ETV Bharat / state

ಬೆಂಗಳೂರಲ್ಲಿ ವರುಣನ ಆರ್ಭಟ : 51 ವರ್ಷಗಳಲ್ಲಿ ದಾಖಲೆಯ ಮಳೆ.. ಕಂಪ್ಲೀಟ್ ಸ್ಟೋರಿ

author img

By

Published : Sep 5, 2022, 7:24 PM IST

Updated : Sep 5, 2022, 7:43 PM IST

ಬೆಂಗಳೂರಲ್ಲಿ ವರುಣನ ಆರ್ಭಟ. 51 ವರ್ಷಗಳಲ್ಲಿ ದಾಖಲೆಯ 709 ಎಂಎಂ ಮಳೆ ಸುರಿದಿದೆ. ಬೆಂಗಳೂರಿನ ಕೆಲವೆಡೆ ಪ್ರತಿ ವರ್ಷಕ್ಕಿಂತ ನಾಲ್ಕು ಪಟ್ಟು ಹೆಚ್ಚು ಮಳೆ ಆಗಿದೆ.

ಬೆಂಗಳೂರಲ್ಲಿ ವರುಣನ ಆರ್ಭಟ bengaluru rain
ಬೆಂಗಳೂರಲ್ಲಿ ವರುಣನ ಆರ್ಭಟ

ಬೆಂಗಳೂರು: ಬೆಂಗಳೂರಲ್ಲಿ ಭಾರಿ ಮಳೆ ಆಗಿದೆ. 51 ವರ್ಷಗಳಲ್ಲಿ ದಾಖಲೆಯ ಮಳೆ ಸುರಿದಿದೆ. ಮಹದೇವಪುರ ವಲಯದಲ್ಲಿ ಅತಿ ಹೆಚ್ಚಿನ ಮಳೆಯಾಗಿದೆ. ನಿನ್ನೆಯೂ ಧಾರಾಕಾರ ಮಳೆ ಸುರಿದಿದೆ. ಬೊಮ್ಮನಹಳ್ಳಿ, ಬೆಂಗಳೂರು ಈಸ್ಟ್ ವಲಯದಲ್ಲಿ ಹೆಚ್ಚಿನ ಮಳೆ ಬಿದ್ದಿದೆ. ಒಟ್ಟಾರೆ ಈ ಬಾರಿಯ ಮಳೆಗಾಲದಲ್ಲಿ ಜೂನ್​​ನಿಂದ ಇಲ್ಲಿಯವರೆಗೆ 709 ಎಂ.ಎಂ ಮಳೆಯಾಗಿದೆ. ಪ್ರತಿ ವರ್ಷಕ್ಕಿಂತ ಈ ಬಾರಿ ಎರಡುವರೆ ಪಟ್ಟು ಹೆಚ್ಚು ಮಳೆ ಸುರಿದಿದೆ. ಈ ಹಿಂದೆ 1998ರಲ್ಲಿ 725 ಎಂ.ಎಂ ಮಳೆಯಾಗಿತ್ತು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದರು.

ಬೆಂಗಳೂರಲ್ಲಿ ವರುಣನ ಆರ್ಭಟ: ಭಾನುವಾರ ನಗರದಲ್ಲಿ ಸುರಿದ ಭಾರಿ ಮಳೆಯ ಅವಾಂತರಗಳ ಕುರಿತು ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, 2017ರಲ್ಲಿ ಬೊಮ್ಮನಹಳ್ಳಿ ವಲಯದಲ್ಲಿ 846 ಎಂಎಂ ಮಳೆಯಾಗಿತ್ತು. ಈ ವರ್ಷ 703 ಎಂಎಂ ಮಳೆಯಾಗಿದೆ. 2017ರ ಆಗಸ್ಟ್, ಸೆಪ್ಟಂಬರ್​​ನಲ್ಲಿ ಸುರಿದ ಮಳೆ ಇದುವರೆಗಿನ ಅತಿ ಹೆಚ್ಚು ಮಳೆಯ ದಾಖಲೆಯಾಗಿದೆ. ಈ ಬಾರಿಯ ಎರಡನೇ ಅತಿ ಹೆಚ್ಚು ಮಳೆಯಾಗಿದೆ ಎಂದು ಮಾಹಿತಿ ನೀಡಿದರು.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ

