ETV Bharat / state

ಕೋವಿಡ್​ ಸೋಂಕು ಹೊಂದಿದ್ದ ವ್ಯಕ್ತಿಗಳು ಯಾವಾಗ ಬೂಸ್ಟರ್ ಡೋಸ್ ಪಡೆಯಬೇಕು?

author img

By

Published : Jan 22, 2022, 12:22 PM IST

ಯಾವುದೇ ವ್ಯಕ್ತಿ ಕೋವಿಡ್-19 ಸೋಂಕು ಹೊಂದಿದ್ದರೆ, ಮುಂದಿನ ಲಸಿಕಾ ಡೋಸ್ ಅನ್ನು ಕೋವಿಡ್ ಸೋಂಕಿನಿಂದ ಗುಣಮುಖರಾದ 3 ತಿಂಗಳ ನಂತರ ಪಡೆಯಬಹುದಾಗಿದೆ..

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು : ಕೊರೊನಾ ಸೋಂಕಿನ ತೀವ್ರತೆ ಹಾಗೂ ಸಾವಿನಿಂದ ಪಾರಾಗಲು ಕೋವಿಡ್ ಲಸಿಕೆ ಪಡೆಯುವುದು ಅನಿವಾರ್ಯ. ಹೀಗಾಗಿ, ಕಳೆದ ವರ್ಷದಿಂದ(2021) ದೇಶಾದ್ಯಂತ ಲಸಿಕಾ ಅಭಿಯಾನ ನಡೆಸಲಾಗುತ್ತಿದೆ.

ಕಾಲಕ್ಕೆ ತಕ್ಕಂತೆ ಲಸಿಕಾಕರಣದಲ್ಲಿ ಬದಲಾವಣೆಗಳನ್ನ ತರಲಾಗುತ್ತಿದೆ. ಸದ್ಯ ಕೊರೊನಾ ಸೋಂಕು ಹೊಂದಿದ್ದ ವ್ಯಕ್ತಿಗಳು ಯಾವಾಗ ಬೂಸ್ಟರ್ ಲಸಿಕೆ ಪಡೆಯಬೇಕು? ಎಂಬುದಕ್ಕೆ ತಜ್ಞರು ಮಾಹಿತಿ ನೀಡಿದ್ದಾರೆ.

ವಿಶ್ವದಾದ್ಯಂತ ಈಗಾಗಲೇ 3ನೇ ಅಲೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆ ತಜ್ಞರ ಸಲಹೆಯಂತೆ ಮೊದಲ ಹಾಗೂ 2ನೇ ಡೋಸ್ ಪಡೆದ ನಂತರ ಇದೀಗ ಮುನ್ನೆಚ್ಚರಿಕಾ ಲಸಿಕೆ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತಿದೆ.

ಈ ಮಧ್ಯೆ ಹಲವರಿಗೆ ಸೋಂಕು ತಗುಲಿದೆ. ಯಾವಾಗ ಬೂಸ್ಟರ್ ಡೋಸ್ ಪಡೆಯಬೇಕು ಎಂಬ ಗೊಂದಲ ಉಂಟಾಗಿದೆ.‌ ಕೋವಿಡ್-19 ಲಸಿಕೆ ನೀಡಿಕೆಗಾಗಿ ರಾಷ್ಟ್ರೀಯ ತಜ್ಞರ ಗುಂಪು (NEGVAC) ಅವರ ಶಿಫಾರಸ್ಸಿನ ಪ್ರಕಾರ ಕೊರೊನಾ ಸೋಂಕು ಹೊಂದಿದ್ದ ವ್ಯಕ್ತಿಗಳು ಗುಣಮುಖರಾದ 3 ತಿಂಗಳ ನಂತರವಷ್ಟೇ ಲಸಿಕೆ ಪಡೆಯಬಹುದು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಈ ನಿಯಮ 2ನೇ ಡೋಸ್ ಹಾಗೂ ಮುನ್ನೆಚ್ಚರಿಕೆ ಡೋಸ್ ಪಡೆಯಬೇಕಿರುವ ಎಲ್ಲ ಅರ್ಹ ಫಲಾನುಭವಿಗಳಿಗೂ ಅನ್ವಯಿಸುತ್ತದೆ. ಯಾವುದೇ ವ್ಯಕ್ತಿ ಕೋವಿಡ್-19 ಸೋಂಕು ಹೊಂದಿದ್ದರೆ, ಮುಂದಿನ ಲಸಿಕಾ ಡೋಸ್ ಅನ್ನು ಕೋವಿಡ್ ಸೋಂಕಿನಿಂದ ಗುಣಮುಖರಾದ 3 ತಿಂಗಳ ನಂತರ ಪಡೆಯಬಹುದಾಗಿದೆ.

ಸದ್ಯ ಈ ಮಾರ್ಗಸೂಚಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ಫಲಾನುಭವಿಗಳ ಮುನ್ನೆಚ್ಚರಿಕೆ ಲಸಿಕೆಗೆ ಅನ್ವಯಿಸುತ್ತದೆ ಎಂದು ಎನ್​ಹೆಚ್​​ಎಂ(National Health Mission) ತಿಳಿಸಿದೆ.

ಇದನ್ನೂ ಓದಿ: ತಗ್ಗಿದ ಕೊರೊನಾ ಏರಿಕೆ ಪ್ರಮಾಣ: ಕೋವಿಡ್​ ಸಾವಿನ ಪ್ರಮಾಣದಲ್ಲೂ ಭಾರಿ ಇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.