ETV Bharat / state

ಐಷರಾಮಿ ಜೀವನ ನಡೆಸಲು ಮನೆಗಳ್ಳತನ: ಇಬ್ಬರು ಆರೋಪಿಗಳ ಬಂಧನ

author img

By

Published : Nov 18, 2022, 12:06 PM IST

ಬಂಧಿತರಿಂದ 7.5 ಲಕ್ಷ ಮೌಲ್ಯದ 123 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

House burglary to live a luxurious life: Two accused arrested
ಐಷರಾಮಿ ಜೀವನ ನಡೆಸಲು ಮನೆಗಳ್ಳತನ: ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಐಷಾರಾಮಿ ಜೀವನ ನಡೆಸಲು ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಖತರ್ನಾಕ್ ಆರೋಪಿಗಳನ್ನ ಕೆ.ಆರ್ ಪುರಂ ಪೊಲೀಸರು ಬಂಧಿಸಿದ್ದಾರೆ. ನವೀನ್, ಸೂರ್ಯ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 7.5 ಲಕ್ಷ ಮೌಲ್ಯದ 123 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜೊತೆಗೆ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳುವಾಗಿದ್ದ ಒಂದು ಬೈಕ್​ ಅನ್ನು ಆರೋಪಿಗಳಿಂದ ವಶಕ್ಕೆಪಡೆಯಲಾಗಿದೆ‌. ಇನ್ನು ಆರೋಪಿಗಳು ರಾತ್ರಿ ವೇಳೆ ಬಾಗಿಲು, ಪಕ್ಕದ ಕಿಟಕಿ ಗಾಜನ್ನು ಒಡೆದು ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಕೆ.ಆರ್ ಪುರಂ, ಆನೆಕಲ್​ನ ಅತ್ತಿಬೆಲೆ ಠಾಣೆಯಲ್ಲಿ ದೂರುಗಳು ದಾಖಲಾಗಿವೆ.

ಇದನ್ನೂ ಓದಿ: ಚಂದ್ರಗ್ರಹಣದ ನಂತರ ಮನೆಯಲ್ಲಿ ನಿಗೂಢ ಬೆಂಕಿ: 8 ದಿನಗಳಲ್ಲಿ 20 ಬಾರಿ ಅವಘಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.