ಕೆಲ ವಲಯಗಳಲ್ಲಿ 4 ಪಟ್ಟು ಹೆಚ್ಚು ಮಳೆ: ಕಳೆದ ಕೆಲ ವರ್ಷಗಳಿಗೆ ಹೋಲಿಸಿದ್ರೆ ಆಗಸ್ಟ್ ತಿಂಗಳಲ್ಲಿ ಈ ಬಾರಿ ಕೆಲ ವಲಯಗಳಲ್ಲಿ ನಾಲ್ಕು ಪಟ್ಟು ಹೆಚ್ಚು ಮಳೆ ಸುರಿದಿದೆ. ಮಹದೇವಪುರ ವಲಯದ 28 ಕಡೆಗಳಲ್ಲಿ ಮಳೆ ನೀರು ನುಗ್ಗಿದೆ. ಬೊಮ್ಮನಹಳ್ಳಿಯಲ್ಲಿ 9 ಕಡೆ, ಈಸ್ಟ್ ಜೋನ್​​ನಲ್ಲಿ 24 ಕಡೆ ಮಳೆ ನೀರು ನುಗ್ಗಿದೆ. ಕೇಂದ್ರ ಭಾಗದಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಎತ್ತರದಲ್ಲಿ ಇರುವುದರಿಂದ ಮಳೆ ನೀರು ನಿಂತಿಲ್ಲ. ದೊಮ್ಮಲೂರು ಭಾಗದಲ್ಲಿ ಮಳೆ ನೀರಿನ ತೊಂದರೆ ಇದೆ. ಸೌತ್, ವೆಸ್ಟ್, ಆರ್ ಆರ್ ನಗರ ವಲಯಗಳಲ್ಲಿ ಹೆಚ್ಚಿನ ತೊಂದರೆಯಾಗಿಲ್ಲ. ಈಜಿಪುರದಲ್ಲಿ 16, ಕೋರಮಂಗಲದಲ್ಲಿ 26 ಕಡೆ ಮನೆಯೊಳಗೆ ನೀರು ನುಗ್ಗಿರುವ ದೂರುಗಳು ಬಂದಿವೆ. ಹೆಚ್ಎಎಲ್ ಬಳಿ ಅಪಾರ್ಟ್ಮೆಂಟ್ ಒಳಗೆ ಮಳೆ ನೀರು ನುಗ್ಗಿದೆ ಎಂದು ಮಾಹಿತಿ ನೀಡಿದರು.

  • ಅತಿವೃಷ್ಠಿಯಿಂದಾಗಿ ಬೆಂಗಳೂರಿನ ವಿವಿಧೆಡೆ ಉದ್ಭವಿಸಿರುವ ಭಯಭೀತ ನೆರೆ ಪರಿಸ್ಥಿತಿಯನ್ನು ನೋಡಿ ಆತಂಕ ಹೆಚ್ಚಾಗುತ್ತಿದೆ. ಜನರ ಸಂಕಷ್ಟ ಕಂಡು ಹೃದಯ ಭಾರವಾಗುತ್ತಿದೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಬೆಂಗಳೂರಿನ ಮೂಲ ಸೌಕರ್ಯ ಬಹಳಷ್ಟು ಹಾಳಾಗಿದೆ. ಅದನ್ನು ಸರಿ ಹಾದಿಗೆ ತರಲು ಕಾಂಗ್ರೆಸ್‌ ಪಕ್ಷ ಬದ್ಧವಾಗಿದೆ. #KarnatakaRains pic.twitter.com/xShmcg8rh6

    — DK Shivakumar (@DKShivakumar) September 5, 2022 " class="align-text-top noRightClick twitterSection" data=" ">

43 ಪಂಪ್ ಬಳಕೆ: ಒಟ್ಟು ಪಾಲಿಕೆ ಬಳಿಯಿರುವ 63 ಪಂಪ್​ಗಳಲ್ಲಿ 43 ಪಂಪ್ ಬಳಕೆಯಾಗುತ್ತಿದೆ. ಎನ್​​ಡಿಆರ್​ಎಫ್ ಸಹಾಯ, ಬೋಟ್ ಬಳಕೆ ಮಾಡಲಾಗುತ್ತಿದೆ. ಸದ್ಯ ಔಟರ್ ರಿಂಗ್ ರೋಡ್​​ನಲ್ಲಿ ಎರಡು ಅಡಿ ನೀರು ಹರಿಯುತ್ತಿದೆ ಎಂದು ತಿಳಿಸಿದರು.

