ETV Bharat / state

ಜೋಳದ ವ್ಯಾಪಾರಿ ಸೋಗಿನಲ್ಲಿ ಮನೆಗಳ್ಳತನ: ಆರೋಪಿ ಬಂಧನ

author img

By

Published : Dec 2, 2022, 1:14 PM IST

Updated : Dec 2, 2022, 6:53 PM IST

ಆರೋಪಿಯ ಪತ್ತೆಗಾಗಿ ಐವತ್ತಕ್ಕೂ ಹೆಚ್ಚು ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಿದ ಮಾಗಡಿ ರೋಡ್ ಠಾಣಾ ಪೊಲೀಸರ ತಂಡ ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದೆ.

Accused Manjunath alias Murthy
ಆರೋಪಿ ಮಂಜುನಾಥ್ ಅಲಿಯಾಸ್ ಮೂರ್ತಿ

ಬೆಂಗಳೂರು: ರಸ್ತೆಯಲ್ಲಿ ಮುಸುಕಿನ ಜೋಳ ವ್ಯಾಪಾರ ಮಾಡುವ ವ್ಯಾಪಾರಿಯಾಗಿದ್ದುಕೊಂಡು, ಬೆಂಗಳೂರು ಪಶ್ಚಿಮ ವಿಭಾಗದ ವಿವಿಧೆಡೆ ಮನೆಗಳ್ಳತನ ಮಾಡುತ್ತಿದ್ದ ಮಂಜುನಾಥ್ ಅಲಿಯಾಸ್ ಮೂರ್ತಿ ಎಂಬಾತನನ್ನು ಮಾಗಡಿ ರೋಡ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಜೋಳದ ವ್ಯಾಪಾರಿ ಸೋಗಿನಲ್ಲಿ ಮನೆಗಳ್ಳತನ

ತಳ್ಳುವ ಗಾಡಿಯಲ್ಲಿ ಜೋಳ ಮಾರಾಟ ಮಾಡುತ್ತಿದ್ದ ಆರೋಪಿ ವ್ಯಾಪಾರ ಅಂದುಕೊಂಡಂತೆ ಆಗುತ್ತಿಲ್ಲ ಎಂದೆನಿಸಿದರೆ ಕಳ್ಳತನಕ್ಕಿಳಿಯುತ್ತಿದ್ದ. ಐದಾರು ಕಿಲೋಮೀಟರ್ ನಡೆದು ಮನೆಗಳನ್ನು ಹುಡುಕಿ ಕಳ್ಳತನಕ್ಕೆ ಸಂಚು ರೂಪಿಸುತ್ತಿದ್ದ. ಬಳಿಕ ಮನೆ ಬೀಗ ಮುರಿದು ಒಳನುಗ್ಗಿ ಚಿನ್ನಾಭರಣ, ಹಣ ದೋಚಿ ಸದ್ದಿಲ್ಲದೇ ಪರಾರಿಯಾಗುತ್ತಿದ್ದ‌.

ಆರೋಪಿಯ ಪತ್ತೆಗಾಗಿ ಐವತ್ತಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲನೆ ನಡೆಸಿದ ಮಾಗಡಿ ರೋಡ್ ಠಾಣಾ ಪೊಲೀಸರ ತಂಡ ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತನಿಂದ 6.50 ಲಕ್ಷ ಮೌಲ್ಯದ 131 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಗೂಡ್ಸ್ ಆಟೋಗಳ ಬ್ಯಾಟರಿಗಳೇ ಈತನ ಟಾರ್ಗೆಟ್; ದಾವಣಗೆರೆಯಲ್ಲಿದ್ದಾನೆ ಬ್ಯಾಟರಿ ಕಳ್ಳ

Last Updated : Dec 2, 2022, 6:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.