ETV Bharat / state

ಇಂದು 1754 ಸ್ವಾಮಿ ವಿವೇಕಾನಂದ ಸ್ವಸಹಾಯ ಗುಂಪುಗಳಿಗೆ ತಲಾ 10 ಸಾವಿರ ರೂ. ಬಿಡುಗಡೆ

author img

By

Published : Mar 13, 2023, 10:09 PM IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್​ನಲ್ಲಿ ಘೋಷಿಸಿದ್ದಂತೆ ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಗುಂಪುಗಳನ್ನು ರಚಿಸಿ, 1754 ಗುಂಪುಗಳಿಗೆ ತಲಾ 10 ಸಾವಿರ ಸುತ್ತುನಿಧಿ ಬಿಡುಗಡೆ ಮಾಡಲಾಗಿದೆ.

government-has-released-circulars-each-to-swami-vivekananda-self-help-groups
ಇಂದು 1754 ಸ್ವಾಮಿ ವಿವೇಕಾನಂದ ಸ್ವಸಹಾಯ ಗುಂಪುಗಳಿಗೆ ತಲಾ 10 ಸಾವಿರ

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಯೋಜನೆಯಲ್ಲಿ ಮಹತ್ವದ ಹೆಜ್ಜೆಯನ್ನಿಡಲಾಗಿದ್ದು, ಇಂದು ಮೊದಲ ಹಂತದಲ್ಲಿ 1754 ಗುಂಪುಗಳಿಗೆ ತಲಾ 10 ಸಾವಿರ ಸುತ್ತುನಿಧಿ ಬಿಡುಗಡೆ ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್​ನಲ್ಲಿ ಘೋಷಿಸಿದ್ದಂತೆ ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದ್ದು, ಈಗಾಗಲೇ ಮೊದಲ ಹಂತದಲ್ಲಿ 5956 ಗ್ರಾಮ ಪಂಚಾಯತ್‌ನಲ್ಲಿ ಒಂದೊಂದು ಆದ್ಯತಾ ಗುಂಪುಗಳನ್ನು ರಚಿಸಲಾಗಿದೆ.

ಮೊದಲ ಹಂತದಲ್ಲಿ 1754 ಗುಂಪುಗಳಿಗೆ ತಲಾ 10 ಸಾವಿರ ಸುತ್ತುನಿಧಿ ಬಿಡುಗಡೆ ಮಾಡಲಾಗಿದ್ದು, ಇನ್ನೊಂದು ವಾರದಲ್ಲಿ ನೋಂದಣಿಯಾಗಿರುವ ಎಲ್ಲ ಗುಂಪುಗಳಿಗೆ ಸುತ್ತುನಿಧಿ ಬಿಡುಗಡೆ ಮಾಡಲಾಗುವುದು. ಇದರ ಜೊತೆಗೆ ಒಂದು ವಾರದೊಳಗೆ ಎರಡನೇ ಹಂತದಲ್ಲಿ ಪ್ರತಿ ಪಂಚಾಯತ್​ಗೆ ಎರಡರಂತೆ 12 ಸಾವಿರ ಸ್ವಾಮಿ ವಿವೇಕಾನಂದ ಯುವಕರ ಜಂಟಿ ಹಕ್ಕು ಬಾಧ್ಯತಾ ಗುಂಪುಗಳ ರಚನಾ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಪ್ರತಿ ಗುಂಪುಗಳಿಗೆ ತಲಾ 10 ಸಾವಿರ ಸುತ್ತುನಿಧಿ, ಯೋಜನಾ ಚಟುವಟಿಕೆಗಳನ್ನು ಕೈಗೊಳ್ಳಲು 5 ಲಕ್ಷ ಬ್ಯಾಂಕ್ ಸಾಲ ಸೌಲಭ್ಯ ಹಾಗೂ ಒಂದು ಲಕ್ಷ ರೂ. ಸಬ್ಸಿಡಿ ನೀಡಲಾಗುವುದು. SYSY ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ವಿಷನ್ ಕರ್ನಾಟಕ ಫೌಂಡೇಷನ್‌ ಬೆಂಗಳೂರು ಎಂಬ ಸಂಸ್ಥೆಯ ಮೂಲಕ ಈಗಾಗಲೇ 85 ಯೋಜನಾ ವರದಿಗಳನ್ನು ತಯಾರಿಸಿ https://sysykar.in ಪೋರ್ಟಲ್​ನಲ್ಲಿ ಅಳವಡಿಸಲಾಗಿದ್ದು, ರಚನೆಗೊಂಡಂತಹ ಗುಂಪುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕೋಟೆ ಭದ್ರಕ್ಕೆ ಕೇಸರಿ ತಂತ್ರ, ಕ್ಷೇತ್ರ ಕೈವಶಕ್ಕೆ ಕಾಂಗ್ರೆಸ್ ಪ್ರತಿತಂತ್ರ: ದಳಪತಿಗಳ ಮೈಂಡ್​ಗೇಮ್ ನಡುವೆ ಯಾರಾಗುತ್ತಾರೆ ಮಲ್ಲೇಶ್ವರ ಶಾಸಕ?

ಸ್ವಾಮಿ ವಿವೇಕಾನಂದ ಯುವ ಸ್ವಸಹಾಯದಿಂದಾಗುವ ಪ್ರಯೋಜನ: ಪ್ರತಿ ಗುಂಪಿಗೆ 10 ಸಾವಿರ ರೂಪಾಯಿ ಸುತ್ತುನಿಧಿ, ಒಂದು ಲಕ್ಷ ಸಬ್ಸಿಡಿಯೊಂದಿಗೆ ಐದು ಲಕ್ಷ ರೂಪಾಯಿ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಸ್ಥಳೀಯ ಬೇಡಿಕೆಯನ್ನಾಧರಿಸಿ ಎಲ್ಲ ಸ್ವಸಹಾಯಗಳ ಕಾರ್ಯಚಟುವಟಿಕೆ ಆರಂಭಿಸಿ 12 ಸಾವಿರ ಯುವ ಸಂಘಗಳನ್ನು ನವೋದ್ಯಮಗಳಾಗಿ ಪರಿವರ್ತಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ರಾಜ್ಯದಲ್ಲಿ 5 ಲಕ್ಷಕ್ಕೂ ಅಧಿಕ ಯುವಕರು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ನೆರವಾಗುತ್ತದೆ.

ವಿಶೇಷವಾದ ಯೋಜನೆಯನ್ನು ನಮ್ಮ ಇಲಾಖೆ ನೇತೃತ್ವದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಯುವಕರ ಸಬಲೀಕರಣಕ್ಕೆ ಒತ್ತು ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮಕ್ಕೆ ಒಂದರಂತೆ ಸುಮಾರು 28 ಸಾವಿರ ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಗುಂಪುಗಳನ್ನು ರಚಿಸುವ ಗುರಿ ಹೊಂದಲಾಗಿದೆ ಎಂದು ರೇಷ್ಮೆ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣ ಗೌಡ ಮಾರ್ಚ್ 10ರಂದು ತಿಳಿಸಿದ್ದರು.

ಇದನ್ನೂ ಓದಿ: ಪಕ್ಷಿಗಳ ದಾಹ ತಣಿಸಲು ಮುಂದಾದ ವಿದ್ಯಾರ್ಥಿಗಳು.. ಹಳೆ ಹೆಲ್ಮೆಟ್ ಬಳಸಿ ವಿನೂತನ ಪ್ರಯತ್ನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.