ETV Bharat / state

ಐಎಂಎ ವಂಚನೆ ಪ್ರಕರಣ : ಸಕ್ಷಮ ಪ್ರಾಧಿಕಾರದಿಂದ ಗ್ರಾಹಕರಿಗೆ ಚಿನ್ನ ವಾಪಸ್

author img

By

Published : Apr 1, 2022, 1:04 PM IST

ಐಎಂಎ ಬಹುಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಲಕ್ಕಾಗಿ ಅಡಮಾನವಿಟ್ಟ ಚಿನ್ನದ ಆಭರಣವನ್ನು ಏಪ್ರಿಲ್ 6 ರಿಂದ ಗ್ರಾಹಕರಿಗೆ ಹಿಂತಿರುಗಿಸಲು ಸಕ್ಷಮ ಪ್ರಾಧಿಕಾರದ ವಿಶೇಷಾಧಿಕಾರಿ ನಿರ್ಧರಿಸಿದ್ದಾರೆ..

ima
ಐಎಂಎ

ಬೆಂಗಳೂರು : ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದ ಐಎಂಎ ಕಂಪನಿ ಬಹುಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಂಎ ಸಂಸ್ಥೆಯಲ್ಲಿ ಸಾಲಕ್ಕಾಗಿ ಅಡಮಾನವಿಟ್ಟ ಚಿನ್ನದ ಆಭರಣವನ್ನು ಏಪ್ರಿಲ್ 6ರಿಂದ ಹಿಂತಿರುಗಿಸಲು ಸಕ್ಷಮ ಪ್ರಾಧಿಕಾರದ ವಿಶೇಷಾಧಿಕಾರಿ ನಿರ್ಧರಿಸಿದ್ದಾರೆ. ಚಿನ್ನದ ಸಾಲಗಾರರು ಬಾಕಿ ಸಾಲದ ಹಣ ಮತ್ತು ಭದ್ರತಾ ಶುಲ್ಕವನ್ನು ಏಪ್ರಿಲ್ 5ರ ಸಂಜೆ 5 ಗಂಟೆ ಒಳಗಾಗಿ ಪಾವತಿಸಬೇಕು.

ಬಾಕಿ ಮೊತ್ತ ತಿಳಿದುಕೊಳ್ಳಲು ವೆಬ್‌ಸೈಟ್‌ https://imalaims.karnataka. gov.inಗೆ ಹೋಗಿ ಆನಂತರ ಕ್ಲೈಮ್ ಸಬ್‌ಮಿಷನ್ ಪ್ರೊಸೆಸ್ ಕ್ಲಿಕ್ ಮಾಡಿ, ಐಎಂಎ ಗೋಲ್ಡ್ ಲೋನ್ ಡೀಟೆಲ್ಸ್ ಆಯ್ಕೆ ಮಾಡಿದರೆ ಮಾಹಿತಿ ಲಭ್ಯವಾಗಲಿದೆ ಎಂದು ಸಕ್ಷಮ ಪ್ರಾಧಿಕಾರದ ವಿಶೇಷಾಧಿಕಾರಿ ತಿಳಿಸಿದ್ದಾರೆ.

ಸಾಲದ ಮೊತ್ತವನ್ನು ಪ್ರಾಧಿಕಾರದ ಬ್ಯಾಂಕ್ ಖಾತೆಗೆ ಎನ್‌ಇಎಫ್‌ಟಿ ಅಥವಾ ಆರ್‌ಟಿಜಿಎಸ್ ಮೂಲಕವೇ ಪಾವತಿಸಬೇಕು. ಹೆಚ್ಚಿನ ಮಾಹಿತಿಯನ್ನು 080-2956 5353, 2956 6556, 2960 4556 ಕರೆ ಮಾಡಿ ತಿಳಿದುಕೊಳ್ಳಬಹುದು. ಸಕ್ಷಮ ಪ್ರಾಧಿಕಾರದ ವಿಳಾಸ : ಅಂಬೇಡ್ಕರ್‌ ವಿವಿ ಟವರ್, 3ನೇ ಮಹಡಿ, ಪೋಡಿಯಂ ಬ್ಲಾಕ್, ಬೆಂಗಳೂರು ಎಂದು ವಿಶೇಷಾಧಿಕಾರಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಒಬ್ಬ ವಿದ್ಯಾರ್ಥಿಯ ಪರೀಕ್ಷೆಗಾಗಿ 10ಕ್ಕೂ ಹೆಚ್ಚು ಸಿಬ್ಬಂದಿ ಕಾದು ಕುಳಿತಿದ್ದು ಕೊನೆಗೂ ವ್ಯರ್ಥ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.