ETV Bharat / state

ಐಟಿ ಪ್ರಾಜೆಕ್ಟ್​​ ಕೊಡಿಸುವುದಾಗಿ ದೋಖಾ: ಅಕ್ಕ - ತಮ್ಮನ ಮೋಸದ ಜಾಲಕ್ಕೆ ಬಿದ್ದ ನವೋದ್ಯಮಿಗಳು

author img

By

Published : Sep 2, 2021, 11:33 AM IST

ಲಾಕ್​ಡೌನ್​ನಿಂದ ನಷ್ಟದಲ್ಲಿರುವ ಉದ್ಯಮಿಗಳನ್ನು ಟಾರ್ಗೆಟ್ ಮಾಡಿ ವಂಚಿಸುತ್ತಿದ್ದ ಆರೋಪಿಗಳು, ಅಮೆರಿಕ ದೇಶದ ಹೊಸ ಹೊಸ ಪ್ರಾಜೆಕ್ಟ್‌ಗಳನ್ನು ಕೊಡಿಸುವುದಾಗಿ ನಂಬಿಸುತ್ತಿದ್ದರು. ಆರ್‌ಕೆ ಎಂಟರ್‌ಪ್ರೈಸಸ್ ಹಾಗೂ ಐಟಿ ಟ್ರೀ ಕಂಪನಿ‌ಗಳ ಹೆಸರಿನಲ್ಲಿ ಉದ್ಯಮಿಗಳನ್ನು ಸೆಳೆಯುತ್ತಿದ್ದರು.

fraud-case-on-sister-and-brother-in-bengaluru
ಐಟಿ ಪ್ರಾಜೆಕ್ಟ್​​ ಕೊಡಿಸುವುದಾಗಿ ದೋಖಾ: ಅಕ್ಕ-ತಮ್ಮನ ಮೋಸದ ಜಾಲಕ್ಕೆ ಬಿದ್ದ ನವೋದ್ಯಮಿಗಳು

ಬೆಂಗಳೂರು: ಐಟಿ ಪ್ರಾಜೆಕ್ಟ್​ಗಳನ್ನು ಕೊಡಿಸುವುದಾಗಿ ಹೈಟೆಕ್ ದೋಖಾ ನಡೆದಿರುವುದು ಇದೀಗ ಬೆಳಕಿಗೆ ಬಂದಿದೆ. ಅಕ್ಕ-ತಮ್ಮನ ಮೋಸದ ಜಾಲಕ್ಕೆ ಬಿದ್ದ ಸಾಲು ಸಾಲು ನವೋದ್ಯಮಿಗಳು ಲಕ್ಷಾಂತರ ರೂ. ಉಂಡೆನಾಮ ತಿಕ್ಕಿಸಿಕೊಂಡಿದ್ದಾರೆ.

ಖತರ್ನಾಕ್ ಸಹೋದರ-ಸಹೋದರಿಯರ ವಿರುದ್ಧ ನಗರದ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತಮ್ಮನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದು, ಪರಾರಿಯಾಗಿರುವ ಅಕ್ಕನಿಗಾಗಿ ಬಲೆ ಬೀಸಿದ್ದಾರೆ.

ನಗರದ ಬಾಗಲಗುಂಟೆ ಎಂಇಐ ಬಡಾವಣೆಯ ನಿವಾಸಿಗಳಾದ ರೂಪೇಶ್ ಮತ್ತು ಕಾವ್ಯಾರಿಂದ ವಂಚನೆ ಆರೋಪ ಕೇಳಿ ಬಂದಿದೆ. ಅಮೆರಿಕ ಮೂಲದ ಪ್ರಾಜೆಕ್ಟ್‌ಗಳನ್ನು ಕೊಡಿಸುವುದಾಗಿ ನಂಬಿಸಿ 50 ಲಕ್ಷಕ್ಕೂ ಹೆಚ್ಚು ಹಣ ಪಡೆದು ವಂಚಿಸಿದ್ದಾರೆ ಎಂದು 8ಕ್ಕೂ ಹೆಚ್ಚು ಉದ್ಯಮಿಗಳು ದೂರು ನೀಡಿದ್ದಾರೆ.

ಲಾಕ್‌ಡೌನ್‌ನಲ್ಲಿ ಕೊಂಚ ನೆಲಕಚ್ಚಿದ್ದ ಐಟಿ ಉದ್ಯಮವನ್ನೇ ಟಾರ್ಗೆಟ್ ಮಾಡಿದ್ದ ಅಕ್ಕ-ತಮ್ಮ, ಚೇತರಿಸಿಕೊಳ್ಳಲು ಅಮೆರಿಕ ಮೂಲದ ಪ್ರಾಜೆಕ್ಟ್ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ದೂರಲಾಗಿದೆ.

