ETV Bharat / state

ಸಿದ್ದರಾಮಯ್ಯ ಹುಟ್ಟುಹಬ್ಬ: ಶುಭ ಕೋರಿದ ಸಿಎಂ ಬಿಎಸ್​ವೈ ಟೀಂ​

author img

By

Published : Aug 12, 2020, 8:38 PM IST

ಮಾಜಿ ಮುಖ್ಯಮಂತ್ರಿಗಳು ಹಾಗೂ ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯನವರಿಗೆ ಜನ್ಮದಿನದ ಶುಭಾಶಯಗಳು. ಕೋವಿಡ್ 19 ನಿಂದ ಆದಷ್ಟು ಬೇಗ ಗುಣಮುಖರಾಗಿ ಹೆಚ್ಚಿನ ಜನ ಸೇವೆ ಮಾಡಲು ಆಯುರಾರೋಗ್ಯವನ್ನು ದೇವರು ನೀಡಲಿ ಎಂದು ಸಿಎಂ ಸೇರಿ ಇತರೆ ನಾಯಕರು ಶುಭ ಕೋರಿದ್ದಾರೆ.

Ex CM Siddaramaiah celebrated his 72nd birthday: Wishesh BJP Leadrers
ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು 73ನೇ ವರ್ಷದ ಹುಟ್ಟುಹಬ್ಬದ ಶುಭ ಕೋರಿದ್ದಾರೆ.

Ex CM Siddaramaiah celebrated his 72nd birthday: Wishesh BJP Leadrers
ಸಿಎಂ ಟ್ವೀಟ್​

ಸಿದ್ದರಾಮಯ್ಯನವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ ಎಂದು ಬಿ.ಎಸ್‌.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

Ex CM Siddaramaiah celebrated his 72nd birthday: Wishesh BJP Leadrers
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ

ಭಗವಂತ ತಮ್ಮ ಆಯುರಾರೋಗ್ಯವನ್ನು ಚೆನ್ನಾಗಿಡಲಿ, ಸಾರ್ವಜನಿಕ ಜೀವನದಲ್ಲಿ ತಾವು ಸುದೀರ್ಘವಾಗಿ ಕಾರ್ಯ ನಿರ್ವಹಿಸುವಂತಾಗಲಿ ಪ್ರಾರ್ಥಿಸುವುದಾಗಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಡಿಸಿಎಂ ಗೋವಿಂದ ಕಾರಜೋಳ, ಆರೋಗ್ಯ ಸಚಿವ ಬಿ.ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ಹಲವು ಬಿಜೆಪಿ ಮುಖಂಡರು ಟ್ವೀಟ್ ಮಾಡಿದ್ದಾರೆ.

Ex CM Siddaramaiah celebrated his 72nd birthday: Wishesh BJP Leadrers
ಮಾಜಿ ಸಿಎಂ ಸಿದ್ದರಾಮಯ್ಯ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.