ETV Bharat / state

ಕೋರಮಂಗಲ ಡಬಲ್ ಮರ್ಡರ್ ಪ್ರಕರಣ; ಲಕ್ಷ ಲಕ್ಷ ದೋಚಿದವನು ವಿದೇಶಿ ಮದ್ಯಕ್ಕಾಗಿ ಬಂದು ಸಿಕ್ಕಿಬಿದ್ದ

author img

By

Published : Dec 22, 2022, 10:01 AM IST

ಕೋರಮಂಗಲದ ಆರನೇ ಹಂತದ ಗೋಪಾಲರೆಡ್ಡಿ ಎಂಬುವವರ ಮನೆಯಲ್ಲಿ ಡಿಸೆಂಬರ್ 17ರ ರಾತ್ರಿ ಕೆಲಸಗಾರ ಕರಿಯಪ್ಪ ಹಾಗೂ ಸೆಕ್ಯುರಿಟಿ ಗಾರ್ಡ್ ದಿಲ್ ಬಹದ್ದೂರ್ ನನ್ನ ಕೊಂದು ಐದು ಲಕ್ಷ ನಗದು ಹಾಗೂ ನೂರು ಗ್ರಾಂ ಚಿನ್ನಾಭರಣವನ್ನ ಕಳ್ಳತನ ಮಾಡಲಾಗಿತ್ತು.

ಕೋರಮಂಗಲ ಡಬಲ್ ಮರ್ಡರ್ ಪ್ರಕರಣ; ಲಕ್ಷಲಕ್ಷ ದೋಚಿದವನು ವಿದೇಶಿ ಮದ್ಯಕ್ಕಾಗಿ ಬಂದು ಸಿಕ್ಕಿಬಿದ್ದ
kormangala-double-murder-case-story-behind-accused-arrest

ಬೆಂಗಳೂರು: ಕೋರಮಂಗಲದಲ್ಲಿ ನಡೆದ ಡಬಲ್ ಮರ್ಡರ್ ಪ್ರಕರಣದ ಆರೋಪಿಗಳು ಪೊಲೀಸರ ಕೈಗೆ ಸಿಕ್ಕ ರೋಚಕ ಕಹಾನಿ ಬಯಲಾಗಿದೆ. ಆರೋಪಿಗಳು ಮನೆ ಬಳಿ ಮಾಡಿದ್ದ ಕಸರತ್ತಿ‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜೊತೆಗೆ ಲಕ್ಷ ಲಕ್ಷ ಹಣ ದೋಚಿ ಹೆಣ್ಣಿನ ಹಿಂದೆ ಹೋದವನು ವಿದೇಶಿ ಮದ್ಯದ ಆಸೆಗಾಗಿ ವಾಪಸ್ ಬಂದು ಪೊಲೀಸರ ಅತಿಥಿಯಾಗಿದ್ದ ಕಥೆ ಸಹ ಬಟಾಬಯಲಾಗಿದೆ.

ಮನೆಯಲ್ಲಿ ಹಣದ ಜೊತೆ ಯುಎಸ್ ಡಾಲರ್ಸ್ ಮತ್ತು ನಾಲ್ಕು ಬಾಟೆಲ್ ಫಾರಿನ್ ಸ್ಕಾಚ್ ದೋಚಿದ್ದ ಆರೋಪಿಗಳು ಅದರಲ್ಲಿ ಒಂದು ಬಾಟೆಲ್ ಸ್ಕಾಚ್ ಕುಡಿದು ಮುಗಿಸಿದ್ದರು. ಬಳಿಕ ಹೆಣ್ಣಿನ ಆಸೆಗಾಗಿ ಆರೋಪಿ ಜಗದೀಶ್ ತುಮಕೂರಿಗೆ ಹೋಗಿದ್ದ. ಇನ್ನೂ ಮೂರು ಬಾಟೆಲ್ ಸ್ಕಾಚ್ ಮತ್ತು ಯುಸ್ ಡಾಲರನ್ನ ಬೆಂಗಳೂರಿನಲ್ಲೇ ಇಟ್ಟಿರುವುದನ್ನ ನೆನೆಸಿಕೊಂಡ ಜಗದೀಶ್ ಪೊಲೀಸರಿಗೆ ಸಿಕ್ಕಿದ್ರೂ ಪರವಾಗಿಲ್ಲ ಅಂತಾ ಬೆಂಗಳೂರಿಗೆ ವಾಪಸಾಗಿದ್ದ. ಅಷ್ಟೊತ್ತಿಗಾಗಲೇ ಜಗದೀಶನ ಮೊಬೈಲ್ ನೆಟ್‌ವರ್ಕ್ ಜಾಡು ಹಿಡಿದು ಹೊರಟಿದ್ದ ಕೋರಮಂಗಲ ಪೊಲೀಸರು ಆರೋಪಿಯನ್ನ ಬಂಧಿಸಿದ್ದರು.

ಕೋರಮಂಗಲದ ಆರನೇ ಹಂತದ ಗೋಪಾಲರೆಡ್ಡಿ ಎಂಬುವವರ ಮನೆಯಲ್ಲಿ ಡಿಸೆಂಬರ್ 17ರ ರಾತ್ರಿ ಕೆಲಸಗಾರ ಕರಿಯಪ್ಪ ಹಾಗೂ ಸೆಕ್ಯುರಿಟಿ ಗಾರ್ಡ್ ದಿಲ್ ಬಹದ್ದೂರ್ ನನ್ನ ಕೊಂದು ಐದು ಲಕ್ಷ ನಗದು ಹಾಗೂ ನೂರು ಗ್ರಾಂ ಚಿನ್ನಾಭರಣವನ್ನ ಕಳ್ಳತನ ಮಾಡಲಾಗಿತ್ತು. ಮೊದಲಿಗೆ ಕರಿಯಪ್ಪನ ಶವ ಮನೆಯಲ್ಲಿ ಪತ್ತೆಯಾಗಿದ್ದು, ಸಂಜೆ ಸೆಕ್ಯುರಿಟಿ ಗಾರ್ಡ್ ಶವ ಮನೆಯ ಹಿಂಬದಿಯ ಸಂಪಿನಲ್ಲಿ ಪತ್ತೆಯಾಗಿತ್ತು.

ಇದನ್ನೂ ಓದಿ: ಪತ್ನಿಯ ಅಪ್ರಾಪ್ತ ಸಹೋದರಿ ಮೇಲೆ ಮಾವಂದಿರು, ಪುತ್ರನಿಂದ ರೇಪ್​.. ಬಳಿಕ ವೇಶ್ಯಾವಾಟಿಕೆಗೆ ತಳ್ಳಿದ ಕೀಚಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.