ಗಸ್ತು ಅರಣ್ಯ ಪಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ: ಅರ್ಹತೆ, ಅರ್ಜಿ ಸಲ್ಲಿಕೆ, ವೇತನದ ವಿವರ

author img

By ETV Bharat Karnataka Desk

Published : Dec 4, 2023, 11:53 AM IST

Karnataka Forest Department  job notification for 540 forest guard recruitment for 2023-24

Forest Guard Recruitment: ಕರ್ನಾಟಕ ಅರಣ್ಯ ಇಲಾಖೆಯ 13 ವೃತ್ತಗಳಲ್ಲಿ ಒಟ್ಟು 540 ಗಸ್ತು ಅರಣ್ಯ ಪಾಲಕ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರು: ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಒಟ್ಟು 540 ಅರಣ್ಯ ಪಾಲಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಇವು ಗ್ರೂಪ್​ ಸಿ ಹುದ್ದೆಗಳಾಗಿವೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅಧಿಸೂಚನೆ
ಅಧಿಸೂಚನೆ

ಹುದ್ದೆಗಳು- ಎಲ್ಲಿ, ಎಷ್ಟು?:

  • ಬೆಂಗಳೂರು 49
  • ಬೆಳಗಾವಿ 12
  • ಬಳ್ಳಾರಿ 29
  • ಚಾಮರಾಜನಗರ 83
  • ಚಿಕ್ಕಮಗಳೂರು 52
  • ಧಾರವಾಡ 5
  • ಹಾಸನ 18
  • ಕಲಬುರಗಿ 58
  • ಕೆನಾರ 33
  • ಕೊಡಗು 26
  • ಮಂಗಳೂರು 62
  • ಮೈಸೂರು 47
  • ಶಿವಮೊಗ್ಗ 66

ವಿದ್ಯಾರ್ಹತೆ: ಅಧಿಕೃತ ಮಂಡಳಿಗಳಿಂದ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ವಯೋಮಿತಿ: ಕನಿಷ್ಠ 18 ವರ್ಷ ಮತ್ತು ಗರಿಷ್ಠ 27 ವರ್ಷ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇದೆ.

ವೇತನ: ಮಾಸಿಕ 23,500-47,650 ರೂಪಾಯಿ.

ಅರ್ಜಿ ಸಲ್ಲಿಕೆ, ಅರ್ಜಿ ಶುಲ್ಕ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕಿದೆ. ಅರ್ಜಿ ಶುಲ್ಕವನ್ನು ಆನ್​ಲೈನ್​ ಮೂಲಕವೇ ಪಾವತಿಸಬೇಕು.

  • ಪ.ಜಾ, ಪ. ಪಂ ಮತ್ತು ಪ್ರವರ್ಗ 1 ಪುರುಷ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 120 ರೂ.
  • ಪ.ಜಾ, ಪ.ಪಂ ಮತ್ತು ಪ್ರವರ್ಗ 1 ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 70 ರೂ.
  • ಪ್ರವರ್ಗ 2ಎ, 2ಬಿ, 3ಎ, 3ಬಿ ಪುರುಷ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 220 ರೂ.
  • ಪ್ರವರ್ಗ 2ಎ, 2ಬಿ, 3ಎ, 3ಬಿ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 120 ರೂ.

ಆಯ್ಕೆ ಪ್ರಕ್ರಿಯೆ: ಮೆರಿಟ್​ ಪಟ್ಟಿ, ದಾಖಲಾತಿ ಪರೀಕ್ಷೆ, ದೈಹಿಕ ಗುಣಮಟ್ಟ, ದೈಹಿಕ ಸಾಮರ್ಥ್ಯ, ಶ್ರವಣ ಹಾಗು ದೃಷ್ಟಿ ಪರೀಕ್ಷೆಯ ಮೂಲಕ ಆಯ್ಕೆ.

ಡಿಸೆಂಬರ್​ 1ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಡಿಸೆಂಬರ್​ 30. ಶುಲ್ಕ ಪಾವತಿಗೆ ಕಡೆಯ ದಿನಾಂಕ ಜನವರಿ 5. ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ, ಅರ್ಜಿ ಸಲ್ಲಿಕೆಗೆ ಅಭ್ಯರ್ಥಿಗಳು kfdrecruitment.in ಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ: 4 ಜಿಲ್ಲಾ ನ್ಯಾಯಾಲಯದಲ್ಲಿದೆ ಉದ್ಯೋಗಾವಕಾಶ: ಜವಾನ, ಟೈಪಿಸ್ಟ್​​ ಸೇರಿದಂತೆ ಹಲವು ಹುದ್ದೆಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.