ETV Bharat / state

ಬೆಂಗಳೂರಲ್ಲಿ ಬಿರುಸಿನ ಮಳೆ: ಕಾರ್ಕ್ ಮರದ ಕಾಯಿ ಬಿದ್ದು ಪರದಾಡಿದ ಸವಾರರು!

author img

By

Published : Apr 14, 2021, 10:51 PM IST

ಕೆಜಿ ರಸ್ತೆಯ ಕಂದಾಯ ಭವನದ ಮುಂಭಾಗದ ರಸ್ತೆಯಲ್ಲಿ ಸುರಿದ ಬಿರುಸಾದ ಮಳೆಗೆ ರಸ್ತೆಯ ಬದಿಯಲ್ಲಿದ್ದ ಕಾರ್ಕ್ ಬೀಜದ ಮರಗಳಿಂದ ಕಾಯಿಗಳು ಉದುರಿ ವಾಹನ ಸವಾರರಿಗೆ ತೊಂದರೆಯುಂಟಾಯಿತು.

heavy-rainfall-in-bengalore
ಕಾರ್ಕ್ ಮರದ ಕಾಯಿ ಬಿದ್ದು ಪರದಾಡಿದ ಸವಾರರು

ಬೆಂಗಳೂರು: ಜಿಟಿ ಜಿಟಿ ಮಳೆ ಬಂದ ಹಿನ್ನೆಲೆ ಕಂದಾಯ ಭವನ ರಸ್ತೆ ಮುಂಭಾಗದ ಮರಗಳಿಂದ ರಸ್ತೆಗೆ ಉದುರಿದ ಕಾರ್ಕ್ ಬೀಜದ ಕಾಯಿಗಳು ವಾಹನ ಸವಾರರಿಗೆ ತೊಂದರೆಯನ್ನುಂಟುಮಾಡಿದವು.

ಬಿರುಸಾಗಿ ಮಳೆ ಸುರಿದ ಪರಿಣಾಮ ಕೆಜಿ ರಸ್ತೆಯ ಕಂದಾಯ ಭವನದ ಮುಂಭಾಗದ ರಸ್ತೆಯಲ್ಲಿ ಎರಡು ಬದಿಯಲ್ಲಿರೋ ಕಾರ್ಕ್ ಬೀಜದ ಮರಗಳಿಂದ ಕಾಯಿಗಳು ನೆಲಕ್ಕುರುಳಿದವು.

ಮಳೆ ಬಿದ್ದಿದ್ದರಿಂದ ಕಾರ್ಕ್ ಕಾಯಿಯಲ್ಲಿನ ಬೀಜದಲ್ಲಿ ಶ್ಯಾಂಪೂ ರೀತಿಯಲ್ಲಿ ನೊರೆ ಬಂದಿದ್ದು, ಪರಿಣಾಮ ಕಂದಾಯ ಭವನದ ಮುಂದಿನ ರಸ್ತೆಯಲ್ಲಿ ಚಲಿಸುತ್ತಿದ್ದ ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಬಿದ್ದು ಜಖಂಗೊಂಡವು.

ಕಾರ್ಕ್ ಮರದ ಕಾಯಿ ಬಿದ್ದು ಪರದಾಡಿದ ಸವಾರರು

ಸ್ಥಳದಲ್ಲಿ ಬ್ಯಾರಿಕೇಡ್​ ಹಾಕಿ ನಿಧಾನಗತಿಯಲ್ಲಿ ವಾಹನ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟರು. ಸ್ಥಳದಲ್ಲಿಯೇ ಕೆಲಕಾಲ ಬೀಡುಬಿಟ್ಟು ವಾಹನ ಸವಾರರಿಗೆ ನಿಧಾನವಾಗಿ ವಾಹನ ಚಲಾಯಿಸುವಂತೆ ಪೊಲೀಸರು ಸೂಚಿಸಿದರು. ಹಲಸೂರು ಗೇಟ್ ಸಂಚಾರಿ ಪೊಲೀಸರು ಸ್ಥಳಕ್ಕೆ ನಿಯೋಜನೆಗೊಂಡು ಕಂದಾಯ ಭವನದ ಮುಂದಿನ ರಸ್ತೆಯಲ್ಲಿ ಐದು ಬ್ಯಾರಿಕೇಡ್​ ಹಾಕಿ ಸಂಚಾರ ನಿಯಂತ್ರಣ ಮಾಡಿದರು.

ಓದಿ: ಸಾರಿಗೆ ನೌಕರರನ್ನ ದಾರಿ ತಪ್ಪಿಸುತ್ತಿದ್ದಾರೆ: ಕೆ.ಸಿ.ನಾರಾಯಣಗೌಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.