ETV Bharat / state

ಬೆಂಗಳೂರಿನ ಗಲಭೆ ಪ್ರದೇಶದಲ್ಲಿ ಗಣಪ ಪ್ರತಿಷ್ಠಾಪನೆ: ಶಾಂತಿ ನೆಲೆಸಲೆಂದು ವಿಶೇಷ ಪೂಜೆ

author img

By

Published : Aug 22, 2020, 1:42 PM IST

ಬೆಂಗಳೂರು ಗಲಭೆ ಪೀಡಿತ ಕಾವಲ್ ಭೈರಸಂದ್ರದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಸ್ಥಳೀಯ ಯುವಕರು ಸೇರಿ ಹಬ್ಬ ಆಚರಣೆಗೆ ಮುಂದಾಗಿದ್ದಾರೆ. ಇದಕ್ಕೆ ಪೊಲೀಸರು ಕೂಡ ಸಾಥ್ ನೀಡಿದ್ದಾರೆ.

ಗಣೇಶ ಚತುರ್ಥಿ
ಗಣೇಶ ಚತುರ್ಥಿ

ಬೆಂಗಳೂರು: ಡಿ.ಜೆ.ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆ ಪೀಡಿತ ಕಾವಲ್ ಭೈರಸಂದ್ರದಲ್ಲಿ ಗಣೇಶ ಮೂರ್ತಿ‌ ಪ್ರತಿಷ್ಠಾಪನೆ ಮಾಡಿ ಶಾಂತಿ ನೆಲೆಸಲೆಂದು ವಿಶೇಷ ಪೂಜೆ ಮಾಡಲಾಗಿದೆ.

ಗಲಭೆಯಲ್ಲಿ ‌ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಯನ್ನು ದುಷ್ಕರ್ಮಿಗಳು ಸುಟ್ಟು ಹಾಕಿದ್ದರು. ಈ ಹಿನ್ನೆಲೆ ಭಯದ ವಾತಾವರಣ ನಿರ್ಮಾಣವಾಗಿತ್ತು. ಸದ್ಯಕ್ಕೆ ಪರಿಸ್ಥಿತಿ ಸ್ವಲ್ಪ ತಿಳಿಯಾದ ಕಾರಣ ಶಾಸಕರ ಮನೆಯ ಸಮೀಪದಲ್ಲೇ ಗಣೇಶ ಮೂರ್ತಿಯನ್ನು ಸ್ಥಳೀಯ ಯುವಕರು ಪ್ರತಿಷ್ಠಾಪನೆ ಮಾಡಿದ್ದಾರೆ.

ಗಲಭೆಯಿಂದಾಗಿ ಕಳೆದ ಒಂದು ವಾರದಿಂದ ಜನ ಹೊರಗೆ ಬರುವುದಕ್ಕೂ ಹೆದರುತ್ತಿದ್ದರು. ಗಣೇಶ ಹಬ್ಬದ ಪ್ರಯುಕ್ತ ಸ್ಥಳೀಯ ಯುವಕರು ಸೇರಿ ಹಬ್ಬ ಆಚರಣೆಗೆ ಮುಂದಾಗಿದ್ದಾರೆ. ಇದಕ್ಕೆ ಪೊಲೀಸರು ಕೂಡ ಸಾಥ್ ನೀಡಿದ್ದಾರೆ.

ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಪಕ್ಕದ ಖಾಲಿ ಜಾಗದಲ್ಲಿ ಟೆಂಟ್ ಹಾಕಿ ಗೌರಿ-ಗಣೇಶ ವಿಗ್ರಹ ಇಟ್ಟು ಗಲಭೆ ಪೀಡಿತ ಕಾವಲ್ ಭೈರಸಂದ್ರ, ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ಶಾಂತಿ, ಸೌಹಾರ್ದತೆ ನೆಲೆಸಲಿ ಎಂದು ವಿಶೇಷ ಪೂಜೆ ಮಾಡಲಾಯ್ತು. ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅಖಂಡ ಶ್ರೀನಿವಾಸಮೂರ್ತಿ ಸಹೋದರ ಚಂದ್ರಶೇಖರ್ ಸಾಥ್ ನೀಡಿದ್ದಾರೆ.

ಪ್ರತೀ ವರ್ಷ ವಿಜೃಂಭಣೆಯಿಂದ ಗಣೇಶ ಚತುರ್ಥಿ ಹಬ್ಬ ನಡೆಯುತ್ತಿತ್ತು. ಆದರೆ ಈ ಬಾರಿ ಕೊರೊನಾ ಮತ್ತು ಗಲಭೆ ಹಿನ್ನೆಲೆ ಸರಳವಾಗಿ ಹಬ್ಬ ಆಚರಣೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.