ETV Bharat / state

ಬೆಂಗಳೂರಲ್ಲಿ ಎಲೆಕ್ಟ್ರಿಕ್ ಬಸ್ ಸೇವೆಗೆ ಇಂದು ಸಿಎಂ ಚಾಲನೆ

author img

By

Published : Oct 7, 2022, 12:54 PM IST

ಬೆಂಗಳೂರಲ್ಲಿ ಎಲೆಕ್ಟ್ರಿಕ್ ಬಸ್​​ಗಳಿಗೆ ಇಂದು ಸಿಎಂ ಚಾಲನೆ.

ಬೆಂಗಳೂರಲ್ಲಿ ಇಂದಿನಿಂದ ಎಲೆಕ್ಟ್ರಿಕಲ್ ಬಸ್
ಬೆಂಗಳೂರಲ್ಲಿ ಇಂದಿನಿಂದ ಎಲೆಕ್ಟ್ರಿಕಲ್ ಬಸ್

ಯಲಹಂಕ: ಬೆಂಗಳೂರು ಮಹಾನಗರದಲ್ಲಿ ವಿದ್ಯುತ್ ಚಾಲಿತ ಬಸ್​​ಗಳು ಸಂಚರಿಸಲಿವೆ. ಯಲಹಂಕದಲ್ಲಿ ಇಂದು ವಿದ್ಯುತ್ ಚಾಲಿತ ಬಸ್​​ಗಳಿಗೆ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ವರ್ಚುಯಲ್ ಮೂಲಕ ಚಾಲನೆ ನೀಡಲಿದ್ದಾರೆ.

ಬೆಂಗಳೂರಲ್ಲಿ ಇಂದಿನಿಂದ ಎಲೆಕ್ಟ್ರಿಕಲ್ ಬಸ್
ಬೆಂಗಳೂರಲ್ಲಿ ಇಂದಿನಿಂದ ಎಲೆಕ್ಟ್ರಿಕಲ್ ಬಸ್

ಕರ್ನಾಟಕ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಬಿಎಂಟಿಸಿ, ಪ್ರಯಾಣಿಕರ ಸಂಚಾರಕ್ಕೆ ವಿದ್ಯುತ್ ಚಾಲಿತ ಬಸ್​​ ಸೇವೆಯನ್ನ ನೀಡಲಿದೆ. ಪ್ರಥಮ ಹಂತದಲ್ಲಿ ಯಲಹಂಕದ ಪುಟ್ಟೇನಹಳ್ಳಿಯ ಘಟಕದಿಂದ 30 ರಿಂದ 100 ವಿದ್ಯುತ್ ಚಾಲಿತ ಬಸ್​ಗಳು ಸಂಚಾರ ಮಾಡಲಿವೆ. ವಾಯು ಮಾಲಿನ್ಯ ಮತ್ತು ನಿರ್ವಹಣಾ ವೆಚ್ಚ ಕಡಿಮೆ ಮಾಡುವ ಕಾರಣಕ್ಕೆ ವಿದ್ಯುತ್ ಚಾಲಿತ ಬಸ್​ಗಳನ್ನ ನಗರ ಸಂಚಾರಕ್ಕೆ ಬಳಸಲಾಗುತ್ತಿದೆ. ಕೇಂದ್ರ ಸರ್ಕಾರದ ಭಾರಿ ಕೈಗಾರಿಕಾ ಇಲಾಖೆಯ ಫೇಮ್ -2 ಯೋಜನೆಯಡಿ 300 ಬಸ್​ಗಳು ಬಿಎಂಟಿಸಿಗೆ ಸೇರ್ಪಡೆಯಾಗಲಿವೆ.

ಬೆಂಗಳೂರಲ್ಲಿ ಇಂದಿನಿಂದ ಎಲೆಕ್ಟ್ರಿಕಲ್ ಬಸ್
ಬೆಂಗಳೂರಲ್ಲಿ ಇಂದಿನಿಂದ ಎಲೆಕ್ಟ್ರಿಕಲ್ ಬಸ್

ಎಲೆಕ್ಟ್ರಿಕ್ ಬಸ್​ಗಳು ವಾಯು ಮಾಲಿನ್ಯ ರಹಿತವಾಗಿದ್ದು, ಪರಿಸರ ಸ್ನೇಹಿಯಾಗಿವೆ. ಬಸ್ 12 ಮೀಟರ್ ಉದ್ದ ಇದ್ದು, 41+1 ಸೀಟ್ ಸಾಮರ್ಥ್ಯ ಹೊಂದಿದೆ. ಪ್ರಯಾಣಿಕರ ಸುರಕ್ಷತೆಗಾಗಿ ವೆಹಿಕಲ್ ಟ್ರ್ಯಾಕಿಂಗ್ ಯೂನಿಟ್, ಸಿಸಿಟಿವಿ, ತುರ್ತು ಪ್ಯಾನಿಕ್ ಬಟನ್, ಎಲ್​​ಇಡಿ ಮಾರ್ಗ ಫಲಕಗಳನ್ನ ಅಳವಡಿಸಲಾಗಿದೆ. ಒಮ್ಮೆ ಬಸ್ ಚಾರ್ಜ್ ಆದರೆ 1500 ಕಿ.ಮೀ ಸಂಚರಿಸಲಿದೆ.

(ಓದಿ: ಪೂರ್ಣ ಪ್ರಮಾಣದಲ್ಲಿ ಬಳಕೆಯಾಗದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಸು: ಖರೀದಿಸಿದ್ದು 90 ಬಸ್ಸು, ಓಡ್ತಿರೋದು ಮಾತ್ರ 26)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.