ETV Bharat / state

ಬಿಜೆಪಿಗೆ ಜೆಡಿಎಸ್ ಬೆಂಬಲ? ಈಶ್ವರಪ್ಪ ಭೇಟಿ ಮಾಡಿ ಚರ್ಚಿಸಿದ ಸಚಿವ ಸಾ.ರಾ.ಮಹೇಶ್!

author img

By

Published : Jul 11, 2019, 10:06 PM IST

ಬಿಜೆಪಿ ಶಾಸಕಾಂಗ ಸಭೆಯ ನಂತರ ಕುಮಾರಕೃಪ ಅತಿಥಿಗೃಹದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ. ಎಸ್ .ಈಶ್ವರಪ್ಪ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್ ಅವರೊಂದಿಗೆ ಸಚಿವ ಸಾ.ರಾ.ಮಹೇಶ್ ಚರ್ಚೆ ನಡೆಸಿದ್ದಾರೆ.

ಸಚಿವ ಸಾ.ರಾ.ಮಹೇಶ್

ಬೆಂಗಳೂರು: ಕುಮಾರಕೃಪ ಅತಿಥಿಗೃಹದಲ್ಲಿ ಸಚಿವ ಸಾ.ರಾ.ಮಹೇಶ್ ಬಿಜೆಪಿ ನಾಯಕರ ಜೊತೆ ಸಮಾಲೋಚನೆ ನಡೆಸಿರುವ ವಿಡಿಯೋ ಈಗ ವೈರಲ್ ಆಗಿದ್ದು, ಕುತೂಹಲ ಮೂಡಿಸಿದೆ.

ಬಿಜೆಪಿ ನಾಯಕರನ್ನು ಭೇಟಿ ಮಾಡಿದ ಸಚಿವ ಸಾ.ರಾ.ಮಹೇಶ್

ಇಂದು ಸಂಜೆ ವಿಧಾನಸೌಧದಲ್ಲಿ ಬಿಜೆಪಿ ಶಾಸಕಾಂಗ ಸಭೆಯ ನಂತರ ಮಾಜಿ ಉಪಮುಖ್ಯಮಂತ್ರಿ ಕೆ. ಎಸ್ .ಈಶ್ವರಪ್ಪ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್ ಅವರೊಂದಿಗೆ ಕುಮಾರಕೃಪ ಅತಿಥಿಗೃಹದಲ್ಲಿ ಸಚಿವ ಸಾ.ರಾ.ಮಹೇಶ್ ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದು, ಯಾವ ಕಾರಣಕ್ಕೆ ಜೆಡಿಎಸ್ ಸಚಿವರು ಬಿಜೆಪಿ ಮುಖಂಡರು ಭೇಟಿ ಮಾಡಿದ್ದಾರೆ ಎಂಬ ಕುತೂಹಲ ಮೂಡಿದೆ.

ಬಿಜೆಪಿ ನಾಯಕರನ್ನು ಭೇಟಿ ಮಾಡಿ ತೆರಳುವ ವೇಳೆ ಸಚಿವ ಸಾ.ರಾ. ಮಹೇಶ್ ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚಿಸಲು ಬಂದಿದ್ದೆ. ಬೇರೆ ಯಾವುದೇ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.

ಸಾರ್ವಜನಿಕ ಸ್ಥಳಗಳಲ್ಲಿ ಭೇಟಿ ಮಾಡದೆ ಈ ರೀತಿ ಅತಿಥಿಗೃಹದಲ್ಲಿ ಭೇಟಿ ಮಾಡಿ ಮಾಧ್ಯಮಗಳಿಗೂ ಸಮರ್ಪಕವಾಗಿ ಉತ್ತರ ನೀಡದೇ ತೆರಳಿರುವುದು ಅನುಮಾನಕ್ಕೆ ಕಾರಣವಾಗಿದೆ.

