ETV Bharat / state

Government Jobs: ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿ ನೇಮಕಾತಿ; 386 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

author img

By

Published : Jun 22, 2023, 3:30 PM IST

ಕೆಫ್​ಸಿಎಸ್​ಸಿಯಲ್ಲಿ ಮಿಕ್ಕುಳಿದ ವೃಂದ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ (ಸ್ಥಳೀಯ) ವೃಂದದ ವಿವಿಧ ಹುದ್ದೆಗಳ ನೇಮಕಾತಿಗೆ ಸರ್ಕಾರ ಮುಂದಾಗಿದೆ

KEA Invited Job vacancy in KFCSC
KEA Invited Job vacancy in KFCSC

ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿ (KFCSC) ಖಾಲಿ ಇರುವ ಒಟ್ಟು 386 ಹುದ್ದೆಗಳ ಭರ್ತಿಗೆ ಸರ್ಕಾರ ಅಧಿಸೂಚನೆ ಪ್ರಕಟಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಈ ಹುದ್ದೆ ನೇಮಕಾತಿ ಭರ್ತಿಗೆ ಮುಂದಾಗಲಾಗಿದೆ. ವ್ಯವಸ್ಥಾಪಕರು, ಹಿರಿಯ ಮತ್ತು ಕಿರಿಯ ವ್ಯವಸ್ಥಾಪಕರು ಸೇರಿದಂತೆ ಹಲವು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೆಎಫ್​ಸಿಎಸ್​ಸಿಯಲ್ಲಿ ಮಿಕ್ಕುಳಿದ ವೃಂದ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ (ಸ್ಥಳೀಯ) ವೃಂದದ ವಿವಿಧ ಹುದ್ದೆಗಳು, ನೇಮಕಾತಿ ವಿಧಾನ ಸೇರಿದಂತೆ ಇನ್ನಿತರ ಮಾಹಿತಿ ಕೆಳಗಿನಂತಿದೆ.

ಹುದ್ದೆ ವಿವರ:

ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ

  • ಸಹಾಯಕ ವ್ಯವಸ್ಥಾಪಕರು : 10
  • ಗುಣಮಟ್ಟ ನಿರೀಕ್ಷಕರು : 23
  • ಹಿರಿಯ ಸಹಾಯಕರು (ಲೆಕ್ಕ): 33
  • ಹಿರಿಯ ಸಹಾಯಕರು: 57
  • ಕಿರಿಯ ಸಹಾಯಕರು: 263
  • ಒಟ್ಟು ಹುದ್ದೆಗಳು : 386

ವಿದ್ಯಾರ್ಹತೆ: ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯ ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ಪಿಯುಸಿ, ಪದವಿಯನ್ನು ಪೂರ್ಣಗೊಳಿಸಿರಬೇಕು.

ಅಧಿಸೂಚನೆ
ಅಧಿಸೂಚನೆ

ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಕೆಇಎ ಅಧಿಕೃತ ಜಾಲತಾಣ kea.kar.nic.in ದ ಮೂಲಕ ಅರ್ಜಿ ಸಲ್ಲಿಸಬಹುದು.

ಈ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುವುದು

ವಿಶೇಷ ಸೂಚನೆ: ಈ ಹುದ್ದೆಗಳ ಕುರಿತು ಅಧಿಸೂಚನೆಯನ್ನು ಕೆಇಎ ಇಂದು ಪ್ರಕಟಿಸಿದ್ದು, ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ, ಅರ್ಜಿ ಸಲ್ಲಿಕೆ ಶುಲ್ಕದ ವಿವರ ಕುರಿತು ಶೀಘ್ರದಲ್ಲಿಯೇ ಮತ್ತೊಂದು ವಿವರವಾದ ಅಧಿಸೂಚನೆ ಪ್ರಕಟಿಸುವ ಸಾಧ್ಯತೆ ಇದೆ.

ಅರ್ಜಿ ಸಲ್ಲಿಕೆ ಹೇಗೆ: ಈ ಹುದ್ದೆಗಳಿಗೆ ಜೂನ್​ 23ರ ಮಧ್ಯಾಹ್ನ 2 ಗಂಟೆಯಿಂದ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಶುಲ್ಕ ಪಾವತಿ ಜೂನ್​ 26ರ ಬೆಳಗ್ಗೆ 11 ಗಂಟೆಯಿಂದ ಪ್ರಾರಂಭವಾಗಲಿದೆ. ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಕೆ ಕಡೆಯ ದಿನಾಂಕ ಜುಲೈ 22 ಆಗಿದೆ. ಶುಲ್ಕ ಪಾವತಿಗೆ ಕಡೆಯ ದಿನಾಂಕ ಜುಲೈ 25 ಆಗಿರಲಿದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ಮುನ್ನ ಅಧಿಕೃತ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ, ಮುಂದುವರೆಯಬಹುದಾಗಿದೆ. ಅಭ್ಯರ್ಥಿಗಳು ಇಚ್ಛಿಸಿದಲ್ಲಿ ಒಂದಕ್ಕಿಂತ ಹೆಚ್ಚಿನ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸಬೇಕಿದೆ.

ಈ ಹುದ್ದೆ ಕುರಿತ ಅಧಿಕೃತ ಅಧಿಸೂಚನೆ ಮತ್ತು ವಿವರವಾದ ಮಾಹಿತಿ ಪಡೆಯಲು ಅಭ್ಯರ್ಥಿಗಳು kea.kar.nic.in ಜಾಲತಾಣಕ್ಕೆ ಭೇಟಿ ನೀಡಬಹುದು.

ಇದನ್ನೂ ಓದಿ: KEA Recruitment: 670 ಸಹಾಯಕ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.