ETV Bharat / state

High Court News: ಸಾಕ್ಷ್ಯಾಧಾರಗಳಿಲ್ಲದೆ ದೂರು ದಾಖಲಿಸುವುದು ವ್ಯಕ್ತಿಯ ಜೀವನ, ಘನತೆ ಉಲ್ಲಂಘಿಸಿದಂತೆ- ಹೈಕೋರ್ಟ್

author img

By

Published : Jun 13, 2023, 11:01 PM IST

ಆರೋಪಿಸಲಾದ ಅಪರಾಧ ಕೃತ್ಯಕ್ಕೂ ಮತ್ತು ಆರೋಪಿಗೂ ಸಂಬಂಧ ಕಲ್ಪಿಸುವ ಯಾವುದೇ ದಾಖಲೆಗಳಿಲ್ಲದೆ ಯಾವುದೇ ವ್ಯಕ್ತಿ ತನಿಖೆಯನ್ನು ಎದುರಿಸುವಂತಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು : ಅಪರಾಧ ಪ್ರಕರಣಗಳಲ್ಲಿ ಮೇಲ್ನೋಟಕ್ಕೆ ಆರೋಪಗಳನ್ನು ಸಾಬೀತುಪಡಿಸುವಂತಹ ಸಾಕ್ಷ್ಯಗಳಿಲ್ಲದೆ ದೂರು ದಾಖಲಿಸುವಂತಿಲ್ಲ. ಒಂದು ವೇಳೆ ದೂರು ದಾಖಲಿಸಿದರೇ ಅದು ಸಂವಿಧಾನದ 21ನೇ ವಿಯನ್ವಯ ವ್ಯಕ್ತಿಯ ಜೀವನ ಮತ್ತು ಘನತೆಗೆ ಹಾಗೂ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ತಮ್ಮ ವಿರುದ್ಧ ದಾಖಲಾದ ವಂಚನೆ ಪ್ರಕರಣ ರದ್ದು ಕೋರಿ ವಿಪುಲ್ ಪ್ರಕಾಶ್ ಪಾಟೀಲ್ ಎಂಬುವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಷಾನಂದ್ ಅವರಿದ್ದ ಏಕ ಸದಸ್ಯಪೀಠ, ಅರ್ಜಿಯನ್ನು ಪುರಸ್ಕರಿಸಿದ್ದು, ಈ ಆದೇಶ ನೀಡಿದೆ.

ಅಲ್ಲದೆ, ಅರ್ಜಿದಾರರ ವಿರುದ್ಧದ ಹಣಕಾಸು ಸಂಸ್ಥೆಗಳಲ್ಲಿನ ಕರ್ನಾಟಕ ಠೇವಣಿದಾರರ ಹಿತರಕ್ಷಣಾ ಕಾಯಿದೆ ಸೆಕ್ಷನ್ ಹಾಗೂ ಐಪಿಸಿ 420 ಮತ್ತು 406 ರನ್ವಯ ಹೂಡಿದ್ದ ಎಫ್‌ಐಆರ್ ಅನ್ನು ರದ್ದುಗೊಳಿಸಿ ಆದೇಶಿದೆ. ಈ ಪ್ರಕರಣದಲ್ಲಿ, ಪ್ರಕರಣದ ಅರ್ಜಿದಾರರ ಹೆಸರನ್ನು ದೂರುದಾರರು ವಿನಾಕಾರಣ ಪ್ರಸ್ತಾಪಿಸಿದ್ದಾರೆ. ಆದರೆ ಅದಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಗಳನ್ನು ಸಲ್ಲಿಸಿಲ್ಲ. ಹೀಗಿರುವಾಗ ಆಗಿರುವ ಘಟನೆಗೂ ಅರ್ಜಿದಾರರ ನಡುವೆ ಸಂಬಂಧವಿದೆ ಎಂದು ಕಲ್ಪಿಸಲು ಮುಂದಾಗಿದ್ದಾರೆ. ಹಾಗಾಗಿ ಮೇಲ್ನೋಟಕ್ಕೆ ಯಾವುದೇ ಸಾಕ್ಷ್ಯವಿಲ್ಲದೆ ಅರ್ಜಿದಾರರ ವಿರುದ್ಧ ಆರೋಪ ಪ್ರಕರಣ ಮುಂದುವರಿಸುವುದು ಕಾನೂನಿನ ದುರ್ಬಳಕೆ ಆಗಲಿದೆ ಎಂದು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ : High court news: ವೈಯಕ್ತಿಕ ದ್ವೇಷದ ಪ್ರಕರಣಗಳನ್ನು ಕಾನೂನು ಪ್ರಕಾರ ಮುಂದುವರಿಸಲಾಗದು: ಹೈಕೋರ್ಟ್​

