ETV Bharat / state

ಬೆಂಗಳೂರಲ್ಲಿ ಬಿಲ್ಡರ್ ಅಪಹರಿಸಿ ಕಿರುಕುಳ; 8 ಜನರ ವಿರುದ್ಧ ಎಫ್ಐಆರ್

author img

By ETV Bharat Karnataka Team

Published : Jan 18, 2024, 11:31 AM IST

ಬೆಂಗಳೂರಿನಲ್ಲಿ ಜನವರಿ 12 ರಂದು 8 ಜನ ಆರೋಪಿಗಳು ಬಿಲ್ಡರ್​ವೋರ್ವರನ್ನು​ ಅಪಹರಿಸಿ ಕಿರುಕುಳ ನೀಡಿದ್ದರು.

ಬಿಲ್ಡರ್ ಅಪಹರಣ ಪ್ರಕರಣ
ಬಿಲ್ಡರ್ ಅಪಹರಣ ಪ್ರಕರಣ

ಬೆಂಗಳೂರು : ವಂಚನೆಯ ಕುರಿತು ದೂರು ದಾಖಲಿಸಿದ್ದಕ್ಕೆ ಬಿಲ್ಡರ್​ ಅನ್ನು ಅಪಹರಿಸಿ ಕಿರುಕುಳ ನೀಡಿದ್ದ ಆರೋಪಿಗಳ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಬಿಲ್ಡರ್ ಅಶೋಕ್ ಶಿವರಾಜ್ ಎಂಬುವರನ್ನು ಜನವರಿ 12 ರಂದು ಜ್ಞಾನಭಾರತಿ ಸಮುದಾಯ ಭವನ‌ದ ಬಳಿಯಿಂದ ಅಪಹರಿಸಿದ್ದರು. ಈ ಸಂಬಂಧ ವೀರೇಶ್, ರಶ್ಮಿ, ಕೃಷ್ಣಪ್ಪ, ರಾಜಶೇಖರ್, ರಘು ಸೇರಿ 8 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಹಲವು ವರ್ಷಗಳಿಂದ ಬಿಲ್ಡರ್ ಆಗಿ ಗುರುತಿಸಿಕೊಂಡಿದ್ದ ಅಶೋಕ್ ಶಿವರಾಜ್​ಗೆ ಇದ್ದಕ್ಕಿದ್ದಂತೆ ವ್ಯವಹಾರದಲ್ಲಿ ನಷ್ಟ ಉಂಟಾಗಿತ್ತು. ಈ ವೇಳೆ ವೀರೇಶ್ ಮತ್ತು ರಶ್ಮಿ ಅವರ ಪರಿಚಯವಾಗಿ ವ್ಯವಹಾರದಲ್ಲಿ ಪಾಲುದಾರರಾಗಿದ್ದರು. ಆದರೆ ನಂತರದಲ್ಲಿ ಅಶೋಕ್​ ಅವರ ಆಸ್ತಿ ಕಬಳಿಸಲು ಸಂಚು ಆರೋಪಿಗಳು ರೂಪಿಸಿದ್ದರು. ಆಶೋಕ್​ ಅವರನ್ನು ಕಳೆದ 1 ವರ್ಷದಿಂದ ಬಂಧನದಲ್ಲಿರಿಸಿ ಫ್ಲ್ಯಾಟ್ ಸೇರಿದಂತೆ ಅಕ್ರಮವಾಗಿ ಜಮೀನು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಆರೋಪಿಗಳ ಬಂಧನದಿಂದ ತಪ್ಪಿಸಿಕೊಂಡು ಬಂದ ಅಶೋಕ್ ಅವರು ಪೊಲೀಸರಿಗೆ ದೂರು ನೀಡಿದ್ದರು. ದೂರು ನೀಡಿದ್ದಕ್ಕೆ ಸಿಟ್ಟಿಗೆದ್ದ ಆರೋಪಿಗಳು ಮತ್ತೆ ಅಶೋಕ್ ಶಿವರಾಜ್ ಅವರನ್ನು ಅಪಹರಿಸಿ ಹತ್ಯೆ ಬೆದರಿಕೆ ಹಾಕಿದ್ದಾರೆ. ಈ ವೇಳೆ ಅಶೋಕ್​ ಅವರಿಗೆ ಸಂಬಂಧಿಯೊಬ್ಬರು ನಿರಂತರ ಕರೆ ಮಾಡಿದಾಗ ಸ್ವೀಕರಿಸದಿದ್ದಾಗ ಕೃತ್ಯ ಬಯಲಿಗೆ ಬಂದಿದೆ.

ವಿಚಾರ ತಿಳಿಯುತ್ತಿದ್ದಂತೆ ಅಶೋಕ್ ಅವರ ಸಂಬಂಧಿ ಉಷಾ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರಿಂದ ಅಶೋಕ್ ಅವರ ಫೋನಿಗೆ ಕರೆ ಬಂದಾಗ ಆರೋಪಿಗಳು ವಾಪಸ್​​ ಬಿಟ್ಟು ಹೋಗಿದ್ದಾರೆ. ತನಿಖೆ ನಡೆಸುತ್ತಿರುವ ಪೊಲೀಸರಿಗೆ ದೂರುದಾರ ಅಶೋಕ್ ಶಿವರಾಜ್​ ವಿರುದ್ಧವೂ ಹಲವು ವಂಚನೆ ಪ್ರಕರಣಗಳಿರುವುದು ತಿಳಿದಿದೆ.

ಇದನ್ನೂ ಓದಿ : ಹುಬ್ಬಳ್ಳಿ: ಮನೆಯಲ್ಲಿ ಕೂಡಿ ಹಾಕಿ ಯುವಕನಿಗೆ ಹಲ್ಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.