ETV Bharat / state

ಮತ್ತೆ ಕೋವಿಡ್​ ಆರ್ಭಟ: ರಾಜ್ಯದಲ್ಲಿಂದು 2,886 ಕೇಸ್​ ಸಂಖ್ಯೆ,  8 ಮಂದಿ ಬಲಿ

author img

By

Published : Mar 27, 2021, 6:55 PM IST

ರಾಜ್ಯದಲ್ಲಿ ಮತ್ತೆ ಕೊರೊನಾ ಸೋಂಕು ಸ್ಫೋಟಿಸಿದೆ. ಇಂದು 2,886 ಜನರಿಗೆ ಕೋವಿಡ್​ ಸೋಂಕು ದೃಢಪಟ್ಟಿದ್ದು, 8 ಮಂದಿ ಸಾವನ್ನಪ್ಪಿದ್ದಾರೆ.

karnataka Covid Bulletin update
ಕರ್ನಾಟಕ ಕೋವಿಡ್​ ಅಪ್ಡೇಟ್​​

ಬೆಂಗಳೂರು: ರಾಜ್ಯದಲ್ಲಿಂದು ಮತ್ತೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, 2,886 ಜನರಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,83,930ಕ್ಕೆ ಏರಿಕೆಯಾಗಿದೆ.

8 ಮಂದಿ ಸೋಂಕಿತರು ಮೃತಪಟ್ಟಿದ್ದು, ಮೃತರ ಸಂಖ್ಯೆ 12,492ಕ್ಕೆ ಏರಿದೆ.‌ 1,179 ಮಂದಿ ಗುಣಮುಖರಾಗಿದ್ದು 9,50,167 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇತ್ತ ಮತ್ತೆ ಸಕ್ರಿಯ ಪ್ರಕರಣಗಳು 21,252ಕ್ಕೆ ಏರಿದ್ದು, 196 ಮಂದಿ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌

ಓದಿ: ಬೆಂಗಳೂರಿನಲ್ಲಿಂದು ಅತಿಹೆಚ್ಚು ಕೊರೊನಾ ಕೇಸ್​.. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಅಭಾವ

ಸೋಂಕಿತರ ಪ್ರಕರಣಗಳು 2.68% ರಷ್ಟಿದ್ದರೆ, ಮೃತಪಟ್ಟವರ ಪ್ರಮಾಣ ಶೇ. 0.27% ರಷ್ಟಿದೆ. ವಿಮಾನ ನಿಲ್ದಾಣದಿಂದ 436 ಮಂದಿ ಪ್ರಯಾಣಿಕರು ಆಗಮಿಸಿದ್ದು, ತಪಾಸಣೆ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.