ವಿಚಾರಣೆ ವೇಳೆ, ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ, ಅರ್ಜಿದಾರರ ವಿರುದ್ಧ ದಾಖಲೆಗಳು ಅಥವಾ ಸಾಕ್ಷ್ಯವಿಲ್ಲದೆ ದೂರನ್ನು ಪುರಸ್ಕರಿಸಲಾಗಿದೆ. ಅದು ಅನಗತ್ಯವಾಗಿದೆ. ಇದು ಕಾನೂನಿನ ದುರ್ಬಳಕೆ ಮಾತ್ರವಲ್ಲ, ಸಂವಿಧಾನದ 21ನೇ ವಿಧಿಯಡಿಯಲ್ಲಿ ಪ್ರಜೆಗಳಿಗೆ ಲಭ್ಯವಿರುವ ಗೌರವಯುತ ಜೀವನ ನಡೆಸುವ ಹಕ್ಕಿಗೂ ಧಕ್ಕೆ ಆಗಲಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಆರೋಪಿಸಲಾದ ಅಪರಾಧ ಕೃತ್ಯಕ್ಕೂ ಆರೋಪಿಗೂ ಸಂಬಂಧ ಕಲ್ಪಿಸುವ ಯಾವುದೇ ದಾಖಲೆಗಳಿಲ್ಲದೆ ಯಾವುದೇ ವ್ಯಕ್ತಿ ಅಪರಾಧಧ ತನಿಖೆಯನ್ನು ಎದುರಿಸುವಂತಾಗಬಾರದು ಎಂದು ತಿಳಿಸಿರುವ ಪೀಠ, ಅರ್ಜಿದಾರರ ವಿರುದ್ಧದ ಪ್ರಕರಣವನ್ನು ರದ್ದು ಪಡಿಸಿ ಆದೇಶಿಸಿದೆ.

ಪ್ರಕರಣ ಹಿನ್ನೆಲೆ: ಅರ್ಜಿದಾರ ವಿಪುಲ್ ಪ್ರಕಾಶ್ ಪಾಟೀಲ್ ಮತ್ತು ಪಂಕಜ್ ನಾಮ್ ದೇವ್ ಮತ್ತು ಸಂತೋಷ್ ಗಂಗಾರಾಮ್ ಘೋಡ್ಕೆ ಅವರು 1ಲಕ್ಷ ರೂ. ಹಣ ಠೇವಣಿ ಮಾಡಿದರೆ. ಅದನ್ನು 10 ತಿಂಗಳಲ್ಲಿ ವಾಪಸ್ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ನಂತರ ಹಣ ಮರುಪಾವತಿ ಮಾಡದೆ ವಂಚನೆ ಎಸಗಿದ್ದಾರೆಂದು ಶಿವಾನಂದ ಎಂಬುವರು ದೂರು ನೀಡಿದ್ದರು. ಅದನ್ನು ಆಧರಿಸಿ ಚಿಕ್ಕೋಡಿ ಪೊಲೀಸರು ಎಫ್ ಐಆರ್ ದಾಖಲಿಸಿದ್ದರು. ಅದನ್ನು ರದ್ದುಗೊಳಿಸುವಂತೆ ಅರ್ಜಿದಾರರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ : ಲಂಚ ಸ್ವೀಕಾರ ಆರೋಪ: ಕೆಪಿಟಿಸಿಎಲ್ ನೌಕರರ ವಿರುದ್ಧದ ವಿಚಾರಣೆ 2 ತಿಂಗಳಲ್ಲಿ ಪೂರ್ಣಗೊಳಿಸಲು ಹೈಕೋರ್ಟ್ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.