ಎಸಿ-ಡಿಸಿಗಳ ರೆವಿನ್ಯೂ ಕೋರ್ಟ್ ಕಲಾಪಗಳನ್ನು ಮುಂದೂಡದಂತೆ ಸೂಚಿಸಿ : ಹೈಕೋರ್ಟ್ ನಿರ್ದೇಶನ

author img

By

Published : Oct 11, 2021, 8:58 PM IST

ಹೈಕೋರ್ಟ್

ಉಪವಿಭಾಗಾಧಿಕಾರಿ 2016ರಿಂದ ಈವರೆಗೆ 24 ಬಾರಿ ಪ್ರಕರಣವನ್ನು ಮುಂದೂಡಿದ್ದಾರೆಯೇ ವಿನಃ ವಿವಾದವನ್ನು ಇತ್ಯರ್ಥಪಡಿಸಿರಲಿಲ್ಲ. ಈ ಹಿನ್ನೆಲೆ ಪ್ರಕರಣವನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ಇತ್ಯರ್ಥಪಡಿಸಲು ಜಿಲ್ಲಾಡಳಿತಕ್ಕೆ ನಿರ್ದೇಶನ ಕೋರಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು..

ಬೆಂಗಳೂರು : ರಾಜ್ಯದ ಕಂದಾಯ ಕೋರ್ಟ್​​ಗಳ ಕಲಾಪಗಳನ್ನು ನಿಗದಿಪಡಿಸಿದ ದಿನದಂದೇ ನಡೆಸಬೇಕು. ಅನಗತ್ಯ ಮುಂದೂಡಬಾರದು ಎಂದು ಆದೇಶಿಸಿರುವ ಹೈಕೋರ್ಟ್, ಈ ಸಂಬಂಧ ಸುತ್ತೋಲೆ ಹೊರಡಿಸುವಂತೆ ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಿದೆ.

ಕೃಷಿ ಜಮೀನಿನ ಖಾತೆ ಬದಲಾವಣೆಗೆ ಸಂಬಂಧಿಸಿದ ಪ್ರಕರಣವನ್ನು ಕಳೆದ ನಾಲ್ಕು ವರ್ಷಗಳಿಂದ ಮುಂದೂಡಿಕೊಂಡೇ ಬರಲಾಗುತ್ತಿದೆ. ಹೀಗಾಗಿ, ಪ್ರಕರಣವನ್ನು ನಿಗದಿತ ಅವಧಿಯಲ್ಲಿ ಇತ್ಯರ್ಥಪಡಿಸಲು ನಿರ್ದೇಶಿಸಿಬೇಕು ಎಂದು ಕೋರಿ ಚಿಕ್ಕಬಳ್ಳಾಪುರದ ಬಂಡಹಳ್ಳಿ ನಿವಾಸಿ ಸುಬ್ಬಾರೆಡ್ಡಿ ಎಂಬುವರು ಅರ್ಜಿ ಸಲ್ಲಿಸಿದ್ರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ಈ ಸೂಚನೆ ನೀಡಿದೆ.

ಕಂದಾಯ ಕೋರ್ಟ್​​ಗಳನ್ನು ಅನಗತ್ಯವಾಗಿ ಮುಂದೂಡಬಾರದು. ಯಾವ ದಿನಾಂಕಕ್ಕೆ ಪ್ರಕರಣವನ್ನು ನಿಗದಿಪಡಿಸಲಾಗಿರುತ್ತದೆಯೋ ಅಂದೇ ವಿಚಾರಣೆ ನಡೆಸಬೇಕು. ಪ್ರಕರಣಗಳನ್ನು ಮಧ್ಯಾಹ್ನದ ಬದಲಿಗೆ ಬೆಳಗ್ಗೆ ಸಮಯದಲ್ಲೇ ನಡೆಸಬೇಕು.

ಈ ಸಂಬಂಧ ಕಂದಾಯ ಇಲಾಖೆ ಅರೆ ನ್ಯಾಯಿಕ ಪ್ರಾಧಿಕಾರಗಳಾದ ರಾಜ್ಯದ ಎಲ್ಲ ತಹಶೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಸುತ್ತೋಲೆ ಹೊರಡಿಸಬೇಕು ಎಂದು ನಿರ್ದೇಶಿಸಿದೆ.

ವಿಚಾರಣೆ ವೇಳೆ ಕಂದಾಯ ಇಲಾಖೆ ನ್ಯಾಯಿಕ ಪ್ರಾಧಿಕಾರಗಳು ನಿಗದಿತ ದಿನಾಂಕದಂದು ವಿಚಾರಣೆ ನಡೆಸದಿದ್ದರೆ ಪಕ್ಷಗಾರರಿಗೆ ತೊಂದರೆಯಾಗುತ್ತದೆ. ಆದರೆ, ಬಹುತೇಕ ಅಧಿಕಾರಿಗಳು ಹಿರಿಯ ಅಧಿಕಾರಿಗಳ ಅಥವಾ ಇನ್ನಾವುದೋ ಮೀಟಿಂಗ್ ಹೆಸರಲ್ಲಿ ಪ್ರಕರಣದ ವಿಚಾರಣೆ ನಡೆಸುವುದಿಲ್ಲ.

ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಸೇರಿ ಬೆಂಗಳೂರು ಸುತ್ತಲಿನ ಜಿಲ್ಲೆಗಳಲ್ಲಿ ಈ ಸಮಸ್ಯೆ ವ್ಯಾಪಕವಾಗಿದೆ ಎಂದು ಪೀಠ ಹೇಳಿದೆ. ಕಂದಾಯ ನ್ಯಾಯಾಲಯಗಳ ವಿಚಾರಣೆ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.

ಇದನ್ನೂ ಓದಿ: ತೆಲಂಗಾಣ ಹೈಕೋರ್ಟ್‌ ಸಿಜೆಯಾಗಿ ನ್ಯಾ.ಸತೀಶ್ ಚಂದ್ರ ಶರ್ಮಾ ಪ್ರಮಾಣವಚನ ಸ್ವೀಕಾರ

2016ರಲ್ಲಿ ಚಿಕ್ಕಬಳ್ಳಾಪುರದ ಬಂಡಹಳ್ಳಿ ಗ್ರಾಮದ ನಿವಾಸಿ ಸುಬ್ಬಾರೆಡ್ಡಿ ತಮ್ಮ ಜಮೀನಿನ ಖಾತೆ ಬದಲಾವಣೆ ಸಂಬಂಧ ತಹಶೀಲ್ದಾರ್ ಹೊರಡಿಸಿದ್ದ ಆದೇಶ ರದ್ದು ಕೋರಿ ಎಸಿ ಕೋರ್ಟ್​​ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಉಪವಿಭಾಗಾಧಿಕಾರಿ 2016ರಿಂದ ಈವರೆಗೆ 24 ಬಾರಿ ಪ್ರಕರಣವನ್ನು ಮುಂದೂಡಿದ್ದಾರೆಯೇ ವಿನಃ ವಿವಾದವನ್ನು ಇತ್ಯರ್ಥಪಡಿಸಿರಲಿಲ್ಲ. ಈ ಹಿನ್ನೆಲೆ ಪ್ರಕರಣವನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ಇತ್ಯರ್ಥಪಡಿಸಲು ಜಿಲ್ಲಾಡಳಿತಕ್ಕೆ ನಿರ್ದೇಶನ ಕೋರಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.