ETV Bharat / state

ಸರ್ಕಾರದ ಬೊಕ್ಕಸದ ಮೇಲೆ ಮಾಜಿಗಳ ಹೊರೆ: ಸರ್ಕಾರ ಪಾವತಿಸುವ ಭತ್ಯೆಯ ಮೊತ್ತವೆಷ್ಟು ಗೊತ್ತಾ?

author img

By

Published : Jul 18, 2022, 7:28 AM IST

ಆರ್‌ಟಿಐ ಕಾರ್ಯಕರ್ತರೊಬ್ಬರು ಪಡೆದ ಮಾಹಿತಿಯಲ್ಲಿ ಮಾಜಿಗಳಿಗೆ ಸರ್ಕಾರ ಪಿಂಚಣಿ, ವೈದ್ಯಕೀಯ ಭತ್ಯೆ ರೂಪದಲ್ಲಿ ಕೋಟಿ ಕೋಟಿ ಹಣ ವ್ಯಯಿಸುತ್ತಿರುವ ಸತ್ಯಾಂಶ ಬೆಳಕಿಗೆ ಬಂದಿದೆ.

government allowance
ಸರ್ಕಾರ ನೀಡುತ್ತಿರುವ ಭತ್ಯೆ ಹಣ ಮಾಹಿತಿ

ಬೆಂಗಳೂರು: ಸರ್ಕಾರ ಪ್ರತಿ ವರ್ಷ ಮಾಜಿ ಶಾಸಕರ ಪಿಂಚಣಿ, ವೈದ್ಯಕೀಯ ಭತ್ಯೆಗಳಿಗಾಗಿ ಕೋಟ್ಯಂತರ ರೂಪಾಯಿ ಹಣ ವ್ಯಯಿಸುತ್ತಿದೆ. ಈ ಸಂಬಂಧ ಆರ್​ಟಿಐ ಕಾರ್ಯಕರ್ತರೊಬ್ಬರು ಮಾಹಿತಿ ಹಕ್ಕು ಮೂಲಕ ಪಡೆದ ಮಾಹಿತಿಯಲ್ಲಿ ಮಾಜಿಗಳಿಂದ ಸರ್ಕಾರದ ಬೊಕ್ಕಸದ ಮೇಲಾಗುತ್ತಿರುವ ಹೊರೆ ಬಯಲಾಗಿದೆ. ಒಂದು ಸಾರಿ ಶಾಸಕನಾದರೆ ಸಾಕು ಆ ವ್ಯಕ್ತಿಗೆ ಜೀವನ ಪೂರ್ತಿ ಭತ್ಯೆಗಳು, ಪಿಂಚಣಿಯನ್ನು ಸರ್ಕಾರ ಪಾವತಿಸಬೇಕಾಗುತ್ತದೆ.‌

ಮಾಜಿ ಶಾಸಕರ ಹೊರೆ ಏನು?: 2013 ರಿಂದ 2021ರವರೆಗೆ ಪಿಂಚಣಿ ಹಾಗೂ ವೈದ್ಯಕೀಯ ಭತ್ಯೆ ರೂಪದಲ್ಲಿ 440 ಮಾಜಿ ವಿಧಾನಸಭೆ ಸದಸ್ಯರಿಗೆ ಸರ್ಕಾರ ಬೊಕ್ಕಸದಿಂದ ವಾರ್ಷಿಕ 26.4 ಕೋಟಿ ರೂಪಾಯಿ ಪಾವತಿಸುತ್ತಿದೆ. ಅದರಂತೆ ಮಾಸಿಕವಾಗಿ ಮಾಜಿ ಶಾಸಕರಿಗೆ 2.2 ಕೋಟಿ ರೂ. ಪಿಂಚಣಿ, ವೈದ್ಯಕೀಯ ಭತ್ಯೆ ಸರ್ಕಾರ ಪಾವತಿಮಾಡುತ್ತಿದೆ. ಮಾಜಿ ಶಾಸಕರಿಗೆ ಪಿಂಚಣಿಯಾಗಿ ತಲಾ 45,000 ರೂ. ಪಾವತಿಸಲಾಗುತ್ತಿದ್ದರೆ, ವೈದ್ಯಕೀಯ ಭತ್ಯೆ ರೂಪದಲ್ಲಿ 5,000 ರೂ. ಪಾವತಿಸಲಾಗುತ್ತಿದೆ.

ಮಾಜಿ ಎಂಎಲ್‌ಸಿಗಳ ಹೊರೆ ಏನು?: ವಿಧಾನಪರಿಷತ್​ನ ಮಾಜಿ ಸದಸ್ಯರುಗಳಿಗೆ 2015 ರಿಂದ ನಿವೃತ್ತಿ ವೇತನವನ್ನು ಸರ್ಕಾರ ನೀಡುತ್ತಿದೆ. ರಾಜ್ಯದಲ್ಲಿ ಒಟ್ಟು 150 ಮಾಜಿ ಎಂಎಲ್​ಸಿಗಳಿದ್ದಾರೆ. ಆರ್​ಟಿಐ ಮಾಹಿತಿಯಂತೆ 150 ಮಾಜಿ ಎಂಎಲ್​ಸಿಗಳಿಗೆ ಪಿಂಚಣಿ ಹಾಗೂ ವೈದ್ಯಕೀಯ ಭತ್ಯೆ ರೂಪದಲ್ಲಿ ವಾರ್ಷಿಕ ಒಟ್ಟು 8 ಕೋಟಿ ರೂ. ಪಾವತಿಸಲಾಗುತ್ತಿದ್ದು, ಮಾಸಿಕ 67.5 ಲಕ್ಷ ರೂ. ಪಾವತಿ ಮಾಡಲಾಗುತ್ತಿದೆ. ಇನ್ನು, ಸರ್ಕಾರ ಮಾಜಿ ಎಂಎಲ್​ಸಿಗಳಿಗೆ ತಲಾ 40,000 ರೂ. ಪಿಂಚಣಿ ನೀಡುತ್ತಿದ್ದು, 5,000 ರೂ. ವೈದ್ಯಕೀಯ ಭತ್ಯೆ ರೂಪದಲ್ಲಿ ನೀಡಲಾಗುತ್ತಿದೆ.

ಇದನ್ನೂ ಓದಿ: ಮೇಘಸ್ಫೋಟಗಳ ಹಿಂದೆ ವಿದೇಶಿ ಕೈವಾಡ: ಸಂಚಲನ ಮೂಡಿಸಿತು ಸಿಎಂ ಕೆಸಿಆರ್​​ ಹೇಳಿಕೆ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.