Intro:newsBody:ಕುಮಾರಕೃಪ ಅತಿಥಿಗೃಹದಲ್ಲಿ ಬಿಜೆಪಿ ನಾಯಕರನ್ನ ಭೇಟಿ ಮಾಡಿದ ಜೆಡಿಎಸ್ ಸಚಿವ

ಬೆಂಗಳೂರು: ಬೆಂಗಳೂರಿನ ಕುಮಾರಕೃಪ ಅತಿಥಿಗೃಹದಲ್ಲಿ ಸಚಿವ ಸಾರಾ ಮಹೇಶ್ ಬಿಜೆಪಿ ನಾಯಕರ ಜೊತೆ ಸಮಾಲೋಚಿಸಿದ ವಿಡಿಯೋ ವೈರಲ್ ಆಗಿದೆ.
ಇಂದು ಸಂಜೆ ವಿಧಾನಸೌಧದಲ್ಲಿ ಬಿಜೆಪಿ ಶಾಸಕಾಂಗ ಸಭೆಯ ನಂತರ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್ ಅವರೊಂದಿಗೆ ಕುಮಾರಕೃಪ ಅತಿಥಿಗೃಹದಲ್ಲಿ ಸಚಿವ ಸಾರಾ ಮಹೇಶ್ ಭೇಟಿ ಮಾಡಿ ಸಮಾಲೋಚಿಸಿ ದ್ದಾರೆ.
ಈ ಬೇಟಿ ಇದೀಗ ತೀವ್ರ ಕುತೂಹಲ ಮೂಡಿಸಿದ್ದು ಯಾವ ಕಾರಣಕ್ಕೆ ಜೆಡಿಎಸ್ ಬಿಜೆಪಿ ಮುಖಂಡರು ಭೇಟಿಯಾಗಿ ಚರ್ಚಿಸಿದ್ದಾರೆ ಎಂಬ ಕುತೂಹಲ ಮೂಡಿದೆ.
ರಾಜ್ಯರಾಜಕಾರಣದಲ್ಲಿ ದಿನಕ್ಕೊಂದು ಹೊಸ ತಿರುವು ಕಂಡುಬರುತ್ತಿದ್ದು ಈ ನಡುವೆ ಸಾರಾ ಮಹೇಶ್ ಭೇಟಿಮಾಡಿ ಚರ್ಚಿಸಿದ್ದು ಅತ್ಯಂತ ಗಂಭೀರ ಪರಿಸ್ಥಿತಿ ನಿರ್ಮಿಸಿದ್ದಾರೆ.
ಭೇಟಿ ಮಾಡಿ ತೆರಳುವ ಸಂದರ್ಭ ಸಚಿವ ಸಾ.ರಾ. ಮಹೇಶ್ ಮಾಧ್ಯಮಗಳಿಗೆ ಮಾತನಾಡಿದ್ದು ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚಿಸಲು ಬಂದಿದ್ದೆ ಬೇರೆ ಯಾವುದೇ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದಿದ್ದಾರೆ.
ಆದಾಗ್ಯೂ ಬಿಜೆಪಿ ನಾಯಕರನ್ನ ಕುಮಾರಕೃಪ ಅತಿಥಿಗೃಹದಲ್ಲಿ ಸಾರಾ ಮಹೇಶ್ ಭೇಟಿ ಮಾಡಿ ಸಮಾಲೋಚಿಸುವುದು ಆಪರೇಷನ್ ಕಮಲದ ಇನ್ನೊಂದು ಮಗ್ಗುಲು ಇರಬಹುದೇ ಎಂಬ ಸಂಶಯವನ್ನು ಕೂಡ ಹುಟ್ಟುಹಾಕಿದೆ. ಸಾರ್ವಜನಿಕ ಸ್ಥಳಗಳಲ್ಲಿ ಭೇಟಿ ಮಾಡದೇ ಈ ರೀತಿ ಅತಿಥಿಗೃಹದಲ್ಲಿ ಬೇಟಿಮಾಡಿ ಮಾಧ್ಯಮಗಳಿಗೂ ಸಮರ್ಪಕವಾಗಿ ಉತ್ತರ ನೀಡದೆ ಸಾರಾ ಮಹೇಶ್ ತೆರಳಿರುವುದು ಅನುಮಾನಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಬಿಜೆಪಿ ಆಪರೇಷನ್ ಕಮಲ ಮುಂದುವರಿದಿದ್ದು ಸರ್ಕಾರ ರಚನೆ ಕಸರತ್ತನ್ನು ಬಿಜೆಪಿ ನಡೆಸಿರುವ ಸಂದರ್ಭದಲ್ಲಿ ಇಂಥದ್ದೊಂದು ಬೆಳವಣಿಗೆ ರಾಜ್ಯದಲ್ಲಿ ನಡೆದಿರುವುದು ಅಚ್ಚರಿಗೆ ಕಾರಣವಾಗಿದೆ.
ಮೀಟಿಂಗ್ ಸಭಾಂಗಣದಲ್ಲಿ ಬೀಗ ಹಾಕಿ ನಾಯಕರು ಸಮಾಲೋಚಿಸಿದ್ದು ಅದ್ಯಾಕೆ ಅಷ್ಟೊಂದು ಗುಪ್ತ ಸಮಾಲೋಚಿಸಿದ್ದು ಗಂಭೀರತೆಗೆ ಕಾರಣವಾಗಿದೆ. ಅದು ಅನಿರೀಕ್ಷಿತ ಭೇಟಿ ಎಂದು ಹೇಳಿದ್ದು ಇನ್ನಷ್ಟು ಅನುಮಾನ ಮೂಡಿಸಿದೆ.Conclusion:news

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.