ETV Bharat / state

Omicron ರೂಪಾಂತರಿ ವೈರಸ್​ ಬಗ್ಗೆ ಆತಂಕ ಬೇಡ, ದ.ಆಫ್ರಿಕಾದಲ್ಲೂ ರೋಗ ಲಕ್ಷಣದ ತೀವ್ರತೆ ಇಲ್ಲ.. ಡಾ. ಸತ್ಯನಾರಾಯಣ

author img

By

Published : Nov 30, 2021, 7:49 PM IST

ಒಮಿಕ್ರೋನ್​ನಿಂದ 3ನೇ ಅಲೆ ಸಂಭವಿಸುತ್ತೆ ಅಂತಾ ಆತಂಕ ಪಡುವುದಕ್ಕಿಂತ ಈಗಾಗಲೇ ಇರುವ ಡೆಲ್ಟಾ ವೈರಸ್ ಬಗ್ಗೆ ಹೆಚ್ಚು ಸುರಕ್ಷತೆ ವಹಿಸಬೇಕಿದೆ. ಮುಂಜಾಗ್ರತಾ ಕ್ರಮವಹಿಸಿದರೆ ಒಮಿಕ್ರೋನ್ ಕೂಡ ಏನು ಮಾಡಲಾಗಲ್ಲ. ಹೀಗಾಗಿ, ಸರ್ಕಾರ ನೀಡುವ ಮಾರ್ಗಸೂಚಿಯನ್ನ ಪಾಲಿಸುವಂತೆ ಮನವಿ ಮಾಡಿದರು..

lung-specialist Dr. Satyanarayan
ಶ್ವಾಸಕೋಶ ತಜ್ಞ ಡಾ. ಸತ್ಯನಾರಾಯಣ

ಬೆಂಗಳೂರು : ರೂಪಾಂತರಿ ಕೊರೊನಾ ವೈರಸ್ ಭೀತಿ ಹೆಚ್ಚುತ್ತಿದೆ. ಜನತೆ ಆತಂಕಕ್ಕೆ ಒಳಗಾಗಿದ್ದಾರೆ. ಒಮಿಕ್ರೋನ್ ವೈರಸ್ ಎಲ್ಲರ ನಿದ್ದೆಗೆಡಿಸಿದೆ. ಮೂರನೇ ಅಲೆಗೆ ಇದು ಕಾರಣವಾಗಲಿದ್ಯಾ ಎಂಬ ಅನುಮಾನವನ್ನೂ ಮೂಡಿಸಿದೆ.

ಹೀಗಾಗಿ, ರಾಜ್ಯ ಸರ್ಕಾರ ಸಹ ಸಾಲು ಸಾಲು ಸಭೆಗಳನ್ನ ಮಾಡಿ ತೀವ್ರ ಕಟ್ಟೆಚ್ಚರವಹಿಸಿದೆ. ಅಲ್ಲದೆ ಮಾರ್ಗಸೂಚಿ ಹೊರಡಿಸಿದೆ. ವಿದೇಶದಿಂದ ಬರುವವರ ಮೇಲೆ ಹದ್ದಿನ ಕಣ್ಣಿಡಲಾಗಿದೆ.

ಹೊಸ ರೂಪಾಂತರಿ ವೈರಸ್​ ಕುರಿತು ಶ್ವಾಸಕೋಶ ತಜ್ಞ ಡಾ. ಸತ್ಯನಾರಾಯಣ ಅವರು ಮಾತನಾಡಿರುವುದು..

ಈ ನಡುವೆ ಹೊಸ ಒಮಿಕ್ರೋನ್​ ಲಕ್ಷಣಗಳೇನು, ಹೆಚ್ಚು ಹಾನಿ ಮಾಡುತ್ತಾ, ಭಾರತಕ್ಕೆ ಕಾಲಿಟ್ಟರೆ ಅದುವೇ ಮೂರನೇ ಅಲೆಗೆ ನಾಂದಿ ಹಾಡುತ್ತಾ, ಈಗ ನೀಡಿರುವ ಲಸಿಕೆಯನ್ನೂ ಮೀರಿ ಜನರಿಗೆ ಕಾಡಲಿದ್ಯಾ ಎಂಬಿತ್ಯಾದಿ ಹತ್ತಾರು ಪ್ರಶ್ನೆಗಳು ಕಾಡುತ್ತಿವೆ.

