ETV Bharat / state

ಸಿಎಎ, ಎನ್​ಆರ್​ಸಿ ವಿರುದ್ಧ ಜನ ಜಾಗೃತಿ ಮೂಡಿಸಲು ಮುಂದಾದ ಕಾಂಗ್ರೆಸ್..ಜ.16 ರಿಂದ ಕಾರ್ಯಗಾರ

author img

By

Published : Jan 14, 2020, 4:40 PM IST

ಸಿಎಎ, ಎನ್​ಆರ್​ಸಿ ವಿರುದ್ಧ ಜನ ಜಾಗೃತಿ ಮೂಡಿಸಲು ಕಾಂಗ್ರೆಸ್​​ ಇದೇ 16 ರಿಂದ ಕಾರ್ಯಾಗಾರ ಆರಂಭಿಸಲಿದೆ.

ugrappa
ಮಾಜಿ ಸಂಸದ ವಿ.ಎಸ್. ಉಗ್ರಪ್ಪ

ಬೆಂಗಳೂರು: ಕೇಂದ್ರ ಜಾರಿಗೆ ತಂದಿರುವ ಸಿಎಎ, ಎನ್​ಆರ್​ಸಿ ಕಾಯ್ದೆಗಳ ವಿರುದ್ಧ ಜನ ಜಾಗೃತಿ ಅಭಿಯಾನ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲಾ, ತಾಲೂಕು ಮಟ್ಟದಲ್ಲಿ ಜನ ಜಾಗೃತಿ ಅಭಿಯಾನ ನಡೆಯಲಿದೆ. ಹೀಗಾಗಿ ಜನವರಿ 16 ರಂದು ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷದ ಮುಖಂಡರಿಗೆ ಕಾರ್ಯಗಾರ ಹಮ್ಮಿಕೊಂಡಿದ್ದೇವೆ. ಇದರಲ್ಲಿ ಪಕ್ಷದ ಹಿರಿಯ ನಾಯಕರು, ಸಂಸದರು, ಶಾಸಕರು, ಮುಖಂಡರು ಭಾಗಿಯಾಗಲಿದ್ದಾರೆ ಎಂದರು.

ಮಾಜಿ ಸಂಸದ ವಿ.ಎಸ್. ಉಗ್ರಪ್ಪ

ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ಬಾಣ ಮುಂದುವರಿಸಿದ್ರು. ಶೇ.2.4 ಇದ್ದ ಹಣದುಬ್ಬರ ಶೇ.7 ಕ್ಕೆ ಜಿಗಿದಿದೆ. ಹೀಗಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಆದರೂ ಪ್ರಧಾನಿ ಅಚ್ಛೇದಿನ್ ಬಂದಿದೆ ಅಂತಾರೆ ಎಂದು ವ್ಯಂಗ್ಯವಾಡಿದ್ರು. ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ಗೋಶಲ್​​ ಅವರೇ ಸಿಎಎ ವಿರುದ್ಧ ಮಾತಾಡ್ತಾರೆ. ಇತ್ತ ಉತ್ತರಪ್ರದೇಶದ ಸಚಿವರೊಬ್ಬರು, ಮೋದಿ ವಿರುದ್ಧ ಮಾತಾಡಿದ್ರೆ ಸುಡ್ತೇನೆ ಅಂತಾರೆ. ಅವರಲ್ಲೇ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ.

ವಿವಾದಾತ್ಮಹ ಹೇಳಿಕೆ ಕೊಟ್ಟಿರುವ ಸೋಮಶೇಖರ್ ವಿರುದ್ಧ ಸುಮೋಟೊ ಅಡಿ ಕೇಸ್ ದಾಖಲಿಸಬೇಕು. ಇಲ್ಲವಾದ್ರೆ, ಮೋದಿ ಹಿಟ್ಲರ್​ ಆಡಳಿತ ಜಾರಿಗೆ ತರ್ತಾರೆ. ಜನರು ಎಚ್ಚೆತ್ತುಕೊಂಡು ಅಧಿಕಾರದಿಂದ ಮೋದಿ, ಅಮಿತ್​ ಶಾರನ್ನು ಕೆಳಗಿಳಿಸಬೇಕು. ದೇಶದಲ್ಲಿ ಕಾನೂನು ಸುವ್ಯವಸ್ಥೆ ಇದೆಯಾ? ಮೋದಿ ಸರ್ವಾಧಿಕಾರಿ ಪ್ರವೃತ್ತಿ ಹೊಂದಿದ್ದು, ಈ ರಾಷ್ಟ್ರದ ಹಿಟ್ಲರ್​​​​​ ರೀತಿ ವರ್ತಿಸುತ್ತಿದ್ದಾರೆ. ಜನ್ರು, ನಿಮ್ಮ ವಿರುದ್ಧ ತಿರುಗಿಬೀಳುವ ಮೊದಲು ಎಚ್ಚೆತ್ತುಕೊಂಡು, ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಿ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದ್ರು.