ಬೆಂಗಳೂರು ಕೆರೆಗಳು ಫುಲ್: ಬೆಳ್ಳಂದೂರು, ವಿಭೂತಿಪುರ, ಬೇಗೂರು ಕೆರೆ ತುಂಬಿದೆ. ಸಾವಳಕೆರೆ ನೀರು ಇಕೊ ಸ್ಪೇಸ್ ಬೆಳ್ಳಂದೂರು ರಸ್ತೆಗೆ ಹರಿದು ಬರುತ್ತಿದೆ. ಈಗಲೂ ಎರಡು ಮೂರು ಅಡಿ ಮಳೆ ನೀರು ರಸ್ತೆಯ ಮೇಲೆ ನಿಂತಿದೆ.

  • ಮೊನ್ನೆ @narendramodi ಅವರು ಮಂಗಳೂರಿನಲ್ಲಿ ನಿಂತು ಡಬಲ್ ಇಂಜಿನ್ ಅಭಿವೃದ್ಧಿಯಾಗುತ್ತಿದೆ ಎಂದಿದ್ದು ಇದೇನಾ @BSBommai ಅವರೇ?

    ರಸ್ತೆ ಮೇಲೆ ನೀರು, ನೀರಿನೊಳಗೆ ರಸ್ತೆಯ ಗುಂಡಿ, ಬೆಂಗಳೂರಲ್ಲಿ ಸಂಚರಿಸುವ ವಾಹನಗಳಿಗೆ ಸಿಂಗಲ್ ಇಂಜಿನ್ ಸಾಲದು, ಡಬಲ್ ಇಂಜಿನ್‌ಗಳೇ ಬೇಕು!

    ಇದೇ ಬಿಜೆಪಿಯ ಡಬಲ್ ಇಂಜಿನ್ ಅಭಿವೃದ್ಧಿ!#BjpDrownsBengaluru pic.twitter.com/mu6D4TSWvI

    — Karnataka Congress (@INCKarnataka) September 5, 2022 " class="align-text-top noRightClick twitterSection" data=" ">

ಒತ್ತುವರಿ ನೊಟೀಸ್ ನೀಡುವ ಅವಶ್ಯಕತೆ ಇಲ್ಲ: ರಾಜಕಾಲುವೆ ಒತ್ತುವರಿಗೆ ಯಾವುದೇ ನೊಟೀಸ್ ನೀಡುವ ಅವಶ್ಯಕತೆ ಇಲ್ಲ. ನೊಟೀಸ್ ನೀಡದೆ ರಾಜಕಾಲುವೆ ಮೇಲಿರುವ ಕಟ್ಟಡ ತೆರವುಗೊಳಿಸುತ್ತೇವೆ. ಒತ್ತುವರಿಯಾದ 700 ಕಟ್ಟಡಗಳಲ್ಲಿ 200 ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. 150 ರಾಜಕಾಲುವೆ ಬಫರ್ ಜೋನ್​​ನಲ್ಲಿ ಕಟ್ಟಡಗಳು ಇವೆ. ಮಹದೇವಪುರದಲ್ಲಿ 350 ರಾಜಕಾಲುವೆ ಮೇಲೆ ನಿರ್ಮಿಸಿರುವ ಕಟ್ಟಡಗಳಿವೆ. ಎರಡು ತಿಂಗಳಲ್ಲಿ ರಾಜಕಾಲುವೆ ಒತ್ತುವರಿ ಮಾಡಿದ ಕಟ್ಟಡಗಳನ್ನು ತೆರವುಗೊಳಿಸಲಾಗುವುದು. ಅಕ್ಟೋಬರ್ ಅಂತ್ಯದೊಳಗೆ ರಾಜಧಾನಿಯಲ್ಲಿ ಎಲ್ಲ ಒತ್ತುವರಿ ತೆರವು ಕಾರ್ಯಾಚರಣೆ ಪೂರ್ಣಗೊಳಿಸಲಾಗುತ್ತಿದೆ ಎಂದರು.

