ETV Bharat / state

ಸಾಮಾಜಿಕ ನ್ಯಾಯ ಬಿಜೆಪಿಯವರ ಪ್ರಣಾಳಿಕೆ ಮತ್ತು ನಡವಳಿಕೆಯಲ್ಲೂ ಇಲ್ಲ: ಖರ್ಗೆ

author img

By

Published : Aug 20, 2019, 5:52 PM IST

ಬಿಜೆಪಿಯವರು ಎಂದಿಗೂ ದೇಶವನ್ನು ಅಭಿವೃದ್ಧಿ ಮಾಡಲ್ಲ. ನಾವು ದೇಶದಲ್ಲಿ ಉತ್ತಮ ಕೆಲಸ ಮಾಡಿದ್ದೇವೆ. ಅವರು ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದಿದ್ದಾರೆ ಎಂದು ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಸಂಪುಟ ವಿಸ್ತರಣೆಯಲ್ಲಿ ಸಾಮಾಜಿಕ ನ್ಯಾಯ ಇಲ್ಲವೆಂದು ಜರಿದಿದ್ದಾರೆ.

ಬಿಜೆಪಿ ವಿರುದ್ಧ ಖರ್ಗೆ ಕಿಡಿ

ಬೆಂಗಳೂರು: ಬಿಜೆಪಿಯವರು ಅಲ್ಪಸಂಖ್ಯಾತ, ದಲಿತರು ಹಾಗೂ ರೈತರನ್ನು ಸರ್ವನಾಶ ಮಾಡುತ್ತಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.

ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಮಾಜಿ ಪ್ರಧಾನಿ ರಾಜೀವ್​ಗಾಂಧಿ ಹಾಗೂ ದೇವರಾಜ ಅರಸು ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯ ಬಿಜೆಪಿ ಸರ್ಕಾರದಲ್ಲಿ, ಆರ್​ಎಸ್​ಎಸ್​ ನೇತೃತ್ವದಲ್ಲಿ ಸಿಗುತ್ತೆ ಅನ್ನುವ ನಂಬಿಕೆ ನನಗಿಲ್ಲ. ಪ್ರಮಾಣವಚನ ಸ್ವೀಕರಿಸಿರುವ ಸಚಿವರ ಲಿಸ್ಟ್ ನೋಡಿದ್ರೆ ಅದು ಗೊತ್ತಾಗುತ್ತೆ. ಯಾವ್ಯಾವ ಭಾಗಕ್ಕೆ ಏನು ಸ್ಥಾನಮಾನ ಕೊಟ್ಟಿದ್ದಾರೆ ಅನ್ನೋದು ತಿಳಿಯುತ್ತೆ. ಸಾಮಾಜಿಕ ನ್ಯಾಯ ಬಿಜೆಪಿಯವರ ಮ್ಯಾನಿಫೆಸ್ಟೋ(ಪ್ರಣಾಳಿಕೆ) ಮತ್ತು ಅವರ ನಡವಳಿಕೆಯಲ್ಲೂ ಇಲ್ಲ. ಈ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ವಿರುದ್ಧ ಖರ್ಗೆ ಕಿಡಿ

ಪ್ರಧಾನಿ ಮೋದಿಯವರು ಗ್ರೇಟ್ ಅಂತ ಸುಮ್ಮನೆ ಹೇಳ್ತಾರೆ. ಮೋದಿ ದೇಶಕ್ಕೆ ಏನು ಮಾಡಿದ್ದಾರೆ ತೋರಿಸಲಿ. ರೈತರು, ಬಡವರ ಬಗ್ಗೆ ನಾವು ಕಾಳಜಿ ಇಟ್ಟಕೊಂಡಿದ್ದೆವು. ಅಲ್ಲದೆ ಬಿಜೆಪಿಯವರು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದು, ನಾವು ದೇಶದ ಅಭಿವೃದ್ಧಿಯನ್ನ ಮಾಡಿದವರು. ಅವರು, ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡ್ತಾರೆ. ಮೊದಲ ಬಾರಿ ಮೋದಿ ತಲೆಬಾಗಿ ಸಂಸತ್ತಿಗೆ ಕಾಲಿಟ್ಟಿದ್ದರು. ಈ ಬಾರಿ ಸಂವಿಧಾನಕ್ಕೆ ನಮಸ್ಕರಿಸಿ ಹೋಗಿದ್ದಾರೆ. ಆದ್ರೆ ಅವರು ಸಂದರ್ಭಕ್ಕೆ ತಕ್ಕಂತೆ ನಾಟಕವಾಡ್ತಾರೆ ಎಂದು ಪ್ರಧಾನಿ ಮತ್ತು ಬಿಜೆಪಿಯನ್ನು ಖರ್ಗೆ ಟೀಕಿಸಿದ್ರು.

Intro:ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ..!!!!!!


ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆ ಹಿನ್ನೆಲೆ‌ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿ ಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಅಂಬೇಡ್ಕರ್ ಭವನದಲ್ಲಿ ನಡೆದ ಮಾಜಿ ಪ್ರಧಾನಿ ರಾಜೀವ್ವಗಾಂಧಿ ಹಾಗೂ ದೇವರಾಜ ಅರಸು ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಮಾಧ್ಯಮಗಳ ಜೊತೆ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ ಸಾಮಾಜಿಕ ನ್ಯಾಯ ಬಿಜೆಪಿ ಸರ್ಕಾರದಲ್ಲಿ, RSS ನೇತೃತ್ವದಲ್ಲಿ ಸಿಗುತ್ತೆ ಅಂತ ನನಗೆ ನಂಬಿಕೆ ಇಲ್ಲ.
ಪ್ರಮಾಣ ವಚನ ಸ್ವೀಕರಿಸಿರುವ ಸಚಿವರ ಲಿಸ್ಟ್ ನೋಡಿದ್ರೆ ಅದು ಗೊತ್ತಾಗುತ್ತೆ, ಹೇಗೆ ಕೊಟ್ಟಿದ್ದಾರೆ ಯಾವ್ಯಾವ ಭಾಗಕ್ಕೆ ಏನು ಸ್ಥಾನ ಮಾನ ಕೊಟ್ಟಿದ್ದಾರೆ ಅನ್ನೋದು ಗೊತ್ತಾಗುತ್ತೆ. ಸಾಮಾಜಿಕ ನ್ಯಾಯ ಬಿಜೆಪಿಯವರ ಮ್ಯಾನಿಫೆಸ್ಟೋ ದಲ್ಲೂ ಇಲ್ಲ, ಅವರ
ನಡವಳಿಕೆಯಲ್ಲೂ ಇರಲ್ಲ. ಈ ಬಗ್ಗೆ ಹೆಚ್ಚು ಹೇಳುವ ಅವಶ್ಯಕಥೆ ಇಲ್ಲ.Body:ನಮ್ಮ ಮೊಬೈಲ್ ನಿಂದಲೇ ನಮ್ಮನ್ನ ಸೋಲಿಸಿದ್ರು. ಇಲ್ಲದ ಆ್ಯಕ್ಟಿವಿಟೀಸ್ ಮಾಡಿ ಬಿಜೆಪಿ
ಯವರು ನಮ್ಮನ್ಬ ಸೋಲಿಸಿದ್ರು.ಕಷ್ಟ ಕಾಲದಲ್ಲಿ ನಮ್ಮ ಜೊತೆ ಯಾರೂ ಬರಲ್ಲ.ಅದನ್ನ ಅರಿತು ಜನರ ಜೊತೆ ನಾವು ಬೆರೆಯಬೇಕು. ಬಿಜೆಪಿಯವರು ಅಲ್ಪಸಂಖ್ಯಾತ
,ದಲಿತರು ಹಾಗೂ ,ರೈತರನ್ನು ಸರ್ವನಾಶ ಮಾಡುತ್ತಾರೆ.
ಪ್ರಧಾನಿ ಮೋದಿಯವರು ಗ್ರೇಟ್ ಅಂತ ಸುಮ್ಮನೆ ಹೇಳ್ತಾರೆ. ಮೋದಿ ದೇಶಕ್ಕೆ ಏನು ಮಾಡಿದ್ದಾರೆ ತೋರಿಸಲಿ.ರೈತರು,ಬಡವರ ಬಗ್ಗೆ ನಾವು ಕಾಳಜಿ ವಹಿಸಿದ್ದೇವು. ಬಿಜೆಪಿಯವರು ರೈತರನ್ನ ಬೆಳೆಸ್ತಾರ ಎಂದು ಖರ್ಗೆ ಬಿಜೆಪಿ ವಿರುದ್ದ ಗುಡುಗಿದರು.ಅಲ್ಲದೆ
ಬಿಜೆಪಿ ಯವರು ಸುಳ್ಳು ಹೇಳಿ ಹೇಳಿ ಅಧಿಕಾರಕ್ಕೆ ಬಂದವರು. ದೇಶದ ಅಭಿವೃದ್ಧಿಯನ್ನ ಮಾಡಿದವರು ನಾವು,ಆದರೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದವರು ಅವರು,ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡ್ತಾರೆ.
ಮೊದಲ ಬಾರಿ ಮೋದಿ ತಲೆಬಾಗಿ ಸಂಸತ್ತಿಗೆ ಕಾಲಿಟ್ಟರು
ಈ ಭಾರಿ ಸಂವಿಧಾನಕ್ಕೆ ನಮಸ್ಕರಿಸಿ ಹೋಗಿದ್ದಾರೆ.
ಪ್ರಧಾನಿ ಮೋದಿ ಸಂದರ್ಭಕ್ಕೆ ತಕ್ಕಂತ ನಾಟಕವಾಡ್ತಾರೆ.
ಹೀಗಾಗಿ ನಾವು ಮೌತು ಟುಮೌತು ಸಂಪರ್ಕಿಸಬೇಕು.
ಜನರ ಜೊತೆ ಮಾತನಾಡಿ ಹಿಡಿದಿಡಬೇಕು.ಯಾಕಂದ್ರೆ ನಮ್ಮ ಸೋಶಿಯಲ್ ಮಿಡಿಯಾ ಪ್ರಬಲವಾಗಿಲ್ಲ.
ಅಲ್ಲದೆ ಅಲ್ಪಸಂಖ್ಯಾತರು,ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಇದನ್ನ ಎದುರಿಸಲು ನಾವು ಬಿಜೆಪಿ ವಿರುದ್ಧ ನಿಲ್ಲಬೇಕು. ನಮ್ಮ ಹಿಂದಿನ ಕೊಡುಗೆಯನ್ನ ಜನರಿಗೆಮನವರಿಕೆಮಾಡಬೇಕುಎಂದುಮಲ್ಲಿಕಾರ್ಜುನ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ವಿರುದ್ದ ವಾಗ್ದಾಳಿನಡೆಸಿದರು.


ಸತೀಶ ಎಂಬಿConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.