ETV Bharat / state

ಸನಾತನ ಧರ್ಮ ಟೀಕೆ ಮಾಡುವುದೇ ಇಂಡಿಯಾ ಮೈತ್ರಿಕೂಟದ ಹಿಡನ್ ಅಜೆಂಡಾ: ಮಾಜಿ ಸಚಿವ ಸುನೀಲ್ ಕುಮಾರ್

author img

By ETV Bharat Karnataka Team

Published : Sep 4, 2023, 2:24 PM IST

ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆ ಖಂಡಿಸಿರುವ ಮಾಜಿ ಸಚಿವ ಸುನೀಲ್ ಕುಮಾರ್, ಇಂಡಿಯಾ ಮೈತ್ರಿಕೂಟದ ದಿಕ್ಕು ಮತ್ತು ಆಲೋಚನೆ ಯಾವ ರೀತಿ ಇದೆ ಎಂದು ಮೊದಲ ಹೇಳಿಕೆಯಿಂದ ಇಂದು ಹೊರ ಬಿದ್ದಿದೆ ಎಂದಿದ್ದಾರೆ.

Ex Ministar SunilKumar
Ex Ministar SunilKumar

ಬೆಂಗಳೂರು : ಉದಯನಿಧಿ ಅಂತವರು ನೂರು ತಲೆಮಾರಿನವರು ಸನಾತನ ಧರ್ಮದ ಬಗ್ಗೆ ಟೀಕೆ ಮಾಡಿದರೆ, ಅದನ್ನು ಜೀರ್ಣಿಸಿಕೊಳ್ಳುವ ಶಕ್ತಿ ಸನಾತನ ಧರ್ಮಕ್ಕೆ ಇದೆ ಎಂದು ಮಾಜಿ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸೂರ್ಯನಿಗೆ ನೂರು ಜನ ಸೇರಿ ಉಗಿದರೆ ಸೂರ್ಯನ ಪ್ರಖರತೆ ಕಡಿಮೆ ಆಗಲ್ಲ. ಸನಾತನ ಧರ್ಮ ನಿತ್ಯ ನೂತನ ಅಮರ. ಯಾರೋ ಮಾತಾಡ್ತಾರೆ ಅಂದರೆ ಅದರ ಪಾವಿತ್ರ್ಯತೆ ಕಡಿಮೆ ಆಗಲ್ಲ. ಆದರೆ, ಕಾಂಗ್ರೆಸ್ ಅವರ ಜೊತೆಗೆ ಮೈತ್ರಿಕೂಟ ಮಾಡಿಕೊಳ್ಳುತ್ತಾ? ಅವರ ಹೇಳಿಕೆ ಸಮರ್ಥನೆ ಮಾಡಿಕೊಳ್ಳುತ್ತಾ? ಎಂದು ಪ್ರಶ್ನಿಸಿದರು.

ಇಂಡಿಯಾ ಮೈತ್ರಿಕೂಟದ ದಿಕ್ಕು ಮತ್ತು ಆಲೋಚನೆ ಯಾವ ರೀತಿ ಇದೆ ಎಂದು ಮೊದಲ ಹೇಳಿಕೆಯಿಂದ ಇಂದು ಹೊರ ಬಿದ್ದಿದೆ. ಡಿಎಂಕೆಯಿಂದ ಆರಂಭವಾಗಿ ಎಲ್ಲಾ ಒಕ್ಕೂಟ ಕೂಡ ಹಿಂದೂ, ಸನಾತನ ಧರ್ಮ ಟೀಕೆ ಮಾಡುವುದೇ ಇದರ ಹಿಡನ್ ಅಜೆಂಡಾ ಎಂದು ಸ್ಪಷ್ಟವಾಗಿದೆ. ಈ ರೀತಿಯ ಹೇಳಿಕೆ ಮೊದಲನೇಲ್ಲ. ಸಿಎಂ ಸಿದ್ದರಾಮಯ್ಯ ಸಹ ಸಮಾಜವಾದದ ಭಾಷಣ ಮಾಡುತ್ತಾ, ಭಾಗ್ಯಲಕ್ಷ್ಮಿ ಬಾಂಡ್ ಚಾಲನೆ ನೀಡುವ ಮೂಲಕ ತಮ್ಮ ಮಗನಿಗೆ ಅಧಿಕಾರ‌ಕೊಡುವ ಕಾರಣಕ್ಕೆ ಮೈಸೂರಿನಲ್ಲಿ ಕಾರ್ಯಕ್ರಮ ಮಾಡಿದ್ದು ನೋಡಿದ್ದೇನೆ ಎಂದು ಕುಟುಕಿದರು.

