ETV Bharat / state

ರಾಜ್ಯದಲ್ಲಿಂದು 1,653 ಮಂದಿಗೆ ಸೋಂಕು, 31ಮಂದಿ ಸಾವು

author img

By

Published : Jul 22, 2021, 8:30 PM IST

ರಾಜ್ಯದಲ್ಲಿಂದು 1,653 ಮಂದಿಗೆ ಕೋವಿಡ್​​ ಸೋಂಕು ದೃಢಪಟ್ಟಿದೆ. 31 ಮಂದಿ ಸೋಂಕಿತರು ಕೊರೊನಾಗೆ ಬಲಿಯಾಗಿದ್ದಾರೆ.

Covid 19 update
ಕರ್ನಾಟಕ ಕೋವಿಡ್​​ ಅಪ್ಡೇಟ್​​

ಬೆಂಗಳೂರು: ರಾಜ್ಯದಲ್ಲಿಂದು 1,40,343 ಜನರಿಗೆ ಕೊರೊನಾ‌ ಟೆಸ್ಟ್ ಮಾಡಿದ್ದು, ಇದರಲ್ಲಿ 1,653 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 28,89,994ಕ್ಕೆ ಏರಿಕೆಯಾಗಿದೆ.

ಪಾಸಿಟಿವಿಟಿ ದರ ಶೇ 1.17ರಷ್ಟಿದೆ. ಇಂದು 2,572 ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೆ 28,28,983 ಜನರು ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. 24,695 ಸಕ್ರಿಯ ಪ್ರಕರಣಗಳಿವೆ.

ಇಂದು 31 ಸೋಂಕಿತರು ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 36,293ಕ್ಕೆ ಏರಿದೆ. ಸಾವಿನ‌ ಶೇಕಡಾವಾರು ಪ್ರಮಾಣ ಶೇ 1.87ರಷ್ಟಿದೆ. ಯುಕೆಯಿಂದ 99 ಪ್ರಯಾಣಿಕರು ಆಗಮಿಸಿದ್ದು, ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ಕೊರೊನಾ ಕೊಂಚ ಇಳಿಕೆ: ಕಳೆದ 24 ಗಂಟೆಗಳಲ್ಲಿ 41,383 ಕೇಸ್​ಗಳು ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.