Intro:newsBody:ಕೇಂದ್ರದ ಸಿಎಎ, ಎನ್ ಆರ್ ಸಿ ಕಾಯ್ದೆ ಜಾರಿ ವಿರುದ್ಧ ಕಾರ್ಯಾಗಾರದ ಮೂಲಕ ಕಾಂಗ್ರೆಸ್ ಜನಜಾಗೃತಿ: ಉಗ್ರಪ್ಪ

ಬೆಂಗಳೂರು: ಕೇಂದ್ರದ ಸಿಎಎ, ಎನ್ ಆರ್ ಸಿ ಕಾಯ್ದೆ ಜಾರಿ ವಿರುದ್ಧ ಜನ ಜಾಗೃತಿ ಅಭಿಯಾನ ರೂಪಿಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಜಿಲ್ಲಾ, ತಾಲೂಕು ಮಟ್ಟದಲ್ಲಿ ಜಾನಜಾಗೃತಿ ಅಭಿಯಾನ ನಡೆಯಲಿದೆ. ಹೀಗಾಗಿ ಪಕ್ಷದ ಮುಖಂಡರಿಗೆ ಕಾರ್ಯಾಗಾರ ಹಮ್ಮಿಕೊಂಡಿದ್ದೇವೆ. ಜ.16 ರಂದು ಕಾರ್ಯಾಗಾರ ಹಮ್ಮಿಕೊಂಡಿದ್ದೇವೆ. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಈ ಒಂದು ದಿನದ ಕಾರ್ಯಾಗಾರ ನಡೆಯಲಿದೆ. ಪಕ್ಷದ ಹಿರಿಯನಾಯಕರು, ಸಂಸದರು, ಶಾಸಕರು, ಮುಖಂಡರು ಇದರಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಾಗಾರದ ನಂತರ ಜಾಗೃತಿ ಅಭಿಯಾನ ಹಮ್ಮಿಕೊಳ್ತೇವೆ. 200 ರಿಂದ 250 ಜನ ವರ್ಕ್ ಶಾಪ್ ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಹಣದುಬ್ಬರ ಶೇ.2.4 ಇದ್ದ ಹಣದುಬ್ಬರ ಶೇ.7 ಕ್ಕೆ ಜಿಗಿದಿದೆ. ಹೀಗಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಆದರೂ ಪ್ರಧಾನಿ ಅಚ್ಚೇದಿನ್ ಬಂದಿದೆ ಅಂತಾರೆ. ಸಿಎಎ ವಿರುದ್ಧ ನಿಮ್ಮ ಪಕ್ಷದ ನಾಯಕರೇ ಮಾತನಾಡ್ತಾರೆ. ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ಗೋಶಲ್ ಹೇಳಿಕೆ ನೀಡ್ತಾರೆ, ಮೋದಿ ವಿರುದ್ಧ ಮಾತನಾಡಿದರೆ ಸುಡ್ತೇನೆ ಅಂತ ಯುಪಿ ಸಚಿವರು ಹೇಳ್ತಾರೆ. ಪರಸ್ಪರ ಅವರಲ್ಲೇ ಸಾಕಷ್ಟು ಭಿನ್ನಾಬಿಪ್ರಾಯಗಳಿವೆ. ಇಲ್ಲಿ ಸೋಮಶೇಖರ್ ರೆಡ್ಡಿ ವಿವಾದಾತ್ಮಕ ಹೇಳಿಕೆ ಕೊಡ್ತಾರೆ. ಸುಮೋಟು ಅಡಿ ಇವೆಲ್ಲದರ ವಿರುದ್ಧ ಕೇಸ್ ದಾಖಲಿಸಬೇಕು. ಇಲ್ಲವಾದ್ರೆ ಮೋದಿ ಹಿಟ್ಲರ್ ಆಡಳಿತ ಜಾರಿಗೆ ತರ್ತಾರೆ. ಇದರ ವಿರುದ್ಧ ಜನ ಎಚ್ಚರಗೊಳ್ಳಬೇಕು. ಮೋದಿ, ಶಾ ಅವರನ್ನ ಕೆಳಗಿಳಿಸಬೇಕು. ಅಚ್ಚಾದಿನ್ ಇದೇನಾ, ಇದನ್ನ ಪ್ರಶ್ನೆ ಮಾಡಿದ್ರೆ ಹುಚ್ಚುನಾಯಿಗಳ ತರ ಹೊಡೆಯಬೇಕಾಗುತ್ತೆ ಅಂತ ಬಿಜೆಪಿ ನಾಯಕರು ಎಚ್ಚರಿಕೆ ನೀಡ್ತಾರೆ. ಕಾನೂನು ಸುವ್ಯವಸ್ಥೆ ದೇಶದಲ್ಲಿ ಇದೆಯಾ? ಪಶ್ಚಿಮ ಬಂಗಾಳ, ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಇದೆಯಾ? ಬಳ್ಳಾರಿ ನಗರ ಶಾಸಕರು ಇದೇ ರೀತಿ ಮಾತನಾಡಿದ್ರು. ಇದು ಸರ್ವಾಧಿಕಾರಿ ಪ್ರವೃತ್ತಿ. ಮೋದಿ ಈ ರಾಷ್ಟ್ರದ ಹಿಟ್ಲರ್, ಸರ್ವಾಧಿಕಾರಿ ರೀತಿ ವರ್ತಿಸುತ್ತಿದ್ದಾರೆ. ಜನ ನಿಮ್ಮ ವಿರುದ್ದ ತಿರುಗಿಬೀಳೋ ಮೊದಲೇ ಎಚ್ಚೆತ್ತುಕೊಂಡು ಕಾನೂನು ಸುವ್ಯವಸ್ಥೆ ಕಾಪಾಡಿ ಎಂದು ಸಲಹೆಯಿತ್ತರು.Conclusion:news

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.