ETV Bharat / state

ಕೆಂಪೇಗೌಡ ಅಂತಾರಾಷ್ಟ್ರೀಯ ಏರ್​​ಪೋರ್ಟ್​ನಲ್ಲಿ ಗನ್​ಗಳು ಪತ್ತೆ: ಅಧಿಕಾರಿಗಳಲ್ಲಿ ಆತಂಕ!

author img

By

Published : Jul 30, 2021, 12:34 PM IST

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಗನ್​ಗಳು ಬಂದಿದ್ದು, ಸಿಬ್ಬಂದಿ ಕೆಲ ಕಾಲ ಆತಂಕಕ್ಕೆ ಒಳಗಾಗುವಂತೆ ಮಾಡಿತು.

ಗನ್​ಗಳು ಪತ್ತೆ
ಗನ್​ಗಳು ಪತ್ತೆ

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ವಿಭಾಗದಲ್ಲಿ ವಿದೇಶದಿಂದ ಕೊರಿಯರ್ ಮೂಲಕ ಗನ್​ಗಳು ಬಂದಿದ್ದು, ಕೆಲಕಾಲ ಆತಂಕವನ್ನುಂಟು ಮಾಡಿತ್ತು.

ಏರ್​​ಪೋರ್ಟ್ ಕಾರ್ಗೋ ವಿಭಾಗಕ್ಕೆ ಟರ್ಕಿ ದೇಶದಿಂದ ಪಾರ್ಸಲ್ ಬಂದಿದ್ದು, ಅನುಮಾನಾಸ್ಪದವಾಗಿ ಕಂಡ ಪಾರ್ಸಲ್​ ಅನ್ನು ಕಸ್ಟಮ್ಸ್ ಅಧಿಕಾರಿಗಳು ಬಿಚ್ಚಿ ನೋಡಿದಾಗ ಗನ್​ಗಳು ಕಂಡಿವೆ. ಅರೆಕ್ಷಣ ಅಧಿಕಾರಿಗಳು ಗಾಬರಿಯಾಗಿದ್ದು, ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದಾಗ ಡಮ್ಮಿ ಗನ್ ಅನ್ನೋದು ಗೊತ್ತಾಗಿದೆ. ಸೆಮಿ ಆಟೋಮ್ಯಾಟಿಕ್ ಟಾಯ್ ಗನ್​ಗಳಾಗಿದ್ದು, ಸಿನಿಮಾ ಶೂಟಿಂಗ್ ಉದ್ದೇಶಕ್ಕಾಗಿ ಟರ್ಕಿ ದೇಶದಿಂದ ತರಿಸಿಕೊಳ್ಳಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಕೆಲ ಸಂಘಟನೆಗಳಿಂದ ಬೆದರಿಕೆ ಇರೋದು ನಿಜ.. ಗನ್​ ಇದ್ದದ್ದಕ್ಕೆ ಬಚಾವ್ ಆದೆ: ಶಶಿಕುಮಾರ್

ಕನ್ನಡದ ಬಿಗ್ ಬಜೆಟ್ ಸಿನಿಮಾವೊಂದರ ಶೂಟಿಂಗ್​ನಲ್ಲಿ ಬಳಸಲು ವಿದೇಶದಿಂದ ಗನ್ ಪಾರ್ಸಲ್ ಮಾಡಿಕೊಂಡಿದ್ದರಂತೆ ನಿರ್ಮಾಪಕರು. ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು, ಡಿಸಿಪಿ ಇಂಟೆಲಿಜೆನ್ಸ್​​ ಅನುಮತಿ ಪಡೆದು ಗನ್​ ನೀಡುವುದಾಗಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.