ಈ ಕುರಿತು ಈಟಿವಿ ಭಾರತ್​​ ಜೊತೆ ಮಾತನಾಡಿರುವ ಹಿರಿಯ ಶ್ವಾಸಕೋಶ ತಜ್ಞ ಡಾ.ಸತ್ಯನಾರಾಯಣ, ರೂಪಾಂತರಗೊಂಡಿರುವ ಒಮಿಕ್ರೋನ್​ ವೈರಸ್​​ನಿಂದಾಗಿ ಜನರಲ್ಲಿ ಆತಂಕ ಮೂಡಿದೆ.

ಒಬ್ಬರಿಂದ ಮತ್ತೊಬ್ಬರಿಗೆ ಹರಡಿದಾಗ ವೈರಸ್ ರೂಪಾಂತರವಾಗುವುದು ಸಾಮಾನ್ಯ ಪ್ರಕ್ರಿಯೆ. ಯಾವುದೇ ವೈರಸ್ ಜನರ ಸಂಪರ್ಕಕ್ಕೆ ಬರಬಾರದೆಂದರೆ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಬೇಕು ಎಂದಿದ್ದಾರೆ.

Omicron Virus ಬಗ್ಗೆ ಭಯ ಬೇಡ

ಒಮಿಕ್ರಾನ್ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಯಾಕೆಂದರೆ, ದಕ್ಷಿಣ ಆಫ್ರಿಕಾದಲ್ಲಿ ಪ್ರತಿರೋಧಕ ಶಕ್ತಿ ರಹಿತರಾಗಿರುವವರು ಅಥವಾ ಕಡಿಮೆ ಪ್ರತಿರೋಧಕ ಶಕ್ತಿ ಇರುವ ಜನರಲ್ಲಿ ರೂಪಾಂತರಿ ವೈರಸ್ ಕಾಡುತ್ತಿದೆ. ಅಲ್ಲೂ ಕೂಡ ರೋಗಲಕ್ಷಣದ ತೀವ್ರತೆ ಕಂಡು ಬರುತ್ತಿಲ್ಲ. ಹೀಗಾಗಿ, ಆತಂಕ ಪಡುವ ಅವಶ್ಯಕತೆ ಇಲ್ಲ ಎಂದರು.

ಒಮಿಕ್ರೋನ್​ನಿಂದ 3ನೇ ಅಲೆ ಸಂಭವಿಸುತ್ತೆ ಅಂತಾ ಆತಂಕ ಪಡುವುದಕ್ಕಿಂತ ಈಗಾಗಲೇ ಇರುವ ಡೆಲ್ಟಾ ವೈರಸ್ ಬಗ್ಗೆ ಹೆಚ್ಚು ಸುರಕ್ಷತೆ ವಹಿಸಬೇಕಿದೆ. ಮುಂಜಾಗ್ರತಾ ಕ್ರಮವಹಿಸಿದರೆ ಒಮಿಕ್ರೋನ್ ಕೂಡ ಏನು ಮಾಡಲಾಗಲ್ಲ. ಹೀಗಾಗಿ, ಸರ್ಕಾರ ನೀಡುವ ಮಾರ್ಗಸೂಚಿಯನ್ನ ಪಾಲಿಸುವಂತೆ ಮನವಿ ಮಾಡಿದರು.

ಇದನ್ನೂ ಓದಿ: ಲಾಕ್​​ಡೌನ್ ಬಳಿಕ ರಾಜ್ಯದಲ್ಲಿ ಕಳ್ಳತನ ಪ್ರಕರಣ ಹೆಚ್ಚಳ: ಕೆಲಸ ಕಳ್ಕೊಂಡವರೇ ದುಷ್ಕೃತ್ಯದಲ್ಲಿ ಭಾಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.