ETV Bharat / state

ಉಪಚುನಾವಣೆ.. ಸದ್ದಿಲ್ಲದೆ ಜೆಡಿಎಸ್ ಪ್ರಚಾರ.. ಕೆ.ಗೋಪಾಲಯ್ಯ ಸೋಲಿಸಲು 'ತೆನೆ' ಪಾರ್ಟಿ ಪಣ..

author img

By

Published : Oct 19, 2019, 8:46 PM IST

ಡಿಸೆಂಬರ್​ ತಿಂಗಳಿನಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಅನರ್ಹ ಶಾಸಕ ಕೆ.ಗೋಪಾಲಯ್ಯರನ್ನು ಸೋಲಿಸಲೇಬೆಂದು ಪಣ ತೊಟ್ಟಿರುವ ಜೆಡಿಎಸ್​ ಈಗಾಗಲೇ ಪ್ರಚಾರ ಆರಂಭಿಸಿದೆ.

ಸದ್ದಿಲ್ಲದೆ ನಡೆಯುತ್ತಿದೆ ಜೆಡಿಎಸ್ ಪ್ರಚಾರ

ಬೆಂಗಳೂರು: ಜೆಡಿಎಸ್​ನಲ್ಲಿ ಒಂದೆಡೆ ಅಸಮಾಧಾನದ ಹೊಗೆಯಾಡುತ್ತಿದೆ. ಮತ್ತೊಂದೆಡೆ ಉಪ ಚುನಾವಣೆಗೆ ಸದ್ದಿಲ್ಲದೇ ಚುನಾವಣಾ ಪ್ರಚಾರ ಆರಂಭವಾಗಿದೆ.

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಕೆಲ ಶಾಸಕರು ಹಾಗೂ ವಿಧಾನ ಪರಿಷತ್​ನ ಕೆಲ ಸದಸ್ಯರು ಮುನಿಸಿಕೊಂಡಿದ್ದಾರೆ. ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ವರಿಷ್ಠರು ಉಪ ಚುನಾವಣೆ ಜೊತೆಗೆ ವಿಧಾನ ಪರಿಷತ್ ಎಲೆಕ್ಷನ್‌ಗೂ ತಯಾರಿ ನಡೆಸುತ್ತಿದ್ದಾರೆ.

ಈಗಾಗಲೇ ಉಪಚುನಾವಣೆ ಸಂಬಂಧ ಹಲವು ಸಭೆಗಳು ನಡೆದಿವೆ. ಮುಂದಿನ ಜೂನ್​ನಲ್ಲಿ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ನಿನ್ನೆಯಷ್ಟೇ ಮೊದಲ ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಸಿದ್ದಾರೆ. ಇದರ ನಡುವೆ ಅನರ್ಹ ಶಾಸಕ ಕೆ.ಗೋಪಾಲಯ್ಯರನ್ನು ಶತಾಯಗತಾಯ ಸೋಲಿಸಲೇಬೇಕೆಂದು ಪಣತೊಟ್ಟಿರುವ ಜೆಡಿಎಸ್ ಮುಖಂಡರು, ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಪಾದಯಾತ್ರೆ ಆರಂಭಿಸಿದ್ದಾರೆ.

ಬೆಂಗಳೂರು ನಗರದ ಜೆಡಿಎಸ್ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿ, ಮತದಾರರಿಗೆ ಕರಪತ್ರಗಳನ್ನು ವಿತರಿಸಲಾಗುತ್ತಿದೆ. ಎರಡು ಬಾರಿ ಈ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಚುನಾಯಿತರಾಗಿದ್ದವರು ಈಗ ಪಕ್ಷ ತೊರೆದಿದ್ದಾರೆ. ಅವರಿಗೆ ಪಕ್ಷ ಹಾಗೂ ಕ್ಷೇತ್ರದ ನಾಗರಿಕರ ಪರ 27 ಪ್ರಶ್ನೆಗಳನ್ನು ಕೇಳಿರುವ ಕಿರುಹೊತ್ತಿಗೆ ತರಲಾಗಿದೆ. ಪಕ್ಷದಿಂದ ಅವರಿಗಾಗಿರುವ ಲಾಭ ಮತ್ತು ಪಕ್ಷಕ್ಕೆ ಅವರ ಕೊಡುಗೆ ಏನು ? ಪಕ್ಷದಿಂದ ಅವರಿಗೆ ಏನು ತೊಂದರೆಯಾಗಿದೆ ಎಂಬುದು ಸೇರಿ ಕರಪತ್ರದಲ್ಲಿ ಹಲವು ಪ್ರಶ್ನೆಗಳಿವೆ.