ಸನಾತನ ಧರ್ಮದ ಬಗ್ಗೆ ಮಾತನಾಡುವವರು ಮನೆಯಲ್ಲಿ ಭಗವಂತನ ಆರಾಧನೆ ಮಾಡ್ತಾರೆ. ಮನೆಯಲ್ಲಿ ಪೂಜೆ, ಹೋಮ ಮಾಡಿಯೇ ಹೊರ ಬರ್ತಾರೆ. ಅವರಿಗೆ ಆತ್ಮ ರಕ್ಷಣೆ ಸಿಗಬೇಕು ಅಂದರೆ ಮನೆಯಲ್ಲಿ ಭಗವಂತನ ಆರಾಧನೆಯಲ್ಲಿ ಮಾಡುತ್ತಾರೆ. ಅಧಿಕಾರ ಬೇಕು ಅಂದಾಗ ಹೊರಬಂದು ಸನಾತನ ಧರ್ಮ ಹೀಯಾಳಿಸುತ್ತಾರೆ. ಭಾಗ್ಯಲಕ್ಷ್ಮೀ ಯೋಜನೆ ಮೊದಲ ಬಾಂಡ್ ಮೈಸೂರಿನ ಚಾಮುಂಡೇಶ್ವರಿ ನೀಡುವ ಮೂಲಕ ಅದರ ಅನುಗ್ರಹ ರಾಜ್ಯ ಸರ್ಕಾರ ಪಡೆದುಕೊಂಡಿದೆ ಎಂದು ಕಿಡಿಕಾರಿದರು.

ಇದನ್ನು ಯಾರು ಸಹಿಸಲ್ಲ, ಒಕ್ಕೂಟದ ಮಾಸಿಕ ಸ್ಥಿತಿ ಅಂತ ಗೊತ್ತಾಗುತ್ತದೆ. ಈ ರೀತಿಯ ಭೇಕಾಬಿಟ್ಟಿ ಹೇಳಿಕೆ ಕೊಡುವುದು ಸಮಾಜ ಮುಂದಿನ ದಿನ ಸಹಿಸಲ್ಲ. ಉದಯನಿಧಿ ಸ್ಟಾಲಿನ್ ಹೇಳಿಕೆ ಅವರ ಕಾಂಗ್ರೆಸ್ ಮೈತ್ರಿ ಕೂಟ ಒಪ್ಪಿಕೊಳ್ಳುತ್ತಾ?. ಎಲ್ಲವನ್ನೂ ಕಾಂಗ್ರೆಸ್ ಹೇಳಬೇಕು ಎಂದು ಸುನೀಲ್ ಕುಮಾರ್ ಸವಾಲು ಹಾಕಿದರು.

