ETV Bharat / state

ಬಿಟ್ ಕಾಯಿನ್ ಪ್ರಕರಣದ ಶ್ರೀಕಿ ಸೋದರನಿಗೆ ವಿದೇಶ ಪ್ರವಾಸಕ್ಕೆ ನಿರ್ಬಂಧ: ದಾಖಲೆ ಕೇಳಿದ ಹೈಕೋರ್ಟ್​

author img

By

Published : Feb 3, 2022, 6:33 PM IST

ವಿಚಾರಣೆ ವೇಳೆ ಸುದರ್ಶನ್ ರಮೇಶ್ ಪರ ವಾದ ಮಂಡಿಸಿದ ಹಿರಿಯ ವಕೀಲ ವಿಕ್ರಮ್ ಹುಯಿಲ್ಗೋಳ, ಇಡಿ ಆದೇಶದಿಂದಾಗಿ ಅರ್ಜಿದಾರರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಫೆಬ್ರವರಿ 12 ರೊಳಗೆ ಕೆಲಸಕ್ಕೆ ತೆರಳದಿದ್ದರೆ ಉದ್ಯೋಗದಿಂದ ವಜಾ ಮಾಡುವುದಾಗಿ ಸಂಸ್ಥೆ ಹೇಳಿದೆ. ಹೀಗಾಗಿ, ಅರ್ಜಿದಾರರು ಶೀಘ್ರವಾಗಿ ನೆದರ್ ಲ್ಯಾಂಡ್​​ಗೆ ತೆರಳದಿದ್ದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ಇನ್ನು ಲುಕ್ಔಟ್ ಸರ್ಕ್ಯೂಲರ್ ಹೊರಡಿಸಿದ್ದೇಕೆ ಎಂಬ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಮಾಹಿತಿ ಇಲ್ಲದೆ ವಾದ ಮಂಡಿಸುವುದು ಕಷ್ಟ ಎಂದು ವಿವರಿಸಿದರು.

ಬಿಟ್ ಕಾಯಿನ್ ಪ್ರಕರಣದ ಶ್ರೀಕಿ ಸೋದರನಿಗೆ ವಿದೇಶ ಪ್ರವಾಸಕ್ಕೆ ನಿರ್ಬಂಧ: ದಾಖಲೆ ಕೇಳಿದ ಹೈಕೋರ್ಟ್​
ಬಿಟ್ ಕಾಯಿನ್ ಪ್ರಕರಣದ ಶ್ರೀಕಿ ಸೋದರನಿಗೆ ವಿದೇಶ ಪ್ರವಾಸಕ್ಕೆ ನಿರ್ಬಂಧ: ದಾಖಲೆ ಕೇಳಿದ ಹೈಕೋರ್ಟ್​

ಬೆಂಗಳೂರು: ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕಿ ಸಹೋದರ ಸುದರ್ಶನ್ ರಮೇಶ್ ವಿದೇಶ ಪ್ರವಾಸಕ್ಕೆ ನಿರ್ಬಂಧ ವಿಧಿಸಿರುವ ಜಾರಿ ನಿರ್ದೇಶನಾಲಯಕ್ಕೆ ಲುಕ್ಔಟ್ ಸರ್ಕ್ಯೂಲರ್ ಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು ಸಲ್ಲಿಸುವಂತೆ ಹೈಕೋರ್ಟ್ ನಿರ್ದೇಶಿಸಿದೆ.

ತಮ್ಮ ವಿದೇಶ ಪ್ರಯಾಣಕ್ಕೆ ನಿರ್ಬಂಧ ವಿಧಿಸಿ ಜಾರಿ ನಿರ್ದೇಶನಾಲಯ ಹೊರಡಿಸಿರುವ ಆದೇಶ ರದ್ದುಕೋರಿ ಮೆಕ್ಯಾನಿಕಲ್ ಎಂಜನಿಯರ್ ಆಗಿರುವ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನ ಸಹೋದರ ಸುದರ್ಶನ್ ರಮೇಶ್ ಸಲ್ಲಿಸಿರುವ ಅರ್ಜಿಯನ್ನು ಇಂದು ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸುದರ್ಶನ್ ರಮೇಶ್ ಪರ ವಾದ ಮಂಡಿಸಿದ ಹಿರಿಯ ವಕೀಲ ವಿಕ್ರಮ್ ಹುಯಿಲ್ಗೋಳ, ಇಡಿ ಆದೇಶದಿಂದಾಗಿ ಅರ್ಜಿದಾರರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಫೆಬ್ರವರಿ 12 ರೊಳಗೆ ಕೆಲಸಕ್ಕೆ ತೆರಳದಿದ್ದರೆ ಉದ್ಯೋಗದಿಂದ ವಜಾ ಮಾಡುವುದಾಗಿ ಸಂಸ್ಥೆ ಹೇಳಿದೆ. ಹೀಗಾಗಿ, ಅರ್ಜಿದಾರರು ಶೀಘ್ರವಾಗಿ ನೆದರ್ ಲ್ಯಾಂಡ್​​ಗೆ ತೆರಳದಿದ್ದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ಇನ್ನು ಲುಕ್ಔಟ್ ಸರ್ಕ್ಯೂಲರ್ ಹೊರಡಿಸಿದ್ದೇಕೆ ಎಂಬ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಮಾಹಿತಿ ಇಲ್ಲದೆ ವಾದ ಮಂಡಿಸುವುದು ಕಷ್ಟ ಎಂದು ವಿವರಿಸಿದರು.

ಈ ವೇಳೆ ಜಾರಿ ನಿರ್ದೇಶನಾಲಯದ ಪರ ವಕೀಲರು ವಾದಿಸಿ, ಲುಕ್ಔಟ್ ಸರ್ಕ್ಯೂಲರ್ ಗೌಪ್ಯ ದಾಖಲೆ. ಅದನ್ನು ಬಹಿರಂಗಪಡಿಸಲಾಗದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಲುಕ್ಔಟ್ ಸರ್ಕ್ಯೂಲರ್ ಅದನ್ನು ಅರ್ಜಿದಾರರು ಪ್ರಶ್ನಿಸುವುದಾದರೂ ಹೇಗೆ ಎಂದಿತು. ಅಲ್ಲದೇ, ಲುಕ್ಔಟ್ ಸರ್ಕ್ಯೂಲರ್​​ಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿ ಎಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದ ಪೀಠ, ವಿಚಾರಣೆಯನ್ನು ಫೆ.16ಕ್ಕೆ ಮುಂದೂಡಿತು.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.