ರಾಜಕೀಯ ಲಾಭಕ್ಕಾಗಿ ಗೋಪಾಲಯ್ಯನವರು ಪಕ್ಷದ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಜೆಡಿಎಸ್ ಪಕ್ಷದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪಾದಯಾತ್ರೆ ಮಾಡಲಾಗಿದೆ ಎನ್ನುತ್ತಾರೆ ಮುಖಂಡರು. ಅದೇ ರೀತಿ ಉಪಚುನಾವಣೆ ನಡೆಯುವ ಇತರ ಕ್ಷೇತ್ರಗಳಲ್ಲೂ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪ್ರಚಾರ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ.

Intro:ಬೆಂಗಳೂರು : ಜೆಡಿಎಸ್ ನಲ್ಲಿ ಒಂದೆಡೆ ಅಸಮಾಧಾನದ ಹೊಗೆಯಾಡುತ್ತಿದೆ. ಮತ್ತೊಂದೆಡೆ ಉಪ ಚುನಾವಣೆಗೆ ಸದ್ದಿಲ್ಲದೆ ಚುನಾವಣಾ ಪ್ರಚಾರ ಆರಂಭವಾಗಿದೆ.Body:ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಕೆಲ ಶಾಸಕರು ಹಾಗೂ ವಿಧಾನ ಪರಿಷತ್ ನ ಕೆಲ ಸದಸ್ಯರು ಮುನಿಸಿಕೊಂಡಿದ್ದಾರೆ. ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ವರಿಷ್ಠರು ಉಪ ಚುನಾವಣೆ ಜೊತೆಗೆ ವಿಧಾನ ಪರಿಷತ್ ಚುನಾವಣೆಗೂ ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಉಪಚುನಾವಣೆ ಸಂಬಂಧ ಹಲವು ಸಭೆಗಳು ನಡೆದಿವೆ. ಮುಂದಿನ ಜೂನ್ ನಲ್ಲಿ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ನಿನ್ನೆಯಷ್ಟೇ ಮೊದಲ ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಸಿದ್ದಾರೆ.
ಇದರ ನಡುವೆ ಅನರ್ಹ ಶಾಸಕ ಕೆ.ಗೋಪಾಲಯ್ಯರನ್ನು ಶತಾಯಗತಾಯ ಸೋಲಿಸಲೇಬೇಕೆಂದು ಪಣತೊಟ್ಟಿರುವ ಜೆಡಿಎಸ್ ಮುಖಂಡರು, ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಪಾದಯಾತ್ರೆ ಆರಂಭಿಸಿದ್ದಾರೆ. ಬೆಂಗಳೂರು ನಗರದ ಜೆಡಿಎಸ್ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿ, ಮತದಾರರಿಗೆ ಕರಪತ್ರಗಳನ್ನು ವಿತರಿಸಲಾಗುತ್ತಿದೆ.
ಎರಡು ಬಾರಿ ಈ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಚುನಾಯಿತರಾಗಿದ್ದವರು ಈಗ ಪಕ್ಷ ತೊರೆದಿದ್ದು, ಅವರಿಗೆ ಪಕ್ಷ ಹಾಗೂ ಕ್ಷೇತ್ರದ ನಾಗರಿಕರ ಪರವಾಗಿ 27 ಪ್ರಶ್ನೆಗಳನ್ನು ಕೇಳಿರುವ ಕಿರುಹೊತ್ತಿಗೆ ತಂದಿದ್ದೇವೆ. ಪಕ್ಷದಿಂದ ಅವರಿಗಾಗಿರುವ ಲಾಭ ಮತ್ತು ಪಕ್ಷಕ್ಕೆ ಅವರ ಕೊಡುಗೆ ಏನು ? ಪಕ್ಷದಿಂದ ಅವರಿಗೆ ಏನು ತೊಂದರೆಯಾಗಿದೆ ಎಂಬುದು ಸೇರಿದಂತೆ ಕರಪತ್ರದಲ್ಲಿ ಹಲವು ಪ್ರಶ್ನೆಗಳಿವೆ.
ರಾಜಕೀಯ ಲಾಭಕ್ಕಾಗಿ ಗೋಪಾಲಯ್ಯನವರು ಪಕ್ಷದ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಜೆಡಿಎಸ್ ಪಕ್ಷದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪಾದಯಾತ್ರೆ ಮಾಡಲಾಗಿದೆ ಎನ್ನುತ್ತಾರೆ ಮುಖಂಡರು.
ಅದೇ ರೀತಿ ಉಪಚುನಾವಣೆ ನಡೆಯುವ ಇತರ ಕ್ಷೇತ್ರಗಳಲ್ಲೂ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪ್ರಚಾರ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.