ETV Bharat / state

ಕಳಪೆ ಆಹಾರ ಸಾಮಗ್ರಿ ವಿತರಿಸಿದರೆ ಕಠಿಣ ಕ್ರಮ: ಆರ್​.ಅಶೋಕ್​​ ವಾರ್ನಿಂಗ್​​

author img

By

Published : Apr 5, 2020, 6:25 PM IST

ಸರ್ಕಾರ ನಿರ್ಗತಿಕರಿಗೆ, ಬಡವರಿಗೆ ನೀಡುತ್ತಿರುವ ಆಹಾರದಲ್ಲಿ ಕಳಪೆ ಕಂಡು ಬಂದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ ಎಚ್ಚರಿಕೆ ನೀಡಿದ್ದಾರೆ.

food-kit-distribute-to-people-due-to-lock-down
ಕಂದಾಯ ಸಚಿವ ಆರ್.ಅಶೋಕ

ಕೆ‌.ಆರ್​.ಪುರ( ಬೆಂಗಳೂರು): ಸರ್ಕಾರದ ಬಡವರಿಗೆ, ನಿರ್ಗತಿಕರಿಗೆ ವಿತರಿಸುತ್ತಿರುವ ಆಹಾರ ಸಾಮಗ್ರಿಗಳಲ್ಲಿ ಕಳಪೆ ಅಥವಾ ವಂಚನೆ ಕಂಡು ಬಂದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಕಂದಾಯ ಸಚಿವ ಆರ್​.ಅಶೋಕ ಖಡಕ್​ ಎಚ್ಚರಿಕೆ ನೀಡಿದರು.

ಕಂದಾಯ ಸಚಿವ ಆರ್.ಅಶೋಕ

ಲಾಕ್​ಡೌನ್​ ಹಿನ್ನೆಲೆ ನಗರದಲ್ಲಿ ಸುಮಾರು 40 ಸಾವಿರ ಜನರಿಗೆ ರೇಷನ್ ವಿತರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮೊದಲು ಮುಂಜಾಗ್ರತ ಕ್ರಮ ಕೈಗೊಂಡ ಹಿನ್ನೆಲೆ ಸಾವು - ನೋವಿನ ಪ್ರಮಾಣ ಕಡಿಮೆ ಇದೆ ಎಂದರು.

ಇನ್ನೂ ನಗರದಲ್ಲಿ ಸಚಿವ ಬೈರತಿ ಬಸವರಾಜ 40 ಸಾವಿರ ಕುಟುಂಬಗಳಿಗೆ ಪಡಿತರ ವಿತರಿಸಿದರು. ಕೆ.ಆರ್.ಪುರ ಕ್ಷೇತ್ರದ ಜನತೆಗೆ ಆಹಾರ ಸಾಮಗ್ರಿಗಳ ಕಿಟ್ ಅನ್ನು ಕಂದಾಯ ಸಚಿವ ಆರ್. ಅಶೋಕ್, ವಸತಿ ಸಚಿವ ಸೋಮಣ್ಣ, ಸಚಿವ ಬೈರತಿ ಬಸವರಾಜ ವಿತರಿಸಿದರು.

ಕ್ಷೇತ್ರದ ಜನತೆಗೆ ಹಬ್ಬಗಳ ಸಂದರ್ಭದಲ್ಲಿ ಆಹಾರ ಸಾಮಗ್ರಿಗಳನ್ನು ವಿತರಿಸಿತ್ತಿದ್ದ ಬೈರತಿ ಬಸವರಾಜ ಈ ಭಾರಿ ಭಾರತ ಲಾಕ್ ಡೌನ್​ನಿಂದ ಜನರಿಗೆ 15 ದಿನಗಳಿಗೆ ಬೇಕಾಗುವಷ್ಟು ಆಹಾರ ಸಾಮಗ್ರಿ ನೀಡಿದ್ದಾರೆ.

ಕಾರ್ಮಿಕ ಇಲಾಖೆ ವತಿಯಿಂದ ಒಂದು ಲಕ್ಷ ಕಿಟ್​ ಬ್ಯಾಗ್​ಗಳನ್ನು ತಯಾರಿಸಿದ್ದೇವೆ. ಪ್ರತಿ ದಿನ ಅರ್ಧ ಲೀಟರ್ ಹಾಲು ಕೂಡ ಕೊಡಲಾಗುತ್ತಿದೆ ಎಂದು ಸಚಿವ ಬೈರತಿ ಬಸವರಾಜು ವಿವರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.