ETV Bharat / state

ನೀರು ಸಂರಕ್ಷಣೆಗೆ ಜಲನಿಧಿ ಹೊಸ ಯೋಜನೆ: 75 ಕೋಟಿ ರೂ. ಅನುದಾನ ಮೀಸಲು

author img

By

Published : Feb 17, 2023, 11:23 AM IST

Updated : Feb 17, 2023, 12:20 PM IST

ಕರ್ನಾಟಜ 2023: ನೀರಿನ ಸಂರಕ್ಷಣೆಗೆ ಆದ್ಯತೆ- ಜಲಜೀವನ್‌ ಮಿಷನ್​ಗೆ 6,234 ಕೋಟಿ ರೂ.

Karnataka Budget 2023 Highlights
ಕರ್ನಾಟಕ ಬಜೆಟ್

ಬೆಂಗಳೂರು: ರೈತರ ಜಮೀನುಗಳಲ್ಲಿ ಜಲಹೊಂಡ ನಿರ್ಮಿಸಿ ನೀರು ಸಂರಕ್ಷಣೆಗೆ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಜಲನಿಧಿ ಹೊಸ ಯೋಜನೆಯನ್ನು ಪ್ರಾರಂಭಿಸಲಾಗುವುದು. ಇದರಡಿಯಲ್ಲಿ ನರೇಗಾ ಯೋಜನೆಯ ಸಮನ್ವಯದೊಂದಿಗೆ ರೈತರಿಗೆ ಜಮೀನಿನಲ್ಲಿ ಜಲಹೊಂಡವನ್ನು ನಿರ್ಮಿಸಲು ಪ್ರೋತ್ಸಾಹಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ.

ಅರೆ ಮಲೆನಾಡು ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ನೀರು ಸಂರಕ್ಷಣೆಗಾಗಿ ಬಾವಿ, ಕಿಂಡಿ, ಅಣೆ, ನಾಲಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಈ ಎರಡೂ ಯೋಜನೆಗಳಿಗೆ 75 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ.

  • ರೈತರ ಜಮೀನುಗಳಲ್ಲಿ ಜಲಹೊಂಡ ನಿರ್ಮಿಸಿ ನೀರು ಸಂರಕ್ಷಣೆಗೆ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಜಲನಿಧಿ ಹೊಸ ಯೋಜನೆಯನ್ನು ಪ್ರಾರಂಭಿಸಲಾಗುವುದು. ಇದರಡಿಯಲ್ಲಿ ನರೇಗಾ ಯೋಜನೆಯ ಸಮನ್ವಯದೊಂದಿಗೆ ರೈತರಿಗೆ ಜಮೀನಿನಲ್ಲಿ ಜಲಹೊಂಡವನ್ನು ನಿರ್ಮಿಸಲು ಪ್ರೋತ್ಸಾಹ. @BSBommai @narendramodi #ಜನಸ್ನೇಹಿಬಜೆಟ್#BharavaseyaBudget2023

    — BJP Karnataka (@BJP4Karnataka) February 17, 2023 " class="align-text-top noRightClick twitterSection" data=" ">

ಕರ್ನಾಟಕ ತೋಟಗಾರಿಕೆ ವಲಯದಲ್ಲಿ ಅಪಾರ ಸಾಧನೆ ಮಾಡಿ ದೇಶದಲ್ಲಿಯೇ ಅತ್ಯುತ್ತಮ ತೋಟಗಾರಿಕೆ ರಾಜ್ಯ ಎಂದು ಪ್ರಶಸ್ತಿ ಪಡೆದಿದೆ. ರಾಜ್ಯದ 26.21 ಲಕ್ಷ ಹೆಕ್ಟೇರ್ ವಿಸ್ತೀರ್ಣ ಪ್ರದೇಶದ ತೋಟಗಾರಿಕೆ ಬೆಳೆಗಳಿಂದ ಲಭಿಸುವ 242 ಲಕ್ಷ ಮೆಟ್ರಿಕ್‌ ಟನ್‌ ವಾರ್ಷಿಕ ಉತ್ಪನ್ನದ ಮೌಲ್ಯವು 66,263 ಕೋಟಿ ರೂ. ಗಳಾಗಿದೆ. ಇದು ರಾಜ್ಯದಲ್ಲಿನ ಸಮಗ್ರ ಕೃಷಿ ವಲಯದ ಒಟ್ಟಾರೆ ಆದಾಯದ ಶೇ.30 ರಷ್ಟಿದೆ.