  • Present situation on ORR near eco space . Very slowing moving traffic from devarabeesanahalli to ibluru . Moving only in single lane . Kindly avoid this stretch pic.twitter.com/I1RhHMQ514

    — Kala Krishnaswamy, IPS DCP Traffic East (@DCPTrEastBCP) September 5, 2022 " class="align-text-top noRightClick twitterSection" data=" ">

ಪರಿಹಾರ ಕಾರ್ಯದಲ್ಲಿ ಯಾವುದೇ ತಾರತಮ್ಯ ಇಲ್ಲ: ಐಟಿ ಕಂಪನಿ ಬೆಂಗಳೂರು ಬಿಟ್ಟು ಹೋಗುವ ವಿಚಾರವಾಗಿ ಮಾತಾನಾಡಿದ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಐಟಿ ಬಿಟಿ ಸೇರಿದಂತೆ ಎಲ್ಲರಿಗೂ ಬಿಬಿಎಂಪಿ ಸೌಲಭ್ಯ ಒದಗಿಸಲಾಗುತ್ತದೆ. ಯಾವ ತಾರತಮ್ಯ ಮಾಡುವುದಿಲ್ಲ. ನಮ್ಮ ಶಕ್ತಿ ಮೀರಿ ಕೆಲಸ‌ ಮಾಡುತ್ತೇವೆ. ನಾವು ಯಾವ ವಿಚಾರವನ್ನು ಹಗುರವಾಗಿ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಕೆರೆಗಳಲ್ಲಿ ತುಂಬಿರುವ ಹೂಳು: ಕೆರೆಗಳಲ್ಲಿ ಹೂಳು ಇರುವುದು ನಿಜ. ಬೆಳ್ಳಂದೂರು, ವರ್ತೂರು ಕೆರೆಯಲ್ಲಿ ಸದ್ಯಕ್ಕೆ ಹೂಳು ಎತ್ತುವ ಕಾರ್ಯ ಮಾಡಬೇಕಿದೆ. ಮಳೆಗಾಲದಲ್ಲಿ ಕಷ್ಟಸಾಧ್ಯವಿದ್ದು, ಬೇಸಿಗೆ ಕಾಲದಲ್ಲಿ ಅಲ್ಲಿನ ಕೆರೆಗಳ ಹೂಳು ತೆಗೆಯಲಾಗುವುದು. ಬೆಂಗಳೂರಿನ ಬಹುತೇಕ ಎಲ್ಲ ಕೆರೆ ತುಂಬಿವೆ. ಬೆಳ್ಳಂದೂರು, ವರ್ತೂರು, ಬೇಗೂರು ತುಂಬಿ ಹರಿಯುತ್ತಿವೆ. ಹೂಳು ತೆಗೆಯುವ ವಿಚಾರ ಸಿಎಂ ಸಭೆಯಲ್ಲಿ ಚರ್ಚೆಯಾಗಲಿದೆ ಎಂದು ತಿಳಿಸಿದರು.

ಮಳೆ ಬರದಿದ್ದರೆ ನಾಳೆ ವೇಳೆಗೆ ತಹಬದಿಗೆ: ಬೆಳ್ಳಂದೂರು ರಸ್ತೆಯಲ್ಲಿ ಇನ್ನೆರಡು ದಿನ ಇದೇ ಪರಿಸ್ಥಿತಿ ಇರಬಹುದು. ಮಳೆ ಬಂದರೆ ನಮ್ಮ ಕಂಟ್ರೋಲ್ ಮೀರಿ ಹೋಗುತ್ತದೆ. ನಾಳೆ ರಸ್ತೆ ಮೇಲೆ ಹರಿಯುತ್ತಿರುವ ಕೆರೆ ನೀರು ಕಡಿಮೆ ಆಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

(ಇದನ್ನೂ ಓದಿ: ಮಂಡ್ಯದಲ್ಲಿ ನೀರು ಪೂರೈಸುವ ಘಟಕ ಜಲಾವೃತ: ಎರಡು ದಿನ ಬೆಂಗಳೂರಿಗಿಲ್ಲ ಕಾವೇರಿ ನೀರು!)

Last Updated : Sep 5, 2022, 7:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.