ಉದ್ಯಮಿ ಗಂಗಾಧರ್, ಹೈದರಾಬಾದ್ ಮೂಲದ ರಣಬೀರ್ ಸಿಂಗ್ ಸೇರಿದಂತೆ ಐದಾರು ಉದ್ಯಮಿಗಳು ವಂಚನೆಗೆ ಒಳಗಾಗಿದ್ದಾರೆ. ಉದ್ಯಮಿಗಳಿಂದ ಹಂತ ಹಂತವಾಗಿ 50 ಲಕ್ಷಕ್ಕೂ ಹೆಚ್ಚು ಹಣ ಪಡೆದು ಪರಾರಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರೂಪೇಶ್​ನನ್ನು ಬಂಧಿಸಿದ್ದೇವೆ. ತಲೆಮರೆಸಿಕೊಂಡಿರುವ ಸಹೋದರಿ ಕಾವ್ಯಾಗಾಗಿ ಶೋಧ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಷ್ಟದಲ್ಲಿರುವ ಉದ್ಯಮಿಗಳೇ ಟಾರ್ಗೆಟ್:

ಲಾಕ್​ಡೌನ್​ನಿಂದ ನಷ್ಟದಲ್ಲಿರುವ ಉದ್ಯಮಿಗಳನ್ನು ಟಾರ್ಗೆಟ್ ಮಾಡಿ ವಂಚಿಸುತ್ತಿದ್ದ ಆರೋಪಿಗಳು, ಅಮೆರಿಕ ದೇಶದ ಹೊಸ ಹೊಸ ಪ್ರಾಜೆಕ್ಟ್‌ಗಳನ್ನು ಕೊಡಿಸುವುದಾಗಿ ನಂಬಿಸುತ್ತಿದ್ದರು. ಆರ್‌ಕೆ ಎಂಟರ್‌ಪ್ರೈಸಸ್ ಹಾಗೂ ಐಟಿ ಟ್ರೀ ಕಂಪನಿ‌ಗಳ ಹೆಸರಿನಲ್ಲಿ ಉದ್ಯಮಿಗಳನ್ನು ಸೆಳೆಯುತ್ತಿದ್ದರು.

ಅಮೆರಿಕದ ಗ್ರೂಪ್ ಆನ್ ಎಂಬ ಕಂಪನಿಯ ಕಾಮನ್ ಸರ್ವಿಸ್ ಪ್ರಾಜೆಕ್ಟ್ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದಾರೆ. ಕಂಪನಿಗಳು ಪ್ರಾಜೆಕ್ಟ್ ಕೊಡಬೇಕೆಂದರೆ ಅಡ್ವಾನ್ಸ್ ಹಣ ನೀಡಬೇಕು. ಅಲ್ಲದೇ ಸ್ವಂತ ಕಚೇರಿಯನ್ನು ನಿರ್ಮಿಸಿಕೊಳ್ಳಬೇಕು ಎಂದು ಕಾವ್ಯಾ, ರೂಪೇಶ್ ಹೇಳುತ್ತಿದ್ದರು. ಇಬ್ಬರ ಮಾತನ್ನು ನಂಬಿದ್ದ ಉದ್ಯಮಿಗಳು ಕಚೇರಿಯನ್ನು ಸಿದ್ದಪಡಿಸಿ ಒಂದಷ್ಟು ಜನ‌ ನೌಕರರನ್ನ ನೇಮಿಸಿಕೊಂಡಿದ್ದರು ಎನ್ನಲಾಗಿದೆ.

ತಮ್ಮ ಮೇಲೆ ವಂಚನೆಯ ಆರೋಪ ಕೇಳಿಬಂದ ತಕ್ಷಣ ರಾತ್ರೋರಾತ್ರಿ ಕಚೇರಿ ಸ್ಥಳಾಂತರಿಸಿದ್ದ ಅಕ್ಕ-ತಮ್ಮ ಇಬ್ಬರ ಮೇಲೆ ಬಾಗಲಕುಂಟೆ ಠಾಣೆಯಲ್ಲಿ 8ಕ್ಕೂ ಹೆಚ್ಚು ಉದ್ಯಮಿಗಳು ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ನಿಲ್ಲದ ಕೋವಿಡ್ ಅಬ್ಬರ: ಕಳೆದ 24 ಗಂಟೆಗಳಲ್ಲಿ 47,092 ಜನರಿಗೆ ವಕ್ಕರಿಸಿರುವ ವೈರಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.