ಕಳಸಾ ಬಂಡೂರಿ ನಾಲೆ ವಿಸ್ತರಣೆ- 80 ಕೋಟಿ ರೂ, ಕಳಸಾ ಬಂಡೂರಿ ನಾಲೆ ವಿಸ್ತರಣೆ ಯೋಜನೆಗೆ ಡಿಪಿಆರ್​​ಗೆ ಅನುಮೋದನೆ ಪಡೆಯಲಾಗಿದೆ. ಯೋಜನೆ ಅನುಷ್ಠಾನಕ್ಕೆ 80 ಕೋಟಿ ರೂ. ಅನುದಾನ ಘೋಷಿಸಲಾಗಿದೆ. ತ್ವರಿತ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ: ರೈತರಿಗೆ ಸಿಹಿಸುದ್ದಿ ನೀಡಿದ ಬೊಮ್ಮಾಯಿ: 3 ಲಕ್ಷದವರೆಗಿದ್ದ ಶೂನ್ಯ ಬಡ್ಡಿದರ ಸಾಲದ ಮೊತ್ತ 5 ಲಕ್ಷಕ್ಕೆ ಏರಿಕೆ.

ಯೋಜನೆ ಹಾಗೂ ಅನುದಾನದ ವಿವರ: ಕಳಸಾ ಬಂಡೂರಿ ಯೋಜನೆ-80 ಕೋಟಿ ರೂ., ನರೇಗಾ ಯೋಜನೆಗೆ - 1 ಸಾವಿರ ಕೋಟಿ ರೂ., ಗಂಗಾ ಕಲ್ಯಾಣ್ ಯೋಜನೆಗೆ- 675 ಕೋಟಿರೂ., ಮಹದಾಯಿ ಯೋಜನೆಗೆ - 1 ಸಾವಿರ ಕೋಟಿ ರೂ. ಅನುದಾನ ಘೋಷಿಸಲಾಗಿದೆ.

  • ಅರೆ ಮಲೆನಾಡು ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ನೀರು ಸಂರಕ್ಷಣೆಗಾಗಿ ಬಾವಿ, ಕಿಂಡಿ, ಅಣೆ, ನಾಲಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಈ ಎರಡೂ ಯೋಜನೆಗಳಿಗೆ 75 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ.@BSBommai @narendramodi #ಜನಸ್ನೇಹಿಬಜೆಟ್#BharavaseyaBudget2023

    — BJP Karnataka (@BJP4Karnataka) February 17, 2023 " class="align-text-top noRightClick twitterSection" data=" ">

ಯಾವ ಇಲಾಖೆಗೆ ಎಷ್ಟೆಷ್ಟು ಅನುದಾನ?: ಶಿಕ್ಷಣ ಇಲಾಖೆಗೆ- 37,960 ಕೋಟಿ ರೂ., ಜಲಸಂಪನ್ಮೂಲ ಇಲಾಖೆ-22,854 ಕೋಟಿ ರೂ., ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ- 20,494 ಕೋಟಿ ರೂ., ನಗರಾಭಿವೃದ್ಧಿ ಇಲಾಖೆಗೆ-17,938 ಕೋಟಿ ರೂ., ಕಂದಾಯ ಇಲಾಖೆಗೆ- 15,943 ಕೋಟಿ ರೂ., ಆರೋಗ್ಯ ಇಲಾಖೆಗೆ- 15,151 ಕೋಟಿ ರೂ., ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ-14,509 ಕೋಟಿ ರೂ., ಇಂಧನ ಇಲಾಖೆಗೆ-13,803 ಕೋಟಿ ರೂ., ಸಮಾಜ ಕಲ್ಯಾಣ ಇಲಾಖೆಗೆ-11,163 ಕೋಟಿ ರೂ., ಲೋಕೋಪಯೋಗಿ ಇಲಾಖೆಗೆ-10,741 ಕೋಟಿ ರೂ., ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ-9,456 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ-5,676 ಕೋಟಿ ರೂ., ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಗೆ-4,600 ಕೋಟಿ ರೂ., ವಸತಿ ಇಲಾಖೆ- 3,787 ಕೋಟಿ ರೂ. ಹಾಗೂ ಇತರೆ: 1,16,968 ಕೋಟಿ ರೂ. ಅನುದಾನ ನೀಡಲಾಗಿದೆ.

ಇದನ್ನೂ ಓದಿ: ಮಕ್ಕಳ ಬಸ್ ಯೋಜನೆ ಪ್ರಾರಂಭಕ್ಕೆ ನಿರ್ಧಾರ: 100 ಕೋಟಿ ಅನುದಾನ

Last Updated : Feb 17, 2023, 12:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.