ETV Bharat / state

ಬೆಂಗಳೂರಲ್ಲಿ ಆಟೋ ಓಡಿಸುತ್ತಲೇ ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆಗೆ ಕುಮ್ಮಕ್ಕು..​ ಹಿಜ್ಬುಲ್​ ಉಗ್ರನ 'ಸ್ಫೋಟಕ' ಮಾಹಿತಿ ಬಹಿರಂಗ​

author img

By

Published : Jun 7, 2022, 1:13 PM IST

Updated : Jun 7, 2022, 1:37 PM IST

ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಆಗಿದ್ದ ತಾಲೀಬ್ ಹುಸೇನ್​ನನ್ನು ಜಮ್ಮು-ಕಾಶ್ಮೀರ ಪೊಲೀಸರು ಹಾಗೂ ಕೇಂದ್ರ ಭದ್ರತಾ ಪಡೆ ಜಂಟಿ ಕಾರ್ಯಾಚರಣೆ ನಡೆಸಿ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಈತನ ಕುರಿತಾದ ಸ್ಫೋಟಕ ವಿಷಯ ಇದೀಗ ಬಹಿರಂಗಗೊಂಡಿವೆ.

Hizbul terrorist's arrest
Hizbul terrorist's arrest

ಬೆಂಗಳೂರು: ಮಹತ್ವದ ಕಾರ್ಯಾಚರಣೆವೊಂದರಲ್ಲಿ ಬೆಂಗಳೂರಿನಲ್ಲಿ ಹಿಜ್ಬುಲ್​​ ಮುಜಾಹಿದ್ದೀನ್ ಕಮಾಂಡರ್​​ ತಾಲೀಬ್​ ಹುಸೇನ್ ಬಂಧನವಾಗಿದ್ದು, ಆತನ ಕುರಿತಾದ ಸ್ಫೋಟಕ ವಿಷಯ ಇದೀಗ ಬಹಿರಂಗಗೊಳ್ಳಲು ಶುರುವಾಗಿವೆ. ಯುವಕರ ಬ್ರೈನ್​ ವಾಶ್ ಮಾಡುವ ಮೂಲಕ ಜಮ್ಮು-ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆಗೆ ಕುಮ್ಮಕ್ಕು ನೀಡುತ್ತಿದ್ದ ಮಾಹಿತಿ ಕೂಡ ಇದೀಗ ಬೆಳಕಿಗೆ ಬಂದಿದೆ.

ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲೇ ವೇಷ ಬದಲಿಸಿ ಜೀವನ ನಡೆಸುತ್ತಿದ್ದ ಉಗ್ರನ ಬಂಧನದ ಬೆನ್ನಲ್ಲೇ ಪೊಲೀಸ್ ಅಧಿಕಾರಿಗಳು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ​​​ಮಸೀದಿಗಳಲ್ಲಿ ಪಾಠ ಪ್ರವಚನ ಮಾಡ್ತಿದ್ದ ಈತ ಆಟೋ ಓಡಿಸುತ್ತ ಜೀವನ ನಡೆಸುತ್ತಿದ್ದ. ಆದರೆ, ಬೆಂಗಳೂರು ಪೊಲೀಸರ ಸಹಾಯದಿಂದ ರಾಷ್ಟ್ರೀಯ ರೈಫಲ್ಸ್ (ಆರ್‌ಆರ್) ಮತ್ತು ಕೇಂದ್ರ ಸಶಸ್ತ್ರ ಮೀಸಲು ಪೊಲೀಸ್ ಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಈತನ ಹೆಡೆಮುರಿ ಕಟ್ಟಿದ್ದಾರೆ.

ಬೆಂಗಳೂರಿನಲ್ಲಿ ಹಿಜ್ಬುಲ್​ ಉಗ್ರನ ಬಂಧನ

ಯಾರು ಈ ತಾಲೀಬ್ ಹುಸೇನ್​?: ಬಂಧಿತ ಭಯೋತ್ಪಾದಕನನ್ನ ತಾಲೀಬ್​ ಹುಸೇನ್​ ಎಂದು ಗುರುತಿಸಲಾಗಿದೆ. ಹಿಜ್ಬುಲ್​ ಮುಜಾಹಿದ್ದೀನ್ ಉಗ್ರ ಸಂಘಟನೆಯ ಪ್ರಮುಖ ಕಮಾಂಡರ್​ಗಳ ಪೈಕಿ ಒಬ್ಬ ಎಂದು ಜಮ್ಮು-ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ. ಈತ ಮೂಲತಃ ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಗೆ ಸೇರಿದಾತ. 2016ರಲ್ಲಿ ಭಯೋತ್ಪಾದಕ ಸಂಘಟನೆಗೆ ಸೇರಿದ್ದು, ಇಬ್ಬರು ಹೆಂಡತಿ ಮತ್ತು ಐವರು ಮಕ್ಕಳನ್ನ ಹೊಂದಿದ್ದಾನೆ.

ಹಿಂದೂಗಳ ಹತ್ಯೆಗೆ ಯುವಕರ ಬ್ರೈನ್​ ವಾಶ್​: ಯುವಕರ ಬ್ರೈನ್​ ವಾಶ್​ ಮಾಡುವ ಮೂಲಕ ಜಮ್ಮು-ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆಗೆ ಸಂಚು ರೂಪಿಸುತ್ತಿದ್ದ. ಕಣಿವೆ ನಾಡಿನಲ್ಲಿ ನಡೆದ ಅನೇಕ ಬಾಂಬ್​ ಸ್ಫೋಟ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದಾನೆ. ಸಶಸ್ತ್ರ ಪಡೆ ಈತನಿಗೋಸ್ಕರ ಶೋಧಕಾರ್ಯ ತೀವ್ರಗೊಳಿಸಿದಾಗ ಹೆಂಡತಿ-ಮಕ್ಕಳೊಂದಿಗೆ ಬೆಂಗಳೂರಿಗೆ ಪರಾರಿಯಾಗಿದ್ದನು.

ಇದನ್ನೂ ಓದಿ: ಬೆಂಗಳೂರಲ್ಲಿ ಠಿಕಾಣಿ ಹೂಡಿದ್ದ ಹಿಜ್ಬುಲ್​ ಉಗ್ರ ಸಂಘಟನೆ ಕಮಾಂಡರ್​ ಅರೆಸ್ಟ್​

ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸ: ಕಳೆದ ಎರಡು ವರ್ಷಗಳಿಂದಲೂ ಬೆಂಗಳೂರಿನಲ್ಲಿ ಆಟೋ ಓಡಿಸಿಕೊಂಡು ಸಾಮಾನ್ಯ ಜನರಂತೆ ಜೀವನ ನಡೆಸುತ್ತಿದ್ದ. ಈತನ ಶೋಧಕಾರ್ಯ ಮುಂದುವರೆಸಿದ ಸಶಸ್ತ್ರ ಪಡೆಗಳಿಗೆ ತಾಲೀಬ್​ ಹುಸೇನ್ ಬೆಂಗಳೂರಿನಲ್ಲಿರುವುದರ ಬಗ್ಗೆ ಮಾಹಿತಿ ಗೊತ್ತಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಕಳೆದ ವಾರ ಬೆಂಗಳೂರು ಪೊಲೀಸ್ ಆಯುಕ್ತರನ್ನ ಭೇಟಿ ಮಾಡಲಾಗಿತ್ತು. ಇದಾದ ಬಳಿಕ ಈತನ ಚಲನವಲನದ ಮೇಲೆ ತೀವ್ರ ನಿಗಾ ಇಡಲಾಗಿತ್ತು. ಇದರ ಬೆನ್ನಲ್ಲೇ ಕಾರ್ಯಾಚರಣೆ ನಡೆಸಿ ಸೋಮವಾರ ಆತನನ್ನು ಬಂಧಿಸಲಾಗಿದೆ. ಇದರಿಂದ ಇಡೀ ಬೆಂಗಳೂರು ಬೆಚ್ಚಿಬಿದ್ದಿದೆ.

Last Updated :Jun 7, 2022, 1:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.