ಸನಾತನ ಧರ್ಮವನ್ನು, ಡೆಂಗ್ಯೂ ಮಲೇರಿಯಾಗೆ ಹೊಲಿಸಿದಂತೆ ಇದನ್ನು ಕಾಂಗ್ರೆಸ್ ಸಮರ್ಥನೆ ಮಾಡಿಕೊಳ್ಳುತ್ತಾ? ಕಾಂಗ್ರೆಸ್​ನ ಇವತ್ತಿನ ಸಚಿವರೊಬ್ಬರು ಈ ಹಿಂದೆ ಅಂತಹದ್ದೇ ಹೇಳಿಕೆ ನೀಡಿದ್ದರು. ನಿರಂತರವಾಗಿ ಸನಾತನ ಧರ್ಮದ ಬಗ್ಗೆ ಟೀಕೆ ಮಾಡ್ತಾರೆ. ವೇದಿಕೆ ಮೇಲೆ ಸಮಾನತೆ ಬಗ್ಗೆ ಭಾಷಣ ಮಾಡ್ತಾರೆ. ಅವರ ಕುಟುಂಬವನ್ನು ಬಿಟ್ಟು ಬೇರೆ ಅವರಿಗೆ ಅಧಿಕಾರ ಕೊಡಲು ಯಾರು ತಯಾರಿಲ್ಲ. ಸಮಾನತೆ ಬಗ್ಗೆ ಭಾಷಣ ಮಾಡುತ್ತಾ ಗಾಂಧಿ ಕುಟುಂಬಕ್ಕೆ ಅಧಿಕಾರ ಕೊಡಿಸಲು ಹೊರಟಿದ್ಧಾರೆ. ಸ್ಟಾಲಿನ್ ಈಗ ಉದಯನಿಧಿಗೆ ಅಧಿಕಾರ ಕೊಡಿಸಲು ಹೊರಟಿದ್ದಾರೆ. ಅಧಿಕಾರ ಮಾತ್ರ ತಮ್ಮ ಕುಟುಂಬದಲ್ಲೇ ಇಟ್ಟುಕೊಂಡು ಜನರಿಗೆ ಸಮಾನತೆ ಬಗ್ಗೆ ಭಾಷಣ ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದರು.

ಉಚಿತ ಕೊಡುಗೆಯಿಂದ ಅರ್ಥಿಕ ದಿವಾಳಿ ಎಂಬ ಪ್ರಧಾನಿ ಮೋದಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸುತ್ತಿದ್ದೇವೆ. ವರ್ಷದಿಂದ ವರ್ಷಕ್ಕೆ ಎಲ್ಲರ ಜೀವನ ಮಟ್ಟ ಸುಧಾರಿಸಬೇಕು. ಅದಕ್ಕೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾಗಿದ್ದು ಸರ್ಕಾರಗಳ ಕರ್ತವ್ಯ. ತಾತ್ಕಾಲಿಕ ರಾಜಕೀಯ ಲಾಭಕ್ಕಾಗಿ ಉಚಿತ ಯೋಜನೆ ಕೊಟ್ಟರೆ ಮುಂದಿನ ಭವಿಷ್ಯದಲ್ಲಿ ಪರಿಣಾಮ ವ್ಯತಿರಿಕ್ತ ಆಗುತ್ತದೆ ಎಂದು ಪ್ರಧಾನಿಗಳು ಹೇಳಿದ್ದಾರೆ. ಅದನ್ನು ನಾನು ಸಮರ್ಥನೆ ಮಾಡುತ್ತೇನೆ, ಬೆಂಬಲಿಸುತ್ತೇನೆ ಎಂದರು.

ಯಾವುದೇ ಜನಪ್ರತಿನಿಧಿ ಸರ್ಕಾರ ತಾತ್ಕಾಲಿಕ ಲಾಭದ ಬಗ್ಗೆ ಯೋಜನೆ ಮಾಡಬಾರದು. ಆರ್ಥಿಕ ಸ್ಥಿತಿ ಗತಿ ನೋಡಿಕೊಂಡು ಅರ್ಥಿಕ ಶಿಸ್ತು ಕಾಪಾಡಿಕೊಂಡು, ಭವಿಷ್ಯದ ಜನಾಂಗವನ್ನು ನಿರ್ಮಾಣ ಮಾಡುವ ಯೋಜನೆ ಕೊಡಬೇಕು. ನಮ್ಮ ಬೊಕ್ಕಸದ ಹಣವನ್ನು ಯಾವುದೋ ಬಿಟ್ಟು ಪ್ರಚಾರಕ್ಕೆ ಪಡೆಯಲು ಬಳಸಿಕೊಂಡರೆ, ಭವಿಷ್ಯದಲ್ಲಿ ನಮ್ಮ ಸಮಾಜ ರಕ್ಷಣೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು.

ಇದನ್ನೂ ಓದಿ: Sanatana Dharma: 'ಸನಾತನ ಧರ್ಮ' ಹೇಳಿಕೆಗೆ ನಾನು ಬದ್ಧ, ಯಾವುದೇ ಸವಾಲು ಎದುರಿಸುವೆ: ಉದಯನಿಧಿ ಸ್ಟಾಲಿನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.