ETV Bharat / state

ಲಾಭಾಂಶ ಕೊಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ: ಆರೋಪಿ ಪರಾರಿ

author img

By

Published : Jan 3, 2022, 7:08 AM IST

ವಿದೇಶಿ ಹಣ ವಿನಿಮಯ, ವಿಮಾನದ ಟಿಕೆಟ್, ಟ್ರಾವೆಲ್ ಪ್ಯಾಕೇಜಿಂಗ್​​​ನಲ್ಲಿ ಹಣ ಹೂಡಿಕೆ ಮಾಡಿದರೆ ಲಕ್ಷಾಂತರ ರೂ. ಲಾಭಾಂಶ ಕೊಡುವುದಾಗಿ ನಂಬಿಸಿ ಖಾಸಗಿ ಕಂಪನಿ ನೌಕರನಿಗೆ ವಂಚಿಸಿ ಆರೋಪಿ ಪರಾರಿಯಾಗಿದ್ದಾರೆ. ಈ ಸಂಬಂಧ ಪ್ರಕರಣ ಕೂಡಾ ದಾಖಲಾಗಿದೆ.

Fraud case registered in Bangalore
ಲಾಭಾಂಶ ಕೊಡಿಸುವುದಾಗಿ ನಂಬಿಸಿ ಖಾಸಗಿ ಕಂಪನೆ ನೌಕರನಿಗೆ ವಂಚನೆ

ಬೆಂಗಳೂರು: ವಿದೇಶಿ ಹಣ ವಿನಿಮಯ, ವಿಮಾನದ ಟಿಕೆಟ್, ಟ್ರಾವೆಲ್ ಪ್ಯಾಕೇಜಿಂಗ್​​​ನಲ್ಲಿ ಹಣ ಹೂಡಿಕೆ ಮಾಡಿದರೆ ಲಕ್ಷಾಂತರ ರೂ. ಲಾಭಾಂಶ ಕೊಡುವುದಾಗಿ ನಂಬಿಸಿ ಖಾಸಗಿ ಕಂಪನಿ ನೌಕರನಿಗೆ 12.59 ಲಕ್ಷ ರೂ. ವಂಚಿಸಿದ ಆರೋಪಿ ತಲೆಮರೆಸಿಕೊಂಡಿದ್ದಾನೆ.

ವಂಚನೆಗೊಳಗಾದ ಯಲಹಂಕದ ನಿವಾಸಿ ಮಲ್ಲೇಶ್ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಪ್ರಮೋದ್ ವಿರುದ್ಧ ಯಲಹಂಕ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಮಲ್ಲೇಶ್ ಖಾಸಗಿ ಕಂಪನಿ ನೌಕರನಾಗಿದ್ದು, ಕೆಲ ವರ್ಷಗಳ ಹಿಂದೆ ಇವರಿಗೆ ಆರೋಪಿ ಪ್ರಮೋದ್ ಪರಿಚಯವಾಗಿತ್ತು. ಆಗ ತಾನು ಎಂಟರ್ ಪ್ರೈಸಸ್ ಹೆಸರಿನ ಟ್ರಾವೆಲ್ ಕಚೇರಿ ನಡೆಸುತ್ತಿದ್ದು, ವಿದೇಶಿ ಹಣ ವಿನಿಮಯ, ವಿಮಾನದ ಟಿಕೆಟ್ ಮಾರಾಟ, ಟ್ರಾವೆಲ್ ಪ್ಯಾಕೇಜಿಂಗ್ ಮಾಡಿಕೊಂಡಿದ್ದೇನೆ. ಇದರಲ್ಲಿ ಹಣ ಹೂಡಿಕೆ ಮಾಡಿದರೆ ಲಕ್ಷಾಂತರ ರೂ. ಲಾಭಾಂಶ ಪಡೆದುಕೊಳ್ಳಬಹುದು ಎಂದು ನಂಬಿಸಿ ಆತನಿಂದ 1.32 ಲಕ್ಷ ರೂ. ಪಡೆದುಕೊಂಡಿದ್ದ.

ಇದಾದ ಸ್ವಲ್ಪ ದಿನಗಳ ಬಳಿಕ ಮಲ್ಲೇಶ್‌ಗೆ ಕರೆ ಮಾಡಿದ ಪ್ರಮೋದ್, ಈಗಾಗಲೇ ಹೂಡಿಕೆ ಮಾಡಿರುವ ಹಣದ ಲಾಭಾಂಶ ಬರುತ್ತದೆ. ಮತ್ತೊಂದು ಸ್ಕೀಂನಲ್ಲಿ ಹೂಡಿಕೆ ಮಾಡಿದರೆ ಇನ್ನಷ್ಟು ಲಾಭ ಪಡೆಯಬಹುದು ಎಂದು ನಂಬಿಸಿ ಹಂತ - ಹಂತವಾಗಿ ಮಲ್ಲೇಶ್‌ನಿಂದ 12.59 ಲಕ್ಷ ರೂ.ನ್ನು ಹೂಡಿಕೆ ಮಾಡಿಸಿದ್ದ.

ನಂತರ ಯಾವುದೇ ಲಾಭಾಂಶ ಕೊಡದೇ ಇದ್ದಾಗ ತಾನು ಕೊಟ್ಟ ಹಣ ಹಿಂತಿರುಗಿಸುವಂತೆ ಮಲ್ಲೇಶ್ ಹೇಳಿದ್ದ. ಇದಾದ ಬಳಿಕ ಆರೋಪಿ ಪ್ರಮೋದ್ ಮೊಬೈಲ್ ಸ್ವಿಚ್ಡ್​​​​ ಆಫ್​ ಮಾಡಿ ಪರಾರಿಯಾಗಿದ್ದಾನೆ. ಅಸಲನ್ನೂ ನೀಡದೇ, ಲಾಭಾಂಶವನ್ನೂ ಕೊಡದೆ ವಂಚಿಸಿದ್ದಾನೆ ಎಂದು ತಿಳಿದು ಬಂದಿದೆ.

ಆರೋಪಿ ಪ್ರಮೋದ್ ಇದೇ ಮಾದರಿಯಲ್ಲಿ ಧನಂಜಯ್, ಪ್ರಿಯಾಂಕ ಮಿಶ್ರಾ ಹಾಗೂ ಭುವನೇಶ್ವರಿ ಎಂಬುವವರಿಗೂ ಲಕ್ಷಾಂತರ ರೂ. ವಂಚಿಸಿದ್ದಾನೆ ಎಂದು ಸಂತ್ರಸ್ತ ಮಲ್ಲೇಶ ಹೇಳಿದ್ದಾರೆ.

ಇದನ್ನೂ ಓದಿ: ಇಂದಿನಿಂದ 15-18 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಲಸಿಕೆ ಪ್ರಾರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.