಾನತುಗೊಳಿಸಿ ಪ್ರಜಾಪ್ರಭುತ್ವದ ಕಗ್ಗೊಲೆ'

author img

By ETV Bharat Karnataka Team

Published : Dec 20, 2023, 10:51 PM IST

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಭವನದಲ್ಲಿ ಪ್ರತಿಭಟನೆ
ಕಾಂಗ್ರೆಸ್ ಭವನದಲ್ಲಿ ಪ್ರತಿಭಟನೆ

ಬೆಂಗಳೂರು: ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 141 ಮಂದಿ ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ನಗರದ ರೇಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ದೇಶದ ಪ್ರಜಾಪ್ರಭುತ್ವವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಆಡಳಿತ ದಿನನಿತ್ಯ ಕಗ್ಗೊಲೆ ಮಾಡುತ್ತಿದೆ. ದೇಶದ ಸಂಸತ್ ಭವನದ ಒಳಗೆ ಬಿಜೆಪಿ ಬೆಂಬಲಿತ ದುಷ್ಕರ್ಮಿಗಳು ಒಳ ನುಗ್ಗಿ ದಾಂದಲೆ ನಡೆಸಿದನ್ನು ಖಂಡಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕರು ಪ್ರತಿಭಟನೆ ನಡೆಸಿದರೆ, ಅವರನ್ನು ಅಮಾನತುಗೊಳಿಸಿ ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.

ಭದ್ರತಾ ವೈಫಲ್ಯವನ್ನು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಇಬ್ಬರೂ ಸಹ ಮರೆಮಾಚುತಿದ್ದಾರೆ. ಇಡೀ ಜಗತ್ತಿಗೆ ಇದು ಜಗಜ್ಜಯಿರವಾಗಿದೆ. ದೇಶದ ರಕ್ಷಣೆ ವಿಷಯದಲ್ಲಿ ಮೋದಿ ಸರ್ಕಾರ ವಿಫಲವಾಗಿರುವುದು ಎದ್ದು ಕಾಣುತ್ತಿದೆ. ದೇಶದ ಸಂಸತ್ ಭವನಕ್ಕೆ ರಕ್ಷಣೆ ನೀಡಲು ಇವರು ಸಂಪೂರ್ಣ ವಿಫಲರಾಗಿದ್ದಾರೆ. ಪ್ರಧಾನಮಂತ್ರಿ ಹಾಗೂ ಗೃಹ ಸಚಿವರು ಇದಕ್ಕೆ ಹೊಣೆ ಹೊರಬೇಕು. ಇದರ ಬಗ್ಗೆ ಲೋಕಸಭೆ ಒಳಗೆ ಸ್ಪಷ್ಟ ಉತ್ತರ ನೀಡಲು ಇಬ್ಬರು ವಿಫಲರಾಗಿದ್ದಾರೆ ಹಾಗೂ ಪಲಾಯನವಾದವನ್ನು ಮಾಡುತ್ತಿದ್ದಾರೆ ಎಂದು ಮನೋಹರ್​ ದೂರಿದರು.

ಲೋಕಸಭಾ ಸ್ಪೀಕರ್ ಬಿಜೆಪಿ ಏಜೆಂಟರಂತೆ ವರ್ತಿಸುತ್ತಿರುವುದು ಅತ್ಯಂತ ದುರಾದೃಷ್ಟಕರ ಸಂಗತಿಯಾಗಿದೆ. ಲೋಕಸಭಾ ಸದಸ್ಯರಿಗೆ ರಕ್ಷಣೆ ನೀಡಬೇಕಾದ ಸ್ಪೀಕರ್ ವಿರೋಧ ಪಕ್ಷದ ಸದಸ್ಯರನ್ನು ಸದನದ ಹೊರಗೆ ಹೋರಾಟ ನಡೆಸುತ್ತಿದ್ದಾರೆ. ಇದು ದೇಶದ ಇತಿಹಾಸದಲ್ಲಿ ಅತ್ಯಂತ ಕರಾಳ ದಿನವಾಗಿದೆ. ವಿರೋಧ ಪಕ್ಷದ ಸಂಸದರು ನ್ಯಾಯ ಸಮ್ಮತವಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ದೇಶದ ಪ್ರತಿಯೊಬ್ಬ ಪ್ರಜೆಗೂ ಇಂದು ಮಾಹಿತಿ ದೊರಕುತ್ತಿದೆ. ಕೇಂದ್ರದ ವಿಫಲತೆಯನ್ನು ಸಹ ಜನ ಕಣ್ಣಾರೆ ಕಂಡಿದ್ದಾರೆ. ಜನರಿಗೆ ಹಾಗೂ ದೇಶಕ್ಕೆ ರಕ್ಷಣೆ ನೀಡಲು ವಿಫಲವಾಗಿರುವ ಬಿಜೆಪಿ ಸರ್ಕಾರ ತೊಲಗದೆ ಹೋದರೆ ಮುಂದಿನ ದಿನಗಳಲ್ಲಿ ದೇಶದ ಜನತೆ ತೀರ್ವ ಸಂಕಷ್ಟಕ್ಕೆ ಸಿಲುಕುತ್ತಾರೆ. ಕೂಡಲೇ ರಾಷ್ಟ್ರಪತಿಗಳು ಮಧ್ಯ ಪ್ರವೇಶಕ್ಕೆ ಸ್ಪೀಕರ್ ರನ್ನು ವಜಗೊಳಿಸಿ ಸಂಸತ್ ಕಲಾಪಕ್ಕೆ ಅವಕಾಶ ಕಲ್ಪಿತು ಕೊಡಬೇಕು. ಸರ್ವಾಧಿಕಾರಿಗಳ ದುರಾಡಳಿತ ಕೊನೆಯಾಗಬೇಕು ಎಂದು ಮನೋಹರ್​ ಹೇಳಿದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಮುಖಂಡರಾದ ಜಿ. ಜನಾರ್ಧನ್, ಎ. ಆನಂದ್,ಸುಧಾಕರ್ ರಾವ್, ಪ್ರಕಾಶ್, ಹೇಮರಾಜ್, ಬಾಲು, ಕೆ.ಟಿ.ನವೀನ್ ಪುಟ್ಟರಾಜು, ದರ್ಶನ್, ಚೇತನ್, ಚಿನ್ನಿಪ್ರಕಾಶ್, ಓಬಳೇಶ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

ಇದನ್ನೂ ಓದಿ : ಪಟ್ಟಣ ಪಂಚಾಯತ್​ ಮಾಡಿದ ರಸ್ತೆ ದುರಸ್ತಿಗೆ ಕ್ರೆಡಿಟ್​ ಬ್ಯಾನರ್: ಶಾಸಕ ಟಿ.ಡಿ.ರಾಜೇಗೌಡ ಸ್ಪಷ್ಟನೆ ಹೀಗಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.