ETV Bharat / state

ಮರದ ಕೊಂಬೆ ಹೊಟ್ಟೆಗೆ ಹೊಕ್ಕಿದ್ದರಿಂದ ಕಾಡಾನೆ ಸಾವನ್ನಪ್ಪಿದೆ: ಡಿಸಿಎಫ್ ಸ್ಪಷ್ಟನೆ

author img

By

Published : Jun 25, 2021, 10:18 AM IST

Updated : Jun 25, 2021, 10:28 AM IST

ಆನೇಕಲ್ ತಾಲೂಕಿನ ರಾಗಿಹಳ್ಳಿ ಅರಣ್ಯ ವಲಯದ 101 ಗುಡಿ ಬಯಲಿನ ಕಾಡಿನಲ್ಲಿ ಜೂನ್​ 22ರಂದು ಕಾಡಾನೆಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿತ್ತು. ಈ ಬಗ್ಗೆ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್ ಮೂರ್ತಿ ಸ್ಪಷ್ಟನೆ ನೀಡಿದ್ದಾರೆ.

anekal
ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್ ಮೂರ್ತಿ

ಆನೇಕಲ್: ಇತ್ತೀಚೆಗೆ ಆನೇಕಲ್ ತಾಲೂಕಿನ ರಾಗಿಹಳ್ಳಿ ಅರಣ್ಯ ವಲಯದ 101 ಗುಡಿ ಬಯಲಿನ ಕಾಡಿನಲ್ಲಿ 40 ವರ್ಷದ ಕಾಡಾನೆಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿತ್ತು. ಈ ಆನೆ ಮಳೆಯ ತೇವದಿಂದ ಕಣ್ಣು ಕಾಣದೇ ಜಾರಿ ಬಿದ್ದಾಗ ಮರದ ಕೊಂಬೆ ಹೊಟ್ಟೆಗೆ ಹೊಕ್ಕಿದ್ದರಿಂದ ಸಾವನ್ನಪ್ಪಿದೆ ಎಂದು ಕಲ್ಕೆರೆ ಡಿಸಿಎಫ್ ಬಿ.ಎನ್.ಮೂರ್ತಿ ಸ್ಪಷ್ಟಪಡಿಸಿದ್ದಾರೆ.

ಮರದ ಕೊಂಬೆ ಹೊಟ್ಟೆಗೆ ಹೊಕ್ಕಿದ್ದರಿಂದ ಕಾಡಾನೆ ಸಾವನ್ನಪ್ಪಿದೆ: ಡಿಸಿಎಫ್ ಸ್ಪಷ್ಟನೆ

ಆನೆಯ ಕಳೇಬರ ಸ್ಥಿತಿ ಬಗ್ಗೆ ಪ್ರಾಣಿಪ್ರಿಯರಿಗೆ ಸಂಶಯ ಮೂಡಿತ್ತು. ಹೀಗಾಗಿ, ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಜೂನ್​ 22ರಂದು ಮೃತಪಟ್ಟ ಕಾಡಾನೆಯ ಮರಣೋತ್ತರ ಪರೀಕ್ಷೆಯ ವರದಿ ಬಂದಿದೆ. ಈ ವರದಿ ಹಾಗೂ ಅರಣ್ಯಾಧಿಕಾರಿಗಳ ಪರಿಶೀಲನೆ ನಡೆಸಿರುವ ಮಾಹಿತಿ ಪ್ರಕಾರ, ಕಾಡಾನೆ ಮಳೆ ತೇವದಿಂದ ಕಣ್ಣು ಕಾಣದೇ ಜಾರಿ ಬಿದ್ದಾಗ ಮರದ ಕೊಂಬೆ ಹೊಟ್ಟೆಗೆ ಹೊಕ್ಕಿದ್ದರಿಂದ ಸಾವನ್ನಪ್ಪಿದೆ.

anekal
ಜೂನ್​ 22ರಂದು ಮೃತಪಟ್ಟ ಕಾಡಾನೆ

ಅರಣ್ಯ ವೀಕ್ಷಕರಿಗೆ ಗಸ್ತಿನ ವೇಳೆ ಯಾವುದೋ ಪ್ರಾಣಿ ಸತ್ತ ವಾಸನೆ ಬಂದಿದೆ. ಈ ಬಗ್ಗೆ ಪರಿಶೀಲಿಸಿದಾಗ ಕಾಡಾನೆ ಸಾವು ಬಯಲಿಗೆ ಬಂದಿತ್ತು. ಆ ವೇಳೆಗಾಗಲೇ ನಾಲ್ಕಾರು ಕಾಡಿನ ಸೀಳು ನಾಯಿಗಳು ಆನೆಯ ಸೊಂಡಿಲಿನ ಮುಂಭಾಗವನ್ನು ಅರೆಬರೆ ತಿಂದಿದ್ದವು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಳೆದು ನಿಂತ ಮಗಳ ಮರೆತು 3ನೇ ಮದುವೆಗೆ ಹೊರಟ ಪತಿ; ಗುಪ್ತಾಂಗ ಕತ್ತರಿಸಿ ಕೊಲೆಗೈದ ಧರ್ಮಪತ್ನಿ

Last Updated : Jun 25, 2021, 10:28 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.