ETV Bharat / state

ರಾಜ್ಯಕ್ಕೆ ಮತ್ತೆ ಆಗಮಿಸಿದ ಬಿಜೆಪಿ ಚಾಣಕ್ಯ: ಇಲ್ಲಿದೆ ಅಮಿತ್ ಶಾ ಕಾರ್ಯಕ್ರಮಗಳ ಇಂದಿನ ವಿವರ..

author img

By

Published : Apr 24, 2023, 9:46 AM IST

Updated : Apr 24, 2023, 11:14 AM IST

ಕೇಂದ್ರ ಗೃಹ ಸಚಿವ ಅಮಿತ್​ ಶಾ ರಾಜ್ಯಕ್ಕೆ ಆಗಮಿಸಿದ್ದು ಅವರ ಈ ದಿನದ ಕಾರ್ಯಕ್ರಮಗಳ ಕುರಿತು ವಿವರವಾದ ಮಾಹಿತಿ ಇಲ್ಲಿದೆ..

bjp
ಅಮಿತ್​ ಶಾ

ಬೆಂಗಳೂರು: ಕಳೆದ ರಾತ್ರಿಯು ನಗರಕ್ಕೆ ಆಗಮಿಸಿ ವಾಸ್ತವ್ಯ ಹೂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಮೈಸೂರು ಹಾಗೂ ಹಾಸನ ಪ್ರವಾಸ ಮಾಡುತ್ತಿದ್ದು, ರಾತ್ರಿ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.‌ ಚುನಾವಣಾ ರಣತಂತ್ರದ ಭಾಗವಾಗಿ ಹಳೆ ಮೈಸೂರು ಹಾಗೂ ಮಧ್ಯ ಕರ್ನಾಟಕದಲ್ಲಿ ಅಮಿತ್ ಶಾ ಪ್ರವಾಸ ಕೈಗೊಂಡಿದ್ದಾರೆ.

ಚಾಮುಂಡೇಶ್ವರಿಗೆ ಅಮಿತ್​ ಶಾ ಪೂಜೆ: ಬೆಳಗ್ಗೆ 9.50ಕ್ಕೆ ತಾಜ್ ವೆಸ್ಟೆಂಡ್ ಹೋಟೆಲ್​ನಿಂದ ರಸ್ತೆ ಮೂಲಕ ಪ್ರಯಾಣಿಸಲಿರುವ ಅಮಿತ್ ಶಾ, ಬೆಳಗ್ಗೆ 10.05ಕ್ಕೆ ಹೆಚ್​ಎಎಲ್​ ವಿಮಾನ ನಿಲ್ದಾಣ ತಲುಪಲಿದ್ದಾರೆ. 10.10ಕ್ಕೆ ಹೆಚ್​ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಪ್ರಯಾಣಿಸಲಿದ್ದು, 11.00ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಅಲ್ಲಿಂದ 11.20ಕ್ಕೆ ರಸ್ತೆ ಮೂಲಕ ಚಾಮಂಡಿ ಬೆಟ್ಟಕ್ಕೆ ಆಗಮಿಸುವ ಅಮಿತ್ ಶಾ, 11.20 ರಿಂದ 11.50ರ ವರೆಗೆ ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಿದ್ದಾರೆ.

ಗುಂಡ್ಲುಪೇಟೆಯಲ್ಲಿ ಅಮಿತ್​ ಶಾ ರೋಡ್​ ಶೋ: ಪೂಜೆ ಸಲ್ಲಿಸಿದ ಬಳಿಕ 11.55ಕ್ಕೆ ಚಾಮುಂಡೇಶ್ವರಿ ದೇವಸ್ಥಾನದಿಂದ ನಿರ್ಗಮಿಸಲಿದ್ದು, 12.10ಕ್ಕೆ ಮೈಸೂರು ವಿಮಾನ ನಿಲ್ದಾಣ ತಲುಪಲಿದ್ದಾರೆ. 12.15ಕ್ಕೆ ಮೈಸೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಲಿದ್ದು, 12.45ಕ್ಕೆ ಗುಂಡ್ಲುಪೇಟೆಯ ಹೆಲಿಪ್ಯಾಡ್​ಗೆ ಬಂದಿಳಿಯಲಿದ್ದಾರೆ. 12.50 ರಿಂದ 1.50ರ ವರೆಗೆ ಗುಂಡ್ಲುಪೇಟೆಯಲ್ಲಿ ರೋಡ್ ಶೋ ನಡೆಸಲಿದ್ದು, 1.55ಕ್ಕೆ ಕಾರಿನ ಮೂಲಕ ಗುಂಡ್ಲುಪೇಟೆಯ ಹೆಲಿಪ್ಯಾಡ್​ಗೆ ಪ್ರಯಾಣಿಸಲಿದ್ದಾರೆ. ಮಧ್ಯಾಹ್ನ 2.00ಗಂಟೆಗೆ ಗುಂಡ್ಲುಪೇಟೆಯಿಂದ ಹೆಲಿಕಾಪ್ಟರ್ ಮೂಲಕ ಹಾಸನ ಜಿಲ್ಲೆಗೆ ತೆರಳಲಿದ್ದಾರೆ.

ಮಧ್ಯಾಹ್ನ ಆಲೂರಿನಲ್ಲಿ ರೋಡ್​ ಶೋ: ಮಧ್ಯಾಹ್ನ 3 ಗಂಟೆಗೆ ಸಕಲೇಶಪುರದ ಆಲೂರು ಹೆಲಿಪ್ಯಾಡ್​ಗೆ ಆಗಮಿಸಲಿರುವ ಅಮಿತ್ ಶಾ, 3.05ಕ್ಕೆ ರಸ್ತೆ ಮೂಲಕ ಆಲೂರಿಗೆ ಆಗಮಿಸಿ 3.10 ರಿಂದ 4 ಗಂಟೆವರೆಗೆ ಆಲೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಸಂಜೆ 4.05ಕ್ಕೆ ಅಲ್ಲಿಂದ ರಸ್ತೆ ಮೂಲಕ ಆಲೂರಿನ ಹೆಲಿಪ್ಯಾಡ್​ಗೆ ಆಗಮಿಸಿ 4.15ಕ್ಕೆ ಆಲೂರಿಂದ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಿ, 5.00 ಗಂಟೆಗೆ ಮೈಸೂರು ವಿಮಾನ ನಿಲ್ದಾಣ ತಲುಪಲಿದ್ದಾರೆ. 5.05ಕ್ಕೆ ವಿಶೇಷ ವಿಮಾನದ ಮೂಲಕ ಪ್ರಯಾಣಿಸಲಿರುವ ಅಮಿತ್ ಶಾ, 6.30ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ.

ಹುಬ್ಬಳ್ಳಿಯಲ್ಲಿ ಅಮಿತ್​ ಶಾ ಸಭೆ: 6.35ಕ್ಕೆ ಹುಬ್ಬಳ್ಳಿಯ ಖಾಸಗಿ ಹೋಟೆಲ್​ಗೆ ಆಗಮಿಸಲಿದ್ದು, ನಂತರ 7 ಗಂಟೆಯಿಂದ 8 ಗಂಟೆವರೆಗೆ ಚುನಾವಣಾ ನಿರ್ವಹಣಾ ಸಮಿತಿ ಜೊತೆ ಶಾ ಸಭೆ ನಡೆಸಲಿದ್ದಾರೆ. ಶೆಟ್ಟರ್ ಪಕ್ಷ ತೊರೆದ ನಂತರ ನಡೆಯುತ್ತಿರುವ ಈ ಸಭೆ ಬಹಳ ಮಹತ್ವ ಪಡೆದುಕೊಂಡಿದೆ. ಶೆಟ್ಟರ್ ಮತ್ತು ರಾಹುಲ್ ಗಾಂಧಿ ಮಾತುಕತೆ ಬೆನ್ನಲ್ಲೇ ಬಿಜೆಪಿಯ ಚುನಾವಣಾ ಚಾಣಕ್ಯ ಹುಬ್ಬಳ್ಳಿಯಲ್ಲಿ ಸಭೆ ನಡೆಸುತ್ತಿರುವುದು ಹೊಸ ರಣತಂತ್ರದ ಭಾಗವಾಗಿದೆ. ರಾತ್ರಿ 8.05ಕ್ಕೆ ಮುಖಂಡರ ಜೊತೆ ಭೋಜನ ಸೇವಿಸಿ ರಾತ್ರಿ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ಇದನ್ನೂ ಓದಿ: ವಿಜಯಪುರ: ಪಕ್ಷದ ಮುಖಂಡರೊಂದಿಗೆ ತಡರಾತ್ರಿ ಮಹತ್ವದ ಸಭೆ ನಡೆಸಿದ ರಾಹುಲ್​ ಗಾಂಧಿ

Last Updated : Apr 24, 2